ಇತ್ತೀಚಿನ ಸುದ್ದಿ
ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ
03/07/2024, 18:45
ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ನಗರದ ವಿವಿಧ ಕಡೆಗಳಲ್ಲಿ ಕಳೆದ ಎರಡು ದಿನಗಳಿಂದ ಟ್ರಾಫಿಕ್ ಪೊಲೀಸರಿಂದ ಟಿಂಟ್, ಎಲ್ ಇಡಿ ಲೈಟ್ ಹಾಗೂ ಕರ್ಕಶ ಹಾರ್ನ್ ಗಳ ತೆರವು ಕಾರ್ಯಚರಣೆ ನಡೆಯುತ್ತಿದ್ದು, ಇಂದು ನಗರದ ಲಾಲ್ ಬಾಗ್ ಬಳಿ ಕರ್ಕಶ ಹಾರ್ನ್ ಕಿತ್ತು ತೆಗೆಯುವ ಕಾರ್ಯ ಜರುಗಿತು.
ಮಂಗಳೂರು ಪೊಲೀಸ್ ಕಮಿಷನರ್ ನಿರ್ದೇಶನದ ಮೇರೆಗೆ, ಡಿಸಿಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಿಟಿ ಬಸ್, ಸರ್ವಿಸ್ ಬಸ್,ಕೆಎಸ್ ಆರ್ ಟಿ ಸಿ ಬಸ್ ಗಳ
ಕರ್ಕಶ ಹಾರ್ನ್ , ಎಲ್ ಇಡಿ ಲೈಟ್ ಗಳ ತೆರವು ಮಾಡುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಅವರ ನಿರ್ದೇಶನದ ಮೇರೆಗೆ,ಡಿಸಿಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.