ಇತ್ತೀಚಿನ ಸುದ್ದಿ
Mangaluru | ಕಡಲನಗರಿ ಕುಡ್ಲದ ತಣ್ಣೀರುಬಾವಿಯಲ್ಲಿ ಜನವರಿ 9ರಿಂದ ಟ್ರಯಥ್ಲಾನ್
03/01/2026, 13:16
ಮಂಗಳೂರು(reporterkarnataka.com): ಕರಾವಳಿ ಉತ್ಸವದ ಅಂಗವಾಗಿ ತಪಸ್ಯಾ ಫೌಂಡೇಶನ್ ವತಿಯಿಂದ ಮಂಗಳೂರು ಬೀಚ್ ಉತ್ಸವ ಮತ್ತು ಮಂಗಳೂರು ಟ್ರಯಥ್ಲಾನ್ 2026 ಜನವರಿ 9 ರಿಂದ 11 ರವರೆಗೆ ತಣ್ಣೀರುಬಾವಿ ಬೀಚ್‍ನಲ್ಲಿ ಆಯೋಜಿಸಲಾಗುತ್ತಿದೆ. ಮೂಲಭೂತ ಸೌಕರ್ಯಗಳು, ವೈದ್ಯಕೀಯ ಸಹಾಯ ವಿದ್ಯುತ್, ಸಂಚಾರ ನಿರ್ವಹಣೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಮಂಗಳೂರು ಸಹಾಯಕ ಆಯುಕ್ತೆ ಮೀನಾಕ್ಷಿ ಆರ್ಯ ತಿಳಿಸಿದ್ದಾರೆ.
ಅವರು ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಟ್ರಯಥ್ಲಾನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ ಕ್ರಮವಹಿಸಬೇಕು.

ಕಡಲತೀರಗಳನ್ನು ಸುಂದರವಾಗಿರಿಸಲು ಸ್ವಚ್ಛತೆ ಕಾಪಾಡಲು ಅಗತ್ಯ ಕ್ರಮವಹಿಸಲು ಅವರು ಸೂಚಿಸಿದರು. ಉತ್ಸವ ಯಶಸ್ವಿಯಾಗಲು ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ನಡೆಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ, ತಪಸ್ಯಾ ಫೌಂಡೇಶನ್ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.












