2:36 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ಮಂಗಳೂರು ಸ್ಮಾರ್ಟ್ ಸಿಟಿ: ಆಡಿದ್ದೇ ಆಟ, ಮಾಡಿದ್ದೇ ಕಾಮಗಾರಿ; ಕಮಿಷನ್ ವ್ಯವಹಾರ, ಭ್ರಷ್ಟಾಚಾರದ ವಾಸನೆ!

04/04/2022, 17:33

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು(reporterkarnataka news): ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಎಂದರೆ ಬರೇ ಕಟ್ಟುವುದು- ಬಿಚ್ಚುವುದು ಅಲ್ಲ. ಇದು ನಗರದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಚೈತನ್ಯವನ್ನು ತುಂಬುವ ವ್ಯವಸ್ಥೆಯಾಗಬೇಕು, ಹೂಡಿಕೆದಾರರನ್ನು ಆಕರ್ಷಿಸಬೇಕು, ಸ್ಟಾರ್ಟಪ್ ಗಳು ಅಲ್ಲಲ್ಲಿ ತೆರೆದುಕೊಳ್ಳಬೇಕು. ಇದು ಸ್ಮಾರ್ಟ್ ಸಿಟಿಯ ಆಶಯ. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಈ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದು ಸಾರ್ವಜನಿಕರಲ್ಲಿ ಕಾಡುವ ಪ್ರಶ್ನೆಯಾಗಿದೆ.

ಈ ಕುರಿತು ರಿಪೋರ್ಟರ್ ಕರ್ನಾಟಕ ಸಂಗ್ರಹಿಸಿದ ಜನಾಭಿಪ್ರಾಯದಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವೇ ರಾಜ್ಯದಲ್ಲಿಯೂ ಆಡಳಿತ ನಡೆಸುತ್ತಿದೆ, ಮಂಗಳೂರಿನಲ್ಲಿ ಅದೇ ಪಕ್ಷದ ಸಂಸದರು, ಶಾಸಕರು ಇದ್ದಾರೆ. ಹಾಗಾದರೆ ಯಾಕಾಗಿ ಇಲ್ಲಿ ಯೋಜನೆ ದಿಕ್ಕು ತಪ್ಪುತ್ತಿದೆ ಎನ್ನುವ ಕುರಿತು ಜನಪ್ರತಿನಿಧಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಮಂಗಳೂರಿನ ಮಟ್ಟಿಗೆ ಸ್ಮಾರ್ಟ್ ಸಿಟಿ ಕಾಮಗಾರಿ ಅಂದ್ರೆ ರಸ್ತೆ ರಿಪೇರಿ, ಫುಟ್ ಪಾತ್ ದುರಸ್ತಿ, ಫುಟ್ ಪಾತ್ ಗೆ ಬಣ್ಣದ ಚಪ್ಪಡಿ ಹಾಸುವುದು, ನೆಟ್ಟಗಿರುವ ರಸ್ತೆಯನ್ನು ಅಗೆದು ಕಾಂಕ್ರೀಟ್ ಹಾಕುವುದು ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಮಂಗಳೂರಿನ ಜನಸಾಮಾನ್ಯರಿಗೆ ಬಿಡಿ, ಹೆಚ್ಚಿನ ಅಧಿಕಾರಿಗಳಿಗೂ ಇನ್ನೂ ಸ್ಮಾರ್ಟ್ ಸಿಟಿ ಬಗ್ಗೆ ಸರಿಯಾದ ಕಲ್ಪನೆ ಇದ್ದ ಹಾಗೆ ಇಲ್ಲ. ಇನ್ನು ಯೋಜನೆ ಬಗ್ಗೆ ಮಾಹಿತಿ ಇರುವ ಪ್ರಜ್ಞಾವಂತರು ರಾಜಕೀಯ ಸಂಬಂಧಗಳಿಗೆ ಕಟ್ಟು ಬಿದ್ದು ಮೌನಕ್ಕೆ ಶರಣಾಗಿದ್ದರೆ, ಇನ್ನು ಕೆಲವರು ಭಯದಿಂದ ನಮಗ್ಯಾಕೆ ಉಸಾಬರಿ ಎಂದು ತೆಪ್ಪಗಾಗಿದ್ದಾರೆ. ರಿಪೋರ್ಟರ್ ಕರ್ನಾಟಕದ ಜನಾಭಿಪ್ರಾಯ ಸಂಗ್ರಹದ ಸಮಯದಲ್ಲಿ ಮಾತನಾಡಿದ ಹೆಚ್ಚಿನವರಲ್ಲಿ ನಮ್ಮ ಹೆಸರು ಹಾಕಬೇಡಿ, ನಮ್ಮ ಫೋಟೋ ಹಾಕಬೇಡಿ ಎಂದು ಮನವಿ ಮಾಡಿರುವುದು ಇದಕ್ಕೆಲ್ಲ ಸಾಕ್ಷಿಯಾಗಿದೆ. ಇವೆಲ್ಲದರ ಪರಿಣಾಮವೇ ಜನಪ್ರತಿನಿಧಿಗಳು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎನ್ನುವಂತಾಗಿದೆ. 

ಮಂಗಳೂರಿನ ಸುಸ್ಥಿರ ಅಭಿವೃದ್ಧಿಗೆ ಉಪಯೋಗಿಸಬೇಕಾದ ಸ್ಮಾರ್ಟ್ ಸಿಟಿಯ ಕೋಟಿಗಟ್ಟಲೆ  ಫಂಡನ್ನು ರಸ್ತೆ ರಿಪೇರಿ, ಫುಟ್ ಪಾತ್ ನಿರ್ಮಾಣ, ಕೆರೆ ದುರಸ್ತಿಗೆ ಪೋಲು ಮಾಡಲಾಗಿದೆ. ಹಾಗಾದರೆ ನಮಗೆ ರಸ್ತೆ, ಫುಟ್ ಪಾತ್ ಬೇಡವೇ ಎಂದು ನೀವು ಪ್ರಶ್ನಿಸಬಹುದು. ನೂರಕ್ಕೆ ನೂರರಷ್ಟು ಬೇಕು. ಆದರೆ ಅದಕ್ಕೆ ಮುಖ್ಯಮಂತ್ರಿಗಳ 100 ಕೋಟಿ ಯೋಜನೆ, 14ನೇ ಹಣಕಾಸು, ನಗರೋತ್ಥಾನ ಯೋಜನೆ ಮುಂತಾದ ಹಲವು ಯೋಜನೆಗಳಿವೆ. ಅದೆಲ್ಲವನ್ನು ಬಿಟ್ಟು ಸ್ಮಾರ್ಟ್ ಸಿಟಿ ಫಂಡ್ ಗೆ ಕೈ ಹಾಕುವ ಅಗತ್ಯ ಏನಿದೆ ಎಂದು ಮಂಗಳೂರು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ಇಲ್ಲೂ ಕೂಡ ಕಮಿಷನ್ ಆರೋಪ ಕೇಳಿ ಬರುತ್ತಿದೆ.

ಇಲ್ಲಿರುವುದು ಬಿಜೆಪಿ ಶಾಸಕರು

ಬಿಜೆಪಿಯ ಮೂಲ ರೂಪ ಜನಸಂಘ ಆಗಿದೆ. ಜನಸಂಘವು ದೇಶಪ್ರೇಮದ ಜತೆಗೆ ಭ್ರಷ್ಟಾಚಾರ ವಿರುದ್ಧ ಹೋರಾಡಲು ಹುಟ್ಟು ಹಾಕಿದ ರಾಜಕೀಯ ಶಕ್ತಿಯಾಗಿದೆ. ಜನಸಂಘದ ನಾಯಕರಾದ ಸಿ.ಜಿ. ಕಾಮತ್, ಶಾರದಾ ಘಾಟೆ, ನಾರಾಯಣ ಶೆಟ್ಟಿ, ಕರಂಬಳ್ಳಿ ಸಂಜೀವ ಶೆಟ್ಟಿ ಮುಂತಾದವರು ಅತ್ಯಂತ ಸರಳವಾಗಿ ಬದುಕು ಕಟ್ಟಿಕೊಂಡವರು. ಕರಂಬಳ್ಳಿಯವರು ಜೀವನಪೂರ್ತಿ ಅವಿವಾಹಿತರಾಗಿ ಉಳಿದು ಒಂದು ಪುಟ್ಟ ಕೊಠಡಿಯಲ್ಲಿ ಬದುಕು ನಡೆಸಿ ಪಕ್ಷ ಸಂಘಟಿಸಿದವರಾಗಿದ್ದಾರೆ. ಅವರ ಅಂದಿನ ತ್ಯಾಗದ ಫಲವನ್ನು ಇಂದಿನ ಬಿಜೆಪಿ ಜನಪ್ರತಿನಿಧಿಗಳು ಅನುಭವಿಸುತ್ತಿದ್ದಾರೆ. ಇದನ್ನೆಲ್ಲ ಇಂದಿನ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕೆಂದು ಹಿರಿಯ ನಾಗರಿಕ ಮಂಗಳೂರಿನ ಲಕ್ಷ್ಮಣ ರಾವ್ ಅಭಿಪ್ರಾಯಪಡುತ್ತಾರೆ.

ಮಂಗಳೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ 1628 ಎಕರೆ ಪ್ರದೇಶ ಪುನರ್ ಅಭಿವೃದ್ಧಿಗೆ ಯೋಜನೆ ಇದೆ. ಹಾಗೆ ಮಂಗಳೂರಿನಲ್ಲಿ ವಾಣಿಜ್ಯ ಅಭಿವೃದ್ಧಿಗೆ 100 ಎಕರೆ ಜಮೀನು, ಹಂಪನಕಟ್ಟೆ ಪ್ರದೇಶಾಭಿವೃದ್ಧಿಗೆ 27 ಎಕರೆ, 

ಮೀನುಗಾರಿಕೆ ಬಂದರು ಅಭಿವೃದ್ಧಿಗೆ 22 ಎಕರೆ, ಹಳೆ ಬಂದರು ಅಭಿವೃದ್ಧಿಗೆ 10 ಎಕರೆ, ಧಾರ್ಮಿಕ ವಲಯಕ್ಕೆ 57 ಎಕರೆ, ಮರೀನಾ ಅಭಿವೃದ್ಧಿಗೆ 25 ಎಕರೆ, ಐಟಿ ಮತ್ತು ಬಹು ಉಪಯೋಗಿ ವಲಯಕ್ಕೆ 42 ಎಕರೆ ಹಾಗೂ ಸೋಲಾರ್ ಫಾರ್ಮ್ ಗೆ 20 ಎಕರೆ ಮೀಸಲಿಡಬೇಕು. ಇವೆಲ್ಲ ಯೋಜನೆಗಳು ಕಾರ್ಯಗತಗೊಂಡರೆ ಮಾತ್ರ ಮಂಗಳೂರು ಸ್ಮಾರ್ಟ್ ಸಿಟಿಗೆ ಯೋಜನೆಗೆ ಅರ್ಥ ಬರುವುದು. ಇಲ್ಲದಿದ್ದರೆ ಸರಕಾರದ ಕಡತದಲ್ಲಿ ಮಾತ್ರ ಸ್ಮಾರ್ಟ್ ಸಿಟಿಯಾಗಿ ಇರುತ್ತದೆ. ಎರಡು ವರ್ಷಗಳ ಹಿಂದೆಯೇ ಮಂಗಳೂರಿನ ಕ್ಲಾಕ್ ಟವರ್ ನಿಂದ ಎ.ಬಿ.ಶೆಟ್ಟಿ ವೃತ್ತದವರೆಗಿನ ರಸ್ತೆಯನ್ನು ಸ್ಮಾರ್ಟ್ ರಸ್ತೆ ಮಾಡಲಾಯಿತು. ಪ್ರಸ್ತಾಪನೆಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಸುಂದರ ಫುಟ್ ಪಾತ್, ಸಂಜೆ ವೇಳೆ ವಾಯುಸೇವನೆಗೆ ಬಂದ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಕಲ್ಲು ಬೆಂಚು, ದೇಹಬಾಧೆ ತೀರಿಸಿಕೊಳ್ಳಲು ಸ್ಮಾರ್ಟ್ ಟಾಯ್ಲೆಟ್, ವೈಫೈ ಸೌಲಭ್ಯ ಮುಂತಾದುವುಗಳು ಸೇರಿತ್ತು. ಆದರೆ ಇದರಲ್ಲಿ ಯಾವುದೆಲ್ಲ ಕಾರ್ಯಗತವಾಗಿದೆ ಎಂಬುದನ್ನು ಸ್ಮಾರ್ಟ್ ಸಿಟಿ ಕಂಪನಿಯ ಎಂಡಿಯಲ್ಲಿ ಜನರ ಜತೆಗೆ ಜನಪ್ರತಿನಿಧಿಗಳು ಕೂಡ ಪ್ರಶ್ನಿಸಬೇಕಾಗಿದೆ.


ಹಂಪನಕಟ್ಟೆಯಲ್ಲಿದ್ದ ಖಾಸಗಿ ಬಸ್ ನಿಲ್ದಾಣ ಸ್ಟೇಟ್ ಬ್ಯಾಂಕ್ ಸಮೀಪದ ಹಾಕಿ ಗ್ರೌಂಡ್ ಗೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು 3 ದಶಕಗಳೇ ಕಳೆದಿವೆ. ಈ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದ್ದಾರೆ.  ಆದರೆ ಮಂಗಳೂರಿಗೆ ಒಂದು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ನೇತೃತ್ವದ ಮೊದಲ ಬಿಜೆಪಿ ಸರಕಾರದ ಅವಧಿಯಲ್ಲಿ  ಬಸ್ ನಿಲ್ದಾಣ ನಿರ್ಮಿಸಲು ಪಂಪ್ ವೆಲ್ ನಲ್ಲಿ ಜಾಗ ನೋಡಲಾಯಿತು. ಅದರೆ ಬಸ್ ನಿಲ್ದಾಣ ಮಾತ್ರ ನಿರ್ಮಾಣವಾಗಲೇ ಇಲ್ಲ. ನಂತರ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ತರಲಾಯಿತು. ಈ ನಡುವೆ ಪಡೀಲ್ ಹಾಗೂ ಕೂಳೂರು ಬಳಿಯೂ ಜಾಗ ಹುಡುಕುವ ನಾಟಕವಾಡಲಾಯಿತು. ನಾಟಕ ಹಾಗೆ ಮುಂದುವರಿಯುತ್ತಿದೆ.

(ಬನ್ನಿ…ಭ್ರಷ್ಟಾಚಾರ ವಿರುದ್ಧ ಕೈಜೋಡಿಸೋಣ. ಮಾಹಿತಿ ಇದ್ದರೆ 7090946914 ವಾಟ್ಸಾಪ್ ಮಾಡಿ. ನಿಮ್ಮ ಹೆಸರು, ವಿಳಾಸ ಗೌಪ್ಯವಾಗಿ ಇಡಲಾಗುವುದು)

ಇತ್ತೀಚಿನ ಸುದ್ದಿ

ಜಾಹೀರಾತು