ಇತ್ತೀಚಿನ ಸುದ್ದಿ
ಮಂಗಳೂರು ಪಬ್ ದಾಳಿ ಪ್ರಕರಣ: ಪೊಲೀಸ್ ಕಮೀಷನರ್ ಏನು ಹೇಳಿದ್ರು ಗೊತ್ತೇ?
26/07/2022, 12:35
ಮಂಗಳೂರು(reporterkarnataka.com): ನಗರದ ಬಲ್ಮಠ ರಸ್ತೆಯಲ್ಲಿರುವ ಪಬ್ ದಾಳಿಗೆ ಸಂಬಂಧಪಟ್ಟಂತೆ ಇಂದು ಬೆಳಗ್ಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಲ್ಮಠದ ರೀ ಸೈಕಲ್ ಎಂಬ ಹೆಸರಿನ ರೆಸ್ಟೋರೆಂಟ್ ಹಾಗೂ ಪಬ್ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಸಂಘಟನೆಯೊಂದರ ಹೆಸರು ಹೇಳಿ 5-6 ಜನ ಯುವಕರು ನಿಮ್ಮ ಪಬ್‌ನಲ್ಲಿ ಅಪ್ರಾಪ್ತ-ಬಾಲಕ ಬಾಲಕಿಯರಿಗೆ ಮದ್ಯಪಾನ ಪೂರೈಕೆ ಮಾಡುತ್ತಿದ್ದೀರಿ, ಈ ಹಿಂದೆ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಬೌನ್ಸರ್ ಬಳಿ ಹೇಳಿದ್ದರು.
ನಂತರ ಒಳಗೆ ಹೋಗಿ ಪಬ್‌ನಲ್ಲಿರುವ ಐಡಿ ಪ್ರೊಫ್ ಕೇಳಿದ್ದಾರೆ. ಈ ವೇಳೆ ಸ್ಥಳದಲ್ಲಿ ಸ್ಥಳೀಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ. ಪಬ್‌ನ ಮಾಲಿಕ ಮುಂಬೈ ಮೂಲದವರು ಸಿಸಿಟಿವಿಯ ಪರಿಶೀಲನೆ ಅವರನ್ನು ಸಂಪರ್ಕಿಸುತ್ತಿದ್ದೇವೆ. ನಿನ್ನೆ ಇಲ್ಲಿ ಭಾಗಿಯಾದ ಕೆಲವು ವಿದ್ಯಾರ್ಥಿಗಳನ್ನು ಕಾಲೇಜು ಮೂಲಕ ಸಂಪರ್ಕಿಸಿದ್ದೇವೆ. ಅವರಿಂದ ಮಾಹಿತಿ ಪಡೆಯುತ್ತಿದ್ದೇವೆ. ಘಟನೆ ಬಗ್ಗೆ ಸಿಸಿಟಿವಿ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.