ಇತ್ತೀಚಿನ ಸುದ್ದಿ
ಮಂಗಳೂರು ವಿಮಾನ ದುರಂತಕ್ಕೆ 11 ವರ್ಷ: ಮುಂಜಾನೆ 6.14ಕ್ಕೆ 159 ಮಂದಿಯ ಪ್ರಾಣಪಕ್ಷಿ ಕ್ಷಣಾರ್ಧದಲ್ಲಿ ಗಾಳಿಯಲ್ಲಿ ಲೀನವಾಗಿತ್ತು!
22/05/2021, 10:22
ಮಂಗಳೂರು(reporterkarnataka news):
ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 11 ವರ್ಷ. ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತಕ್ಕೀಡಾಗಿತ್ತು. ಬಹಳ ದುಃಖಕರ ವಿಷಯವೆಂದರೆ ವಿಮಾನ ನಿಲ್ದಾಣದಲ್ಲೇ ದುರಂತ ಸಂಭವಿಸಿತ್ತು. ಪ್ರಯಾಣಿಕರು ಇನ್ನೇನು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಈ ಘೋರ ದುರಂತ ಸಂಭವಿಸಿಯೇ ಬಿಟ್ಟಿತು.
ದುರಂತದಲ್ಲಿ 159 ಮಂದಿಯ ಪ್ರಾಣ ಕ್ಷಣಾರ್ಧದಲ್ಲಿ ಹಾರಿ ಹೋಯಿತು. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದರು. ಪೈಲಟ್ ಮಾಡಿದ ಒಂದು ಸಣ್ಣ ತಪ್ಪಿನಿಂದ ಈ ಭೀಕರ ಅಪಘಾತ ವಿಶ್ವದ ಚರಿತ್ರೆ ಸೇರುವಂತಾಯಿತು.