7:46 PM Monday25 - August 2025
ಬ್ರೇಕಿಂಗ್ ನ್ಯೂಸ್
Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಇತ್ತೀಚಿನ ಸುದ್ದಿ

Mangaluru | ಬಜಪೆಯಲ್ಲಿ ಎಸ್ಯಾಸಾಫ್ಟ್ ನಿಂದ ಅತ್ಯಾಧುನಿಕ ಕಲಿಕೆ ಮತ್ತು ಅಭಿವೃದ್ಧಿ ಕೇಂದ್ರ

25/08/2025, 17:37

ಮಂಗಳೂರು(reporterkarnataka.com): ಇಂಧನ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಯಾಸಾಫ್ಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ತನ್ನ ಅತ್ಯಾಧುನಿಕ ಕಲಿಕೆ ಮತ್ತು ಸಾಮರ್ಥ್ಯ ಅಭಿವೃದ್ಧಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಿದೆ.
ಮೂಡಬಿದರೆ ಶಾಸಕ ಉಮನಾಥ್ ಕೋಟ್ಯಾನ್ ಎಸ್ಯಾಸಾಫ್ಟ್ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರವನ್ನು ಇಂದು ಮಂಗಳೂರಿನ ಬಜ್ಪೆಯಲ್ಲಿ ಉದ್ಘಾಟಿಸಿದರು. ಕಂಪನಿಯ ಸ್ಥಾಪಕ ಮತ್ತು ಸಿಇಒ ಬಿಪಿನ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಈ ಸೌಲಭ್ಯವು ಎಐ, ಐಒಟಿ, ಸ್ಮಾರ್ಟ್ ಗ್ರಿಡ್‍ಗಳು, ಇವಿ, ಹವಾಮಾನ ಮೂಲಸೌಕರ್ಯ ಮತ್ತು ಇಂಧನ ನಿರ್ವಹಣಾ ವ್ಯವಸ್ಥೆಗಳನ್ನು ಸಂಯೋಜಿಸುವುದರೊಂದಿಗೆ ನವೀಕರಿಸಬಹುದಾದ, ಉಪಯುಕ್ತ ಡಿಜಿಟಲೀಕರಣ ಮತ್ತು ಇಂಧನ ಮೂಲಸೌಕರ್ಯದಲ್ಲಿ ಅಸ್ತಿತ್ವದಲ್ಲಿರುವ ಜಾಗತಿಕ ಯೋಜನೆಗಳಿಗೆ ಪ್ರಾಯೋಗಿಕವಾಗಿ ಆರಂಭಕ್ಕೆ ಒತ್ತು ನೀಡಿದೆ ಎಂದು ಬಿಪಿನ್‍ಚಂದ್ರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಭಾರತದ ಇಂಧನ ಮತ್ತು ಉಪಯುಕ್ತತೆಗಳ ವಲಯದಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಪ್ರತಿಭೆಗಳನ್ನು ಹೊರತರುವುದು ಸೇರಿದಂತೆ ಜಾಗತಿಕ ಶ್ರೇಷ್ಠ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ. 50 ಸಾವಿರ ಚದರ ಅಡಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಕೇಂದ್ರವು ಪ್ರಾಯೋಗಿಕ ಕಲಿಕೆ, ಉದ್ಯಮ ಸಹಯೋಗ ಮತ್ತು ವೃತ್ತಿಪರ ಬೆಳವಣಿಗೆಗಾಗಿ ಉತ್ತಮ ಪರಿಸರ ಹೊಂದಿದೆ.
ಈ ಅತ್ಯಾಧುನಿಕ ತಂತ್ರಜ್ಞಾನಗಳು ಯುವ ವೃತ್ತಿಪರರಿಗೆ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಿಸಲಿದ್ದು, ಈ ವಿಶ್ವ ದರ್ಜೆಯ ಕೇಂದ್ರವು ಭಾರತದ ಶುದ್ಧ ಇಂಧನ ಯೋಜನೆಗಳಿಗೆ ಶಕ್ತಿ ತುಂಬಲು ಮತ್ತು ರಾಷ್ಟ್ರೀಯ ವಿದ್ಯುತ್ ಚಲನಶೀಲತೆ ಮಿಷನ್ ಮತ್ತು ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಒಳಗೊಂಡಿರುವ ದೇಶದ ನವೀಕರಿಸಬಹುದಾದ ಇಂಧನ ಮತ್ತು ಇಂಗಾಲ ಶೂನ್ಯಗೊಳಿಸುವ ಗುರಿಗಳನ್ನು ಈಡೇರಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದರು.
ಕೇಂದ್ರವು ವಿಶೇಷ ತರಬೇತಿ ತರಗತಿ ಕೊಠಡಿಗಳು, ಸಂಪೂರ್ಣವಾಗಿ ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ನಿಜವಾದ ಸಮಗ್ರ ಕಲಿಕಾ ವಾತಾವರಣವನ್ನು ಸೃಷ್ಟಿಸಲು, ಕೇಂದ್ರವು ಆಧುನಿಕ ವಸತಿ ಸೌಲಭ್ಯ ಸೇರಿದಂತೆ ತಾಂತ್ರಿಕ ತರಬೇತಿಯನ್ನು ಮೀರಿದ ಸಮಗ್ರ ಸೌಲಭ್ಯಗಳನ್ನು ಹೊಂದಿದೆ.
“2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಸಾಮರ್ಥ್ಯವನ್ನು ಸಾಧಿಸುವ ಭಾರತದ ಗುರಿಗೆ ಕೌಶಲಪೂರ್ಣ ನಾಯಕರ ಅಗತ್ಯವಿದೆ. ನಮ್ಮ ಸಾಮಥ್ರ್ಯ ಕೇಂದ್ರವು ನಾಳಿನ ತಂತ್ರಜ್ಞಾನಗಳನ್ನು ನಾವೀನ್ಯತೆ ಮಾಡಲು, ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಪ್ರತಿ ವರ್ಷ ನೂರಾರು ವೃತ್ತಿಪರರ ಪ್ರತಿಭಾ ಪೂಲ್ ಅನ್ನು ಸಿದ್ಧಪಡಿಸುವ ಮತ್ತು ಅಭಿವೃದ್ಧಿಪಡಿಸಲಿದೆ ಎಂದು ಹೇಳಿದರು.
ಈ ಕೇಂದ್ರವು ಒಂದೇ ಬಾರಿಗೆ ನೂರಾರು ವೃತ್ತಿಪರರಿಗೆ ತರಬೇತಿ ನೀಡಬಹುದು ಮತ್ತು ತರಬೇತಿಯು 3-4 ತಿಂಗಳ ಅವಧಿಯದ್ದಾಗಿರುತ್ತದೆ ಮತ್ತು ಗುಂಪಿಗೆ ಕೃತಕ ಬುದ್ಧಿಮತ್ತೆ ಜಾಗತಿಕ ವಿತರಣಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಈ ಕೇಂದ್ರವು ಮೂಲಭೂತ ತಂತ್ರಜ್ಞಾನ ತರಬೇತಿ, ಡೊಮೇನ್ ಮತ್ತು ಉತ್ಪನ್ನ ತರಬೇತಿ, ಕಂಪನಿಯ ದೃಷ್ಟಿಕೋನ ಸಂಸ್ಕøತಿ ಮತ್ತು ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಾದ್ಯಂತ ನಿರ್ಣಾಯಕ ಇಂಧನ ಪರಿವರ್ತನೆ ಮೂಲಸೌಕರ್ಯದಲ್ಲಿ ಪರಿಣಾಮಕಾರಿ ಪಾತ್ರಗಳಿಗೆ ಅವರನ್ನು ಸಿದ್ಧಪಡಿಸುವ ಅಗತ್ಯ ಮೃದು ಕೌಶಲ್ಯಗಳನ್ನು ಒಳಗೊಂಡಿದೆ.
ಐಐಟಿ ಬಾಂಬೆ, ದೆಹಲಿ, ಗುವಾಹಟಿ, ಹೈದರಾಬಾದ್, ಇಂದೋರ್, ಕಾನ್ಪುರ, ರೂರ್ಕಿ, ಮತ್ತು ಎನ್‍ಐಟಿಗಳಾದ ಕ್ಯಾಲಿಕಟ್, ದುರ್ಗಾಪುರ, ಸುರತ್ಕಲ್, ಜಮ್‍ಶೆಡ್‍ಪುರ ಸೇರಿದಂತೆ ಟೈಯರ್ 1 ಸಂಸ್ಥೆಗಳಿಂದ ಕ್ಯಾಂಪಸ್ ನಿಯೋಜನೆಗಳ ಮೂಲಕ ತರಬೇತಿ ಪಡೆದವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಂಪನಿಯ ಜಾಗತಿಕ ಎಚ್‍ಆರ್ ಮುಖ್ಯಸ್ಥೆ ಮರಿಸಾ ತಲಮೋಂತಿ ಉಪಸ್ಥಿತರಿದ್ದರು,

ಇತ್ತೀಚಿನ ಸುದ್ದಿ

ಜಾಹೀರಾತು