ಇತ್ತೀಚಿನ ಸುದ್ದಿ
Mangaluru | ಸಾಹಿತ್ಯದ ಶಕ್ತಿಗೆ ಪರ್ಯಾಯವಿಲ್ಲ: ಪುಸ್ತಕ ಪ್ರದರ್ಶನ ಉದ್ಘಾಟಿಸಿ ಡಾ. ಮಹಾಲಿಂಗ ಭಟ್
12/08/2025, 20:14

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಭಾರತ ಭೂಖಂಡದಲ್ಲಿ ಸಾವಿರಾರು ಭಾಷೆ – ಸಾಹಿತ್ಯ – ಸಂಸ್ಕೃತಿಗಳಿಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪುಸ್ತಕ ಮಾತ್ರವಲ್ಲ ಮೌಖಿಕ ಸಾಹಿತ್ಯವೂ ಇದೆ.
ಸಾಹಿತ್ಯದ ಶಕ್ತಿಗೆ ಬೇರೆ ಪರ್ಯಾಯ ಇಲ್ಲ ಎಂದು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಭಾಷಾ ನಿಖಾಯದ ಮುಖ್ಯಸ್ಥ ಪ್ರೊ| ಡಾ| ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು.
ಕೊಂಕಣಿ ಸಾಹಿತಿ ವಿ.ಜೆ.ಪಿ. ಸಲ್ಡಾನ್ಹಾ ಜನ್ಮಶತಾಬ್ದಿಯ ಸಲುವಾಗಿ ಹೊಸದಿಲ್ಲಿ ಸಾಹಿತ್ಯ ಅಕಾಡೆಮಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ, ವಿಶನ್ ಕೊಂಕಣಿ ಹಮ್ಮಿಕೊಂಡಿರುವ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಅಂಗವಾಗಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಿರುವ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.
ವಿಶ್ವದಾದ್ಯಂತ ದೇಶವೊಂದಕ್ಕೆ ಒಂದೇ ಭಾಷೆಯಿರುವಾಗ ಭಾರತ ಭೂಖಂಡದಲ್ಲಿ ಸಾವಿರಾರು ಭಾಷೆ – ಸಾಹಿತ್ಯ – ಸಂಸ್ಕೃತಿಗಳಿಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪುಸ್ತಕ ಮಾತ್ರವಲ್ಲ ಮೌಖಿಕ ಸಾಹಿತ್ಯವೂ ಇದೆ. ಇಪ್ಪತನಾಲ್ಕು ಭಾಷೆಗಳಲ್ಲಿನ ಉತ್ತಮ ಸಾಹಿತ್ಯ ಗುರುತಿಸಿ ಪ್ರಕಟಿಸುವುದು, ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದ ಮಾಡಿ ಪ್ರಕಟಿಸುವುದು ಸುಲಭದ ಕೆಲಸವಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯಿ ಇದನ್ನು ಹಲವಾರು ದಶಕಗಳಿಂದ ಮಾಡುತ್ತಾ ಬಂದಿದೆ. ಭಾರತೀಯ ಸಾಹಿತ್ಯದ ನಿರ್ಮಾತೃರು ಎಂಬ ಸರಣಿ ಪುಸ್ತಕಗಳನ್ನು ಓದಿದರೆ ಕಾಲಮಾನದ ಆಚೆಗಿನ ಸಾಮಾಜಿಕ ಪರಿಸ್ಥಿತಿಗಳನ್ನು ಯೋಚಿಸಲು ಸಾಧ್ಯವಾಗುತ್ತದೆ. ಸಾಹಿತ್ಯದ ಶಕ್ತಿಗೆ ಬೇರೆ ಪರ್ಯಾಯ ಇಲ್ಲ” ಎಂದು ಅವರು ಅಭಿಪ್ರಾಯಪಟ್ಟರು.
ಹೊಸದೆಹಲಿ ಸಾಹಿತ್ಯ ಅಕಾಡೆಮಿ, ಕೊಂಕಣಿ ಭಾಷಾ ಸಮಿತಿಯ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾಷಾ ಸಲಹಾ ಸಮಿತಿ ಸದಸ್ಯ ಎಚ್. ಎಮ್. ಪೆರ್ನಾಲ್ ನಿರೂಪಿಸಿ, ವಂದಿಸಿದರು.
ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಾದೇಶಿಕ ಸಮಿತಿಯ ರಂಗನಾಥ್, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ, ಕೊಂಕಣಿ ಸಂಸ್ಥೆ ಕಾರ್ಯಕ್ರಮ ಸಂಯೋಜಕ ಜೋಕಿಮ್ ಪಿಂಟೊ, ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಲಹಾ ಸಮಿತಿ ಸದಸ್ಯ ಸ್ಟೇನಿ, ಬೆಳಾ ಉಪಸ್ಥಿತರಿದ್ದರು.
ಮಂಗಳವಾರ ಆಗಸ್ಟ್ 12 ರಿಂದ ಗುರುವಾರ 14 ರ ವರೆಗೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರ ವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ವಿಶೇಷ ರಿಯಾಯತಿ ದರದಲ್ಲಿ ಪುಸ್ತಕಗಳು ಮಾರಾಟಕ್ಕಿವೆ. ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ, ಸಂಘ – ಸಂಸ್ಥೆಗಳ ಗ್ರಂಥಾಲಯಗಳಿಗೆ ವಿಶೇಷ ರಿಯಾಯತಿ ಇದೆ. ಕನ್ನಡ, ಕೊಂಕಣಿ, ಮಲಯಾಳಮ್, ಇಂಗ್ಲಿಶ್, ಹಿಂದಿ, ಮರಾಟಿ ಹೀಗೆ ಆರು ಭಾಷೆಗಳ 350 ಕ್ಕೂ ಹೆಚ್ಚು ಟೈಟಲ್ ಗಳು ಮಾರಾಟಕ್ಕಿವೆ.
*Indian Literature’s Timeless Power Highlighted at Book Exhibition*
Mangalore, August 12, 2025 – “The power of literature has no parallel,” opined Dr. Mahaling Bhat, Dean, Language Department at St. Aloysius Deemed University, during the inauguration of a book exhibition organized by Sahitya Akademi, New Delhi, in collaboration with St. Aloysius Deemed University’s Konkani Institute and Vision Konkani. The event, held at the Sahodaya Auditorium, marks the centenary celebration of Konkani litterateur V.J.P. Saldanha and is part of a two-day national seminar.
Dr. Bhat emphasized India’s rich linguistic and literary heritage, noting that while many countries have a single dominant language, India boasts thousands of languages, literatures, and cultures with over two millennia of history. “Beyond written books, India’s oral literary traditions are profound. Recognizing and publishing quality literature in 24 languages, and translating works across these languages, is no easy task. Yet, Sahitya Akademi has been doing this for decades,” he said. He added that reading Sahitya Akademi’s series on Indian literary pioneers offers insights into historical social conditions, underscoring literature’s unparalleled influence.
The exhibition was inaugurated with opening remarks from poet Melvyn Rodrigues, Convenor, Konkani Language Advisory Board, Sahitya Akademi, New Delhi , who delivered the introductory address. The event was moderated by H.M. Pernal, a member of the Konkani Language Advisory Board, Sahitya Akademi, New Delhi who also offered a vote of thanks. Notable attendees included Ranganath from Sahitya Akademi’s Bengaluru Regional Office , Joachim Pinto, program coordinator from St. Aloysius Deemed University’s Konkani Institute, and Stany, Bela member of Konkani Language Advisory Board, Sahitya Akademi, New Delhi.
The book exhibition and sale, running from August 12 to August 14 at St. Aloysius College’s Sahodaya Auditorium, is open daily from 10:00 AM to 6:00 PM. Books are available at special discounted rates, with additional concessions for students, educational institutions, and libraries of organizations. Over 350 titles in six languages—Kannada, Konkani, Malayalam, English, Hindi, and Marathi—are available for sale.