8:54 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

Mangaluru | ರೋಹನ್ ಸಿಟಿ ಕಚೇರಿಯಲ್ಲಿ ಓಣಂ ಹಬ್ಬದ ಸಂಭ್ರಮ: ಸಾಂಸ್ಕೃತಿಕ ವೈಭವ

07/09/2025, 20:27

ಮಂಗಳೂರು(reporterkarnataka.com): ನಗರದ ಪ್ರತಿಷ್ಠಿತ ರೋಹನ್ ಕಾರ್ಪೋರೇಶನ್ ಸಂಸ್ಥೆಯ ವತಿಯಿಂದ ರೋಹನ್ ಸಿಟಿ ಕಚೇರಿಯಲ್ಲಿ ಒಣಂ ಹಬ್ಬವನ್ನು ಆಚರಿಸಲಾಯಿತು. ಸಿಬ್ಬಂದಿಗಳು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು, ಸಾಂಸ್ಕೃತಿಕ ವೈಭವವನ್ನು ಹಂಚಿಕೊಂಡರು.
ಕಾರ್ಯಕ್ರಮವು ದೀಪಪ್ರಜ್ವಲನದೊಂದಿಗೆ ಆರಂಭಗೊಂಡಿತು. ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್ ಸುಮನಾ ಅವರು ದೀಪ ಬೆಳಗುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

ಓಣಂ ಹಬ್ಬದ ಹೂವಿನ ಅಲಂಕಾರ ( ಪೂಕಳಂ ), ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಿರ್ದೇಶಕ ಡಿಯೋನ್ ಮೊಂತೆರೋ “ಒಣಂ ಹಬ್ಬವು ಏಕತೆ ಸಂಕೇತ. ಇಂತಹ ಆಚರಣೆಗಳು ನಮ್ಮ ಬಾಂಧವ್ಯವನ್ನು ಬಲಪಡಿಸುತ್ತವೆ” ಎಂದು ಹೇಳಿದರು.
“ಎಲ್ಲರೂ ಒಗ್ಗಟ್ಟಿನಿಂದ ಒಂದು ಕುಟುಂಬದಂತೆ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷಕರ. ಇಂತಹ ಸಂದರ್ಭಗಳು ಪರಸ್ಪರ ಗೌರವ ಮತ್ತು ಸ್ನೇಹವನ್ನು ಹೆಚ್ಚಿಸುತ್ತವೆ” ಎಂದು ಜನರಲ್ ಮ್ಯಾನೇಜರ್ ಸುಮನಾ ಹೇಳಿದರು.
ರೋಹನ್ ಕಾರ್ಪೋರೇಶನ್ ವತಿಯಿಂದ ಹಮ್ಮಿಕೊಂಡಿದ್ದ ಈ ಒಣಂ ಆಚರಣೆಯು ಕೇವಲ ಹಬ್ಬದ ಆಚರಣೆ ಮಾತ್ರವಲ್ಲದೆ, ಸಂಸ್ಥೆಯ ಏಕತೆ ಮತ್ತು ಸೌಹಾರ್ದತೆಯ ಮೌಲ್ಯಗಳನ್ನು ಪುನರುಚ್ಚರಿಸಿದ ಸಂದರ್ಭವಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು