ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಕಿಗ್ಗಾ ನಿವಾಸಿ, ನಕ್ಸಲ್ ರವೀಂದ್ರ ಶರಣಾಗತಿ; ಎಸ್ಪಿ ವಿಕ್ರಂ ಅಮಟೆ ಎದುರು ಹಾಜರು
01/02/2025, 14:55

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸುಮಾರು ಒಂದೂವರೆ ದಶಕ ಕಾಲ ಭೂಗತವಾಗಿದ್ದ ನಕ್ಸಲ್ ರವೀಂದ್ರ ಅವರು ಇಂದು ಚಿಕ್ಕಮಗಳೂರು ಎಸ್ಪಿ ಕಚೇರಿಗೆ ಆಗಮಿಸಿ ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾಗಿದ್ದಾರೆ.
ನಾಗರೀಕ ಶಾಂತಿಗಾಗಿ ವೇದಿಕೆ ಸದಸ್ಯರ ಜೊತೆ ರವೀಂದ್ರ ಅವರು ಎಸ್ ಪಿ ಕಚೇರಿಗೆ ಆಗಮಿಸಿದರು.
ಜಿಲ್ಲೆಯಲ್ಲಿ ರವೀಂದ್ರ ಮೇಲೆ 14 ಕೇಸ್ ಗಳಿವೆ. ಒಂದೂವರೆ ದಶಕದಿಂದ ರವೀಂದ್ರ ಭೂಗತನಾಗಿದ್ದರು. ರವೀಂದ್ರ ಅವರು ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದವರು.