ಇತ್ತೀಚಿನ ಸುದ್ದಿ
Mangaluru | ವೈಸಿಎಸ್ ಕ್ರಿಕೆಟ್: ಪಾಲ್ದನೆ ಚರ್ಚ್ ತಂಡಕ್ಕೆ ದ್ವಿತೀಯ ಸ್ಥಾನ
23/10/2025, 20:45

ಮಂಗಳೂರು(reporterkarnataka.com): ನೀರುಮಾರ್ಗದಲ್ಲಿ ನಡೆದ ಮಂಗಳೂರು ಧರ್ಮ ಪ್ರಾಂತ್ಯದ ಸಿಟಿ ವಲಯದ 12 ಚರ್ಚ್ ಗಳ ವೈ.ಸಿ.ಎಸ್. ಸದಸ್ಯರ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ದನೆ ಚರ್ಚ್ ತಂಡ ದ್ವಿತೀಯ ಸ್ಥಾನವನ್ನು ಗೆದ್ದು ಕೊಂಡಿದೆ.
ರೋಚಕ ಫೈನಲ್ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಆತಿಥೇಯ ನೀರುಮಾರ್ಗ ಚರ್ಚ್ ತಂಡ ಪ್ರಥಮ ಸ್ಥಾನ ಗೆದ್ದುಕೊಂಡಿತು.
ಪಾಲ್ದನೆ ಚರ್ಚ್ ತಂಡದಲ್ಲಿ ಸದಸ್ಯರಾದ ಲೀರೋನ್, ಜೋವಿನ್, ಮಾರ್ಕ್, ಮಿಲ್ ಟನ್, ಐನೀಶ್ ರಾವುಲ್ , ಎಲ್ ಡನ್, ಆನ್ ವಿತಾ, ಶರ್ಲಿ ಅವರು ಭಾಗವಹಿಸಿದ್ದರು. ಲೀರೋನ್ ಅವರು ಮ್ಯಾನ್ ಆಫ್ ದ ಮ್ಯಾಚ್ ಮತ್ತು ಐನೀಶ್ ಅವರು ಮ್ಯಾನ್ ಆಫ್ ದ ಟೂರ್ನಮೆಂಟ್ ಪ್ರಶಸ್ತಿ ಪಡೆದರು.
ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಆಟಗಾರರನ್ನು ಅಭಿನಂದಿಸಿದರು. ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ವೈ.ಸಿ.ಎಸ್. ಸಂಚಾಲಕಿ ಸಿ. ದೊರೊತಿ ಮತ್ತು ಇತರರು ಉಪಸ್ಥಿತರಿದ್ದು ಶುಭ ಹಾರೈಸಿದರು.