7:47 AM Wednesday5 - February 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಸರಕಾರದಿಂದ ರಾಜ್ಯ ಸೂತಕದ ಮನೆಯಾಗಿದೆ: ಹಾಸನದಲ್ಲಿ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಟೀಕೆ ರೈತರ ಖಾತೆಗೆ 48 ತಾಸಲ್ಲೇ ಬೆಂಬಲ ಬೆಲೆ ನೇರ ಜಮೆ; ಸಂಸತ್ ನಲ್ಲಿ… ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ ಉದ್ಯಮಕ್ಕೆ ಸಹಕಾರ: ಕೇಂದ್ರ ಸಚಿವ ಕುಮಾರಸ್ವಾಮಿ DUO ಬ್ಲಾಕ್ ವಾಟರ್ ಸಾಫ್ಟನರ್: ಯುರಾಕ್ವಾ ಜತೆ ಕ್ರಿಸ್ಟಲ್ ಪ್ರೈವೇಟ್ ಲಿಮಿಟೆಡ್ ಪಾಲುದಾರಿಕೆ ನಾನು ಸ್ಪೀಕರ್, ನನಗೆ ನಾನೇ ಕಮಾಂಡರ್ ಎಂದ ಯು.ಟಿ. ಖಾದರ್ ವಿಧಾನಸೌಧದಲ್ಲಿ ಶ್ವಾನಗಳ… ಆರೋಗ್ಯಕರ ಸಮಾಜ ಕಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ: ಸಮುದಾಯ ಆರೋಗ್ಯಾಧಿಕಾರಿಗಳಿಗೆ ಸಿಎಂ ಕರೆ ನಂಜನಗೂಡು: ಸಾಲ ತೀರಿಸದ ಸ್ನೇಹಿತ; ಮನನೊಂದು ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಭಾರೀ ಗಾಳಿಗೆ ರಸ್ತೆಗೆ ಬಿದ್ದ ಬೃಹತ್ ಮರ; ಚಿಕ್ಕಮಗಳೂರು-ಶೃಂಗೇರಿ ರಸ್ತೆ ಸಂಚಾರ ಅಸ್ತವ್ಯಸ್ತ;… ಅನಗತ್ಯ ವೆಚ್ಚ, ಲೂಟಿಗೆ ಕಡಿವಾಣ ಹಾಕಿ ಅತ್ಯಧಿಕ ಗಾತ್ರದ ಬಜೆಟ್‌ ಮಂಡಿಸಿದ ಕೇಂದ್ರ… ಸಾಲಬಾಧೆ: ಮನನೊಂದ ಯುವಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಇತ್ತೀಚಿನ ಸುದ್ದಿ

ಮಣ್ಣಗುಡ್ಡೆ ದಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ: ವಿವೇಕ ಶಾಲಾ ಯೋಜನೆಯಡಿ 3 ನೂತನ ತರಗತಿ ಕೊಠಡಿಗಳ ಉದ್ಘಾಟನೆ

04/02/2025, 00:01

ಮಂಗಳೂರು(reporterkarnataka.com): ನಗರದ ಮಣ್ಣಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಿವೇಕ ಶಾಲಾ ಯೋಜನೆಯಡಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಮೂರು ನೂತನ ತರಗತಿ ಕೊಠಡಿಗಳನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇದು 2022-23 ನೇ ಸಾಲಿನ ರಾಜ್ಯ ವಲಯ ಮುಂದುವರಿದ ಯೋಜನೆಯ ಸರ್ಕಾರಿ ಪ್ರಾಥಮಿಕ- ಪ್ರೌಢ ಶಾಲೆಗಳಿಗೆ ಕೊಠಡಿಗಳ ನಿರ್ಮಾಣ ಕಾಮಗಾರಿಯ ಕ್ರಿಯಾ ಯೋಜನೆಯಾಗಿದ್ದು, ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೀಗ ಅವೆಲ್ಲವೂ ಹಂತ ಹಂತವಾಗಿ ಅನುಷ್ಠಾನಕ್ಕೆ ಬರುತ್ತಿದ್ದು ಸರ್ಕಾರಿ ಶಾಲೆಗಳು ಇನ್ನಷ್ಟು ಅಭಿವೃದ್ಧಿ ಆಗಬೇಕು ಎಂದು ಹೇಳಿದರು.
ಪಾಲಿಕೆ ಸದಸ್ಯೆ ಸಂಧ್ಯಾ ಮೋಹನ್ ಆಚಾರ್ಯ, ಡಾ.ಕಿಶೋರ್ ಕುಮಾರ್, ಜೇಮ್ಸ್ ಕುಟಿನ್ಹಾ, ವೇದಾವತಿ ರಾವ್, ಮಹಮ್ಮದ್ ಸಿಕಂದರ್, ಕೃಷ್ಣ ಹೆಗ್ಡೆ, ಸುರೇಶ್ಚಂದ್ರ ಶೆಟ್ಟಿ, ಮುಕೇಶ್, ಆಶ್ರಯ ಭಂಡಾರಿ, ಉಮೇಶ್ ಗಟ್ಟಿ, ಮೇಘ ಗೋಕುಲ್, ಆಶಾ ನಾಗರಾಜ್, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿಗಳು, ಹಳೆ ವಿದ್ಯಾರ್ಥಿ ಸಂಘದವರ ಸಹಿತ ಅನೇಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು