ಇತ್ತೀಚಿನ ಸುದ್ದಿ
ಮಂಗಳೂರು: ಪಾಲ್ದನೆ ಚರ್ಚ್ ಗೆ ಐಜ್ವಾಲ್ ಧರ್ಮಾಧ್ಯಕ್ಸರ ಭೇಟಿ
27/10/2024, 18:33
ಮಂಗಳೂರು(reporterkarnataka.com): ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ಗೆ ಉತ್ತರ ಭಾರತದ ಐಜ್ವಾಲ್ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಜೋಕಿಂ ವಾಲ್ಡರ್ ಅವರು ಅತಿಥಿಯಾಗಿ ಆಗಮಿಸಿ ಇಂದು ಬೆಳಗ್ಗಿನ ಬಲಿ ಪೂಜೆಯ ನೇತೃತ್ವ ವಹಿಸಿದ್ದರು.
ಅವರು ತಮ್ಮ ಪ್ರವಚನದಲ್ಲಿ ಬಡ ಬಗ್ಗರ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸ ಬೇಕು. ಪ್ರಾರ್ಥನೆ ನಮ್ಮ ಆದ್ಯತೆ ಆಗ ಬೇಕೆಂದರು. ಬಲಿ ಪೂಜೆಯ ಬಳಿಕ ಅವರ ಭೇಟಿಯ ಸವಿ ನೆನಪಿಗಾಗಿ ಅವರನ್ನು ಸನ್ಮಾನಿಸಲಾಯಿತು.
ಬಲಿಪೂಜೆಯಲ್ಲಿ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನೀಯ ರೋಶನ್ ಪಿಂಟೊ ಭಾಗಿಯಾಗಿದ್ದರು. ಪಾಲ್ದನೆ ಚರ್ಚಿನ ಪ್ರಧಾನ ಧರ್ಮ ಗುರು ವಂದನೀಯ ಆಲ್ಬನ್ ಡಿ’ಸೋಜಾ, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ವಿವಿಧ ಆಯೋಗಗಳ ಸಂಚಾಲಕ ಜೊಸ್ಲಿನ್ ಲೋಬೊ, ಲೀಜನ್ ಆಫ್ ಮೇರಿ ಸಂಘದ ಅಧ್ಯಕ್ಷೆ ಹೆಲೆನ್ ಲೋಬೊ ಉಪಸ್ಥಿತರಿದ್ದರು.