ಇತ್ತೀಚಿನ ಸುದ್ದಿ
ಮಣ್ಣು ತೆಗೆಯುವ ಜೆಸಿಬಿಯಿಂದ ಚರಂಡಿ ತುಂಬಿದ ನೀರು ಎತ್ತುವುದು!!: ಮಂಗಳೂರು ಸ್ಮಾರ್ಟ್ ಸಿಟಿಗೆ ಈ ಬಾರಿ ಪ್ರಶಸ್ತಿ ಗ್ಯಾರಂಟಿ!
13/07/2021, 22:07
ಮಂಗಳೂರು(reporterkarnatakanews): ಮಂಗಳೂರು ಸ್ಮಾರ್ಟ್ ಸಿಟಿ ತಂತ್ರಜ್ಞಾನದಲ್ಲಿ ಎಷ್ಟೊಂದು ಮುಂದುವರಿದಿದೆ ಎನ್ನುವುದಕ್ಕೆ ಇದೊಂದು ತಾಜಾ ನಿದರ್ಶನ. ಮಣ್ಣು ಅಗೆಯುವುದು ಜೆಸಿಬಿಯಿಂದ ಇಲ್ಲಿನ ಎಂಜಿನಿಯರ್ ಹಾಗೂ ಗುತ್ತಿಗೆದಾರರು ಹೊಂಡ, ಚರಂಡಿಯಲ್ಲಿ ನಿಂತ ಮಳೆ ನೀರನ್ನು ತೆಗೆಯುತ್ತಾರೆ!
ನಗರದ ಸ್ಟೇಟ್ ಬ್ಯಾಂಕ್ ಬಳಿಯ ರಸ್ತೆಗೆ ಒಳಚರಂಡಿ ನಿರ್ಮಿಸುವ ಕಾರ್ಯ ತಿಂಗಳುಗಟ್ಟಲೆಯಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಕಳೆದ ಮೂರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸ್ಮಾರ್ಟ್ ಸಿಟಿಯಡಿ ಅಗೆದು ಹಾಕಿದ ಹೊಂಡಗಳಲ್ಲಿ ಕೆಸರು ನೀರು ತುಂಬಿದೆ. ಕಳೆದ ಕೆಲವು ದಿನಗಳಿಂದ ಚರಂಡಿ ತುಂಬಿದ ನೀರನ್ನು ಜೆಸಿಬಿ ಮೂಲಕ ಖಾಲಿ ಮಾಡುವ ಕೆಲಸ ನಡೆಯುತ್ತಿದೆ. ಆದರೆ ಜೆಸಿಬಿ ಮೂಲಕ ಎತ್ತಿ ಅಲ್ಲೇ ಬದಿಗೆ ಸುರಿಯುವ ನೀರು ಮತ್ತೆ ಅದೇ ಚರಂಡಿ ಸೇರುತ್ತಿದೆ. ಆಧುನಿಕ ತಂತ್ರಜ್ಞಾನ ಬಳಕೆಗೆ ಈ ಬಾರಿ ಮಂಗಳೂರು ಸ್ಮಾರ್ಟ್ ಸಿಟಿಗೆ ಪ್ರಶಸ್ತಿ ಗ್ಯಾರಂಟಿ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.