ಇತ್ತೀಚಿನ ಸುದ್ದಿ
Mangaluru | ಪಾಲ್ದನೆ ಚರ್ಚ್: ಸೇಕ್ರೆಡ್ ಹಾರ್ಟ್ ವಾರ್ಡ್ ನಲ್ಲಿ ಪೂರ್ವಭಾವಿ ಕ್ರಿಸ್ಮಸ್ ಆಚರಣೆ
08/12/2025, 12:51
ಮಂಗಳೂರು(reporterkarnataka.com): ಯೇಸು ಕ್ರಿಸ್ತರ ಜನನದ ಹಬ್ಬ ಕ್ರಿಸ್ಮಸ್ ಆಚರಣೆಗೆ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ. ಸಾರ್ವತ್ರಿಕವಾಗಿ ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಿಸಲಾಗುತ್ತಿದ್ದರೂ, ಅದಕ್ಕೆ ಪೂರ್ವ ಭಾವಿಯಾಗಿ ಚರ್ಚ್ ಗಳ ವಾರ್ಡ್ ಮಟ್ಟದಲ್ಲಿ ಕ್ರಿಸ್ಮಸ್ ಆಚರಣೆ ನಡೆಯುತ್ತಲಿದೆ.
ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಸೇಕ್ರೆಡ್ ಹಾರ್ಟ್ ವಾರ್ಡ್ ನಲ್ಲಿ ಕ್ರಿಸ್ಮಸ್ ಆಚರಣೆ ಡಿಸೆಂಬರ್ 7ರಂದು ಭಾನುವಾರ ನಡೆಯಿತು.
ಏಸು ಕ್ರಿಸ್ತರ ಜನನದ ಬಗ್ಗೆ ಬೈಬಲ್ ನಲ್ಲಿರುವ ಉಲ್ಲೇಖದ ವಾಚನ, ಕ್ರಿಸ್ಮಸ್ ಗೀತೆಗಳ ಗಾಯನ, ಕ್ರಿಸ್ತ ಜನನದ ಕುರಿತು ನೃತ್ಯ ರೂಪಕ ಪ್ರದರ್ಶನ ಮತ್ತು ವಿವಿಧ ವಿನೋದಾವಳಿಗಳು ನಡೆದವು.
ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಕ್ರಿಸ್ಮಸ್ ಸಂದೇಶ ನೀಡಿದರು. ಡಿಯಾಕೋನ್ ರೋವಿನ್ ಲೋಪೆಜ್, ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಸಿಸ್ಟರ್ ಮೊಂತಿ ಉಪಸ್ಥಿತರಿದ್ದರು.
ವಾರ್ಡಿನ ಮುಖ್ಯಸ್ಥರಾಗಿರುವ ಮೋಲಿ ಡಿ ಸೋಜಾ ಸ್ವಾಗತಿಸಿದರು. ವಾರ್ಡಿನ ಪ್ರಮುಖರಾದ ಅನಿಲ್ ಮಸ್ಕರೇನ್ಹಸ್, ರಿಚಾರ್ಡ್ ಮಾರ್ಟಿಸ್, ರೊನಾಲ್ಡ್ ಮಿನೇಜಸ್, ಬ್ಯಾಪ್ಟಿಸ್ಟ್ ಡಿ ಕುನ್ಹಾ ಮುಂತಾದವರು ಸಹಕರಿಸಿದರು. ಸ್ವೀನಿ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು.












