ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಕ್ಯಾರಟ್ ಲೇನ್ -ತನಿಷ್ಕ್ ಪಾಲುದಾರಿಕೆಯ 156ನೇ ಆಭರಣ ಮಳಿಗೆ ಆರಂಭ
19/11/2022, 23:57

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಭಾರತದ ಪ್ರಮುಖ ಓಮ್ನಿ -ಚ್ಯಾನೆಲ್ ಜ್ಯುವೆಲ್ಲರಿ ಬ್ರ್ಯಾಂಡ್ ಕ್ಯಾರಟ್ ಲೇನ್ ತನಿಷ್ಕ್ ಪಾಲುದಾರಿಕೆ ಯೊಂದಿಗೆ ತನ್ನ ಮೊದಲ ಮಳಿಗೆಯನ್ನು ನಗರದ ಬಿಜೈಯಲ್ಲಿ ಇಂದು ಪ್ರಾರಂಭಿಸಿದೆ.
ಗ್ರಾಹಕರಾಗಿ ಆಗಮಿಸಿದ ಅತಿಥಿ ಯೆನೆಪೋಯ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಡಾ.ಶಿಲ್ಪಿ ರಸ್ತೋಗಿ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಗ್ರಾಹಕಿ ಯುಎಸ್ ಎ ಖಾಸಗಿ ಸಂಸ್ಥೆಯ ವ್ಯವಸ್ಥಾಪಕಿ ಅನಿಶಾ ಸಲ್ದಾನ ಆಭರಣ ಪ್ರದರ್ಶನ ವನ್ನು ಉದ್ಘಾಟಿಸಿದರು.
ಗ್ರಾಹಕರರಾದ ಕೆಎಂಸಿ ಫಿಸಿಯೋಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೇಘಾ, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ರಂಜಿತಾ ಆಚಾರ್ಯ , ಗ್ರಾಹಕರಾದ ದಿವ್ಯ ಡಿ.ಸೋಜ,
ಲಾರೆಲ್ ಜ್ಯೋತಿ ಡಿ ಸೋಜ,ಪತ್ರಾವೋ, ಮೋನಾ ಪತ್ರಾವೋ ದೀಪ ಬೆಳಗಿಸಿ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು.
ಕ್ಯಾರಟ್ ಲೇನ್ ನ ಉಪಾಧ್ಯಕ್ಷ ರಾದ ಜೆನ್ನಿಫರ್ ಪಾಂಡ್ಯ ಮಾತನಾಡಿ, ಮಂಗಳೂರಿನಲ್ಲಿ ನಮ್ಮ ಪ್ರಥಮ ಮಳಿಗೆಯನ್ನು ಆರಂಭಿಸಲು ಸಂತೋಷ ವಾಗುತ್ತದೆ. ಇದು ಭಾರತದ 156ನೇ ಮಳಿಗೆ ಮತ್ತು ದಕ್ಷಿಣ ಭಾರತದ 45ನೇ ಮಳಿಗೆಯಾ ಗಿದೆ. ಸುಮಾರು ಒಂದು ಮಿಲಿಯನ್ ಗ್ರಾಹಕರನ್ನು ಸಂಸ್ಥೆ ಹೊಂದಿದೆ. ವಜ್ರಾಭರಣ ಖರೀದಿಯಲ್ಲಿ ಗ್ರಾಹಕರಿಗೆ ಶೇ. 20 ರಿಯಾಯಿತಿ ದೊರೆಯಲಿದೆ. ಗ್ರಾಹಕರು ಈ ಮಳಿಗೆಯ ಮೂಲಕ ಕ್ಯಾರಟ್ ಲೇನ್ ನ ಸಾಂಪ್ರದಾಯಿಕ ಆಭರಣಗಳನ್ನು ಮೊಗ್ರಾ ಬ್ರ್ಯಾಂಡ್ ಆಭರಣಗಳು,ರಿಂಗ್, ಆಧುನಿಕ ಮಂಗಳ ಸೂತ್ರ ಗಳನ್ನು ಸಾಕಷ್ಟು ಆಯ್ಕೆ ಯೊಂದಿಗೆ ಮಂಗಳೂರಿನಲ್ಲಿ ಖರೀದಿಸಬಹುದು ಎಂದರು.
ಇದರಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಪ್ರತಿನಿತ್ಯ ಬಳಸುವಂತಹ ಮಂಗಳಸೂತ್ರ, ಕಿವಿಯೋಲೆ ಹಾಗೂ ಉಂಗುರುಗಳು ಹೆಚ್ಚಾಗಿದ್ದು, ಇದರೊಂದಿಗೆ ಕಾರ್ಯಕ್ರಮಗಳಿಗೆ ಉಡುಗೊರೆ ನೀಡಲು ಬಳಸುವಂತಹ ಮಕ್ಕಳಿಂದ ವೃದ್ದರೊರೆಗೆ ಎಲ್ಲ ತರದ ವಜ್ರದ ಆಭರಣಗಳು ಲಭ್ಯವಿದೆ ಎಂದು ಜೆನ್ನಿಫರ್ ಪಾಂಡ್ಯ ತಿಳಿಸಿದರು.
ಈ ಮಳಿಗೆಯಲ್ಲಿ 50 ಸಾವಿಕ್ಕಿಂತ ಕಡಿಮೆಯ ಆಭರಣಗಳು ಸಿಗಲಿದ್ದು, ಜನರು ಹೆಚ್ಚು ಕ್ಯಾರೆಟ್‌ನ ಆಭರಣಗಳನ್ನು ಕೊಂಡುಕೊಂಡಲ್ಲಿ ಅದರಲ್ಲಿ ರಿಯಾಯಿತಿಯನ್ನು ನೀಡಲಾಗುವುದು ಎಂದರು.
ಕ್ಯಾರಟ್ ಲೇನ್ ಪ್ರತಿನಿಧಿ ರಾಧಿಕಾ ಮೆಕ್ ಗ್ರೆಗರ್ ಮಾತನಾಡಿ, ನಮ್ಮಲ್ಲಿ ಶೇ. 50ರಷ್ಟು ಗ್ರಾಹಕರು ಉಡುಗೊರೆ ನೀಡಲು ಖರೀದಿಸುತ್ತಾರೆ. 5000 ರೂ.ನಿಂದ ಪ್ರಾರಂಭವಾಗುವ ಆಕರ್ಷಕ ಆಭರಣಗಳ ಸಂಗ್ರಹವಿದೆ ಎಂದರು.
ಕ್ಯಾರಟ್ ಲೇನ್ ರೀಜನಲ್ ಮ್ಯಾನೇಜರ್ ಕೇಶವ,ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್ ಅಮೃತ್, ರೀಜನಲ್ ವರ್ಚುವಲ್ ಮ್ಯಾನೇಜರ್ ಸಂಮೃದ್ಧಿ, ಝಿಜಾ ಖಾದರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಉದ್ಯಮ ಪಾಲುದಾರರಾದ ಅಬ್ದುಲ್ ಖಾದರ್ ಹಾರೂನ್, ಇಸ್ಮಾಯಿಲ್ ಹಾರೂನ್,ರಫೀಕ್ ಹಾರೂನ್ ಅತಿಥಿ ಗಳನ್ನು ಸ್ವಾಗತಿಸಿದರು.