ಇತ್ತೀಚಿನ ಸುದ್ದಿ
ಮಂಗಳೂರು ಪಾಲ್ದನೆ ಸಂತ ಮದರ್ ತೆರೆಸಾ ಚರ್ಚಿನಲ್ಲಿ ಅಂತರ್ ವಾರ್ಡ್ ಕ್ರಿಕೆಟ್ ಟೂರ್ನಮೆಂಟ್
17/11/2024, 21:32

ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆಯ ಸಂತ ಮದರ್ ತೆರೆಸಾ ಚರ್ಚಿನಲ್ಲಿ ಅಂತರ್ ವಾರ್ಡ್ ಕ್ರಿಕೆಟ್ ಟೂರ್ನಮೆಂಟ್ ಭಾನುವಾರ ನಡೆಯಿತು.
ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಅವರು ಪಂದ್ಯಾಟ ಉದ್ಘಾಟಿಸಿದರು. ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊತೇರೊ, ಸರ್ವ ಆಯೋಗಗಳ ಸಂಯೋಜಕ ಜೊಸ್ಲಿನ್ ಲೋಬೊ, ವೀಕ್ಷಕ ವಿವರಣೆಗಾರ ಮಾರಿಯೋ ರೇಗೊ, ಸಾಂಸ್ಕೃತಿಕ ಸಮಿತಿಯ ಸಂಯೋಜಕಿ ಪ್ಯಾಟ್ಸಿ ಮೊಂತೇರೊ, ಸದಸ್ಯರಾದ ಸುನಿತಾ ಫೆರ್ನಾಂಡಿಸ್, ಸೆಲಿನ್ ಡಿಸೋಜ, ಕ್ಲಿಫರ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಹರ್ಷ ಮತ್ತು ಪುನೀತ್ ಕಾರ್ಯನಿರ್ವಹಿಸಿದರು.
ವಿಜೇತ ತಂಡದಲ್ಲಿ ಜೋಯೆಲ್ ಡಿಸೋಜ(ನಾಯಕ), ಸ್ಠೀಫನ್ ಡಿಸೋಜ, ರೋಶನ್ ಫೆರ್ನಾಂಡಿಸ್, ವಿಲ್ಸನ್ ಪಿಂಟೊ, ಶೋನ್ ಡಿಸೋಜ, ಆ್ಯಶ್ಲಿ ಡಿಸೋಜ, ವಿಲ್ಸನ್ ಡಿಸೋಜ, ಅನಿಲ್ ಮೆಲ್ವಿನ್ ಡಿಸೋಜ, ಲ್ಯಾನಿಶ್ ಪಿಂಟೊ, ರಿಶಾಲ್ ಡಿಸೋಜ, ಸೆಲಿನ್ ಡಿಸೋಜ, ಗ್ಯಾವಿನ್ ಡಿಸೋಜ, ಶರ್ಲಿನ್ ಡಿಸೋಜ ಇದ್ದರು.
ಕ್ರಿಕೆಟ್ ಪಿಚ್ ತಯಾರಿಸಿ ಕೊಟ್ಟ ಸಂತ ತೆರೆಜಾ ವಾರ್ಡಿನ ಕಿರಣ್ ಮೊಂತೇರೊ ಮತ್ತು ಸಂತ ಸೆಬಾಸ್ಟಿಯನ್ ವಾರ್ಡಿನ ಸ್ಟೀಫನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.