ಇತ್ತೀಚಿನ ಸುದ್ದಿ
ಮಣಿಪುರ ಸೇನಾ ಕ್ಯಾಂಪ್‌ನಲ್ಲಿ ಭಾರೀ ಭೂಕುಸಿತ: 50ಕ್ಕೂ ಹೆಚ್ಚು ಯೋಧರು ನಾಪತ್ತೆ; ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ
01/07/2022, 11:48
ಇಂಫಾಲ್ (reporterkarnataka.com): ಅಸ್ಸಾಂನಲ್ಲಿ ಭಾರೀ ಪ್ರವಾಹದ ಬೆನ್ನಲ್ಲೇ ನೆರೆಯ ಮಣಿಪುರದ ನೋನಿ ಜಿಲ್ಲೆಯಲ್ಲಿ ಭಾರತೀಯ ಸೇನೆಯ 107 ಟೆರಿಟೋರಿಯಲ್ ಆರ್ಮಿ ಕಂಪನಿಯು ಬುಧವಾರ ಮಧ್ಯರಾತ್ರಿ ತುಪುಲ್ ರೈಲು ನಿಲ್ದಾಣದ ಬಳಿ ನಿಯೋಜಿಸಲಾದ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, 50ಕ್ಕೂ ಹೆಚ್ಚು ಯೋಧರು ಮಣ್ಣಿನಡಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ತಕ್ಷಣ ನಡೆಸಿದ ಕಾರ್ಯಾಚರಣೆಯಲ್ಲಿ ಇದುವರೆಗೆ.13 ಮಂದಿಯನ್ನು ಜೀವಂತವಾಗಿ ಹೊರ ತೆಗೆಯಲಾಗಿದೆ. ಇಬ್ಬರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ.
ಮಣಿಪುರದ ರಾಜಭವನದಿಂದ ಬಿಡುಗಡೆಯಾದ ಪತ್ರಿಕಾ ಪ್ರಕಟಣೆಯ ಪ್ರಕಾರ, ಘಟನೆಯ ಸ್ಥಳದಿಂದ ಯಾವುದೇ ಸಾವುನೋವುಗಳು ವರದಿಯಾಗಿಲ್ಲ, ಆದರೆ ಡಜನ್‌ಗಟ್ಟಲೆ ಜನರು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗಿದೆ.
ಭೂಕುಸಿತ ಸಂಭವಿಸಿದ ಸೇನಾ ತುಕಡಿಯನ್ನು ತುಪುಲ್ ಯಾರ್ಡ್ ರೈಲ್ವೇ ಕನ್‌ಸ್ಟ್ರಕ್ಷನ್ ಕ್ಯಾಂಪ್ ಜಿರಿಬಾಮ್‌ನಲ್ಲಿ ರೈಲು ಮಾರ್ಗದ ರಕ್ಷಣೆಗೆ ನಿಯೋಜಿಸಲಾಗಿತ್ತು.
ಮುಂಜಾನೆ 5.30ರ ಸುಮಾರಿಗೆ 13 ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ನೋನಿ ಸೇನಾ ವೈದ್ಯಕೀಯ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಕ್ಷಣಾ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಸುಮಿತ್ ಕೆ ಶರ್ಮಾ ತಿಳಿಸಿದ್ದಾರೆ.
ತಾಜಾ ಭೂಕುಸಿತಗಳು ಮತ್ತು ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಪಡಿಸಿದೆ, ಆದರೂ ಕಾಣೆಯಾದವರನ್ನು ರಕ್ಷಿಸಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಹವಾಮಾನ ಸ್ಪಷ್ಟವಾಗಲು ಸೇನಾ ಹೆಲಿಕಾಪ್ಟರ್‌ಗಳು ಸ್ಟ್ಯಾಂಡ್‌ಬೈನಲ್ಲಿ ಕಾಯುತ್ತಿವೆ. ರಸ್ತೆ ತಡೆಯಿಂದಾಗಿ ಜನರು NH 37 ಅನ್ನು ತಪ್ಪಿಸಲು ಸೂಚಿಸಲಾಗಿದೆ.