ಇತ್ತೀಚಿನ ಸುದ್ದಿ
ಮಂಗಳೂರು ನಗರ ಪೊಲೀಸರಿಗೆ ವೆರಿಕೋಸ್ ವೆನ್ಸ್ ಕುರಿತು ಒಂದು ದಿನದ ಕಾರ್ಯಾಗಾರ; ಉಚಿತ ತಪಾಸಣೆ
19/01/2022, 20:03
ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವೆರಿಕೋಸ್ ವೆನ್ಸ್ ನ ಬಗ್ಗೆ ಒಂದು ದಿನದ ಕಾರ್ಯಾಗಾರ ಹಾಗೂ ಉಚಿತ ತಪಾಸಣೆ ಮಂಗಳವಾರ ಜರುಗಿತು.
ಪೊಲೀಸ್ ಉಪ ಆಯುಕ್ತ ಹರಿರಾಮ್ ಶಂಕರ್ ಮಾತನಾಡಿ, ಪೊಲೀಸ್ ಕರ್ತವ್ಯದಲ್ಲಿ ಮಾನಸಿಕ ಸಾಮರ್ಥ್ಯ ಎಷ್ಟು ಅಗತ್ಯವೋ ದೈಹಿಕ ಸಾಮರ್ಥ್ಯವೂ ಅಷ್ಟೇ ಅಗತ್ಯವಾಗಿರುತ್ತದೆ. ಪೋಲೀಸ್ ವೃತ್ತಿಗೆ ಸೇರುವ ಮೊದಲು ಎಲ್ಲಾ ಮಾನದಂಡಗಳಲ್ಲಿ ಪರೀಕ್ಷಿಸಿ ಪರಿಶೀಲಿಸಿ ಅವರುಗಳನ್ನು ಕರ್ತವ್ಯಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಕಾಲಕ್ರಮೇಣ ವೈಯಕ್ತಿಕ ಜೀವನ ಹಾಗೂ ದೈಹಿಕ ಆರೋಗ್ಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಹಾಗಾಗಿ ಕೆಲವೊಮ್ಮೆ ಇಂಥ ಸೌಲಭ್ಯಗಳನ್ನು ಸರ್ಕಾರದಿಂದ ಅಥವಾ ಇಲಾಖೆಯಲ್ಲಿ ಕಲ್ಪಿಸಿಕೊಟ್ಟರೆ ಇದರ ಸಂಪೂರ್ಣ ಫಲವನ್ನು ಪಡೆಯಬೇಕಾಗಿ ತಿಳಿಸಿದರು.
ಜೊತೆಗೆ ಈಗಾಗಲೇ ಇಲಾಖೆಯಲ್ಲಿನ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹಲವು ರೀತಿಯ ದೈಹಿಕ ಆರೋಗ್ಯದ ಮೇಲೆ ಗಮನ ಹರಿಸುವಂತೆ ಹಲವಾರು ಕಾರ್ಯಕ್ರಮಗಳನ್ನು ನಿಯೋಜಿಸುವುದರ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತರಲ್ಲಿ ಚರ್ಚಿಸಿರುವುದಾಗಿ ತಿಳಿಸಿದರು.
ಇಂದಿನ ಕಾರ್ಯಾಗಾರ ಹಾಗೂ ತಪಾಸಣಾ ಶಿಬಿರದಲ್ಲಿ ಸಂಪೂರ್ಣವಾಗಿ ಆಯುರ್ವೇದ ಮುಖೇನ ಆಗಿರುವುದರಿಂದ ಸ್ವತಹ ನನ್ನ ತಾಯಿ ಕೂಡ ಆಯುರ್ವೇದ ಪಂಡಿತೆಯಾಗಿದ್ದು ಆಯುರ್ವೇದದ ಮೇಲೆ ನನಗೆ ನಂಬಿಕೆ ಇದೆ.ಎಂದರು.
ಕಾರ್ಯಾಗಾರದ ಮತ್ತು ತಪಾಸಣಾ ಸೌಲಭ್ಯ ವನ್ನು ಸಂಪೂರ್ಣ ವಾಗಿ ಸದುಪಯೋಗ ಮಾಡಿಕೊಳ್ಳಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಆಯೋಜಕಿ ಸುಶ್ಮಿತಾ ಅವರು ಪೊಲೀಸ್ ಸಿಬ್ಬಂದಿಗಳ ಕುಂದು ಕೊರತೆಗಳನ್ನು ಆಲಿಸಿ, ಆರೋಗ್ಯ ಸಂಬಂಧ ಕಾರ್ಯಕ್ರಮ ಹಾಗೂ ಚಟುವಟಿಕೆ ನಡೆಸಿದರು.
ಅಪರಾಧ ವಿಭಾಗ ಡಿ. ಸಿ.ಪಿ ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಟ್ರಾಫಿಕ್ ಎಸಿಪಿ ನಟರಾಜ್ ಕಾರ್ಯಕ್ರಮ ನಿರೂಪಿಸಿದರು.