10:08 AM Monday23 - September 2024
ಬ್ರೇಕಿಂಗ್ ನ್ಯೂಸ್
2 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬಾಲಕಿಯರ ಕ್ರೀಡಾ ವಸತಿ ನಿಲಯ ಕಟ್ಟಡ ಉದ್ಘಾಟನೆ ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಗ್ರಾಪಂ ಆವರಣಕ್ಕೆ ಕಾರು… ವಿಶ್ವ ವಿಜ್ಞಾನಿಗಳ ಪಟ್ಟಿ: ಬಳ್ಳಾರಿಯ ವಿಎಸ್‌ಕೆಯುನ ಮೂವರು ಪ್ರಾಧ್ಯಾಪಕರಿಗೆ ಸ್ಥಾನ ​ ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಪರಿಗಣಿಸಿ: ಪಂಪಾಪತಿ ಆಗ್ರಹ ನಂಜನಗೂಡು: 20 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ

ಇತ್ತೀಚಿನ ಸುದ್ದಿ

ಮಂಗಳೂರು ಲಯನ್ಸ್ ಜಿಲ್ಲೆ 317D ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ

12/07/2021, 17:40

ಮಂಗಳೂರು(reporterkarnataka news) : ಸೇವಾ ಕಾರ್ಯದ ಮೂಲಕ ಹಲವಾರು ಮಂದಿಯ ಬದುಕಿಗೆ ಬೆಳಕು ನೀಡಬಹುದು. ನಾವು ಮಾಡುವ ಸೇವಾ ಕಾರ್ಯದಿಂದ ಹಲವು ಮಂದಿಯ ಜೀವನ ರೂಪಿಸ ಬಹುದು. ನಮ್ಮ ಮಾನವೀಯ ಸೇವೆಯಿಂದ ಅದೇಷ್ಟೋ ಮಕ್ಕಳನ್ನು ರಕ್ಷಿಸಬಹುದು. ಸಿಕ್ಕಿದ ಅವಕಾಶವನ್ನು ಸದಪಯೋಗಪಡಿಸಿಕೊಂಡು ಸೇವೆ ಮಾಡಿದಾಗ ಆತ್ಮಕ್ಕೆ ತೃಪ್ತಿ ಸಿಗುತದೆ. ಅಂತಹ ಸೇವಾಕಾರ್ಯವನ್ನು ಲಯನ್ಸ್ ಸಂಸ್ಥೆ ನಿರಂತರವಾಗಿ ಮಾಡುತ್ತಾ ಬಂದಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಲಯನ್ಸ್ ಕ್ಲಬ್ ಮಂಗಳೂರು ಇದರ ಮಾಜಿ ಜಿಲ್ಲಾ ಗವರ್ನರ್ ಅರುಣ್ ಶೆಟ್ಟಿ ಹೇಳಿದರು.

ಅವರು ಮಲ್ಲಿಕಟ್ಟೆ ಲಯನ್ ಸೇವಾ ಮಂದಿರದಲ್ಲಿ ಶನಿವಾರ ಸಂಜೆ ನಡೆದ ಲಯನ್ಸ್ ಕ್ಲಬ್ ಮಂಗಳೂರು ಲಯನ್ಸ್ ಜಿಲ್ಲೆ 317D, ಇದರ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದರು.  

ಸಮಾಜದ ಬಗ್ಗೆ ಚಿಂತನೆ, ಕಳಕಳಿ ಇರಬೇಕು. ಹಾಗಾದಾಗ ಮಾತ್ರ ಸೇವೆ ಮಾಡಬೇಕು ಎಂಬ ಮನೋಭಾವನೆ ಬೆಳೆಯುತ್ತದೆ. ಸೇವೆಯಲ್ಲಿ ಮುಂಚೂಣಿಯಲ್ಲಿರುವ ಲಯನ್ಸ್ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಜನಪರ ಸೇವಾಚಟುವಟಿಕೆಗಳು ನಡೆಯುಂತಾಗಲಿ ಎಂದು ಶುಭಹಾರೈಸಿದರು.

ನಿಕಟ ಪೂರ್ವ ಅಧ್ಯಕ್ಷ ಕೃಷ್ಣನಂದ ಪೈ ಅವರ ನೇತೃತ್ವದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಬಿ. ಸತೀಶ್ ರೈ, ಕಾರ್ಯದರ್ಶಿ ಸುಪ್ರಿತಾ ಜಿ.ಶೆಟ್ಟಿ, ಕೋಶಾಧಿಕಾರಿ ಡೆನ್ನಿಸ್ ರೋಡ್ರಿಗಸ್ ಹಾಗೂ ಮತ್ತಿತ್ತರ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು.  

ನಿಕಟಪೂರ್ವ ಕಾರ್ಯದರ್ಶಿ ಪ್ರಶಾಂತ್ ಕಡಬ ಮತ್ತು ನಿಕಟಪೂರ್ವ ಕೋಶಾಧಿಕಾರಿ ಎಂ.ಸುಧಾಕರ್ ಶೆಟ್ಟಿ ಅವರು ನಿರ್ಗಮನ ಅಧ್ಯಕ್ಷ  ಕೃಷ್ಣನಂದ ಪೈ ಹಾಗೂ ಪತ್ನಿ ಕವಿತಾ ಪೈ ಅವರನ್ನು ಸನ್ಮಾನಿಸಿ ಗೌರವಿಸಿದರು.  

ಕಾರ್ಯಕ್ರಮದಲ್ಲಿ ಜಿಲ್ಲಾ ಡಯಲಿಸ್ ಸೆಂಟರ್‌ಗೆ ಅರ್ಥಿಕ ನೆರವು ನೀಡಲಾಯಿತು. ಉಮೇಶ್ ಪ್ರಭು ಇವರು ಸೆಂಟರ್‌ನ ಪ್ರಮುಖರಾದ ಪಿಡಿಜಿ ಕೆ.ಸಿ.ಪ್ರಭು ಇವರಿಗೆ  10000 ರೂ.ನ ಚೆಕ್ ಹಸ್ತಾಂತರಿಸಿದರು.  
ಕಾರ್ಯಕ್ರಮದಲ್ಲಿ ರಿಚರ್ಡ್ ಲೋಬೋ ಹಾಗೂ ಆಲಿಸ್ ಲೋಬೋ ಅವರು ಸರಿಪಳ್ಳ ಹಾಗೂ ಕುಲಶೇಖರದ ಅರ್ಥಿಕವಾಗಿ ಹಿಂದುಳಿದ  25  ಬಡ ಕುಟುಂಬಗಳ ಮಕ್ಕಳಿಗೆ ಅಹಾರವನ್ನು ವಿತರಿಸಿದರು. ಮಾತ್ರವಲ್ಲದೇ ಈ ದಂಪತಿಗಳು ಕೆಲವು ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ರೂ. 60000 ನೆರವು ನೀಡಿದರು.  

ನ್ಯಾನ್ಸಿ ಮಸ್ಕರೆನ್ಸ್ ಇವರು ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯಾದ ಕ್ಲಾರ ಮೈಕಲ್ ಫೆರ್ನಾಂಡಿಸ್ ಇವರಿಗೆ ರೂ. ಹತ್ತು ಸಾವಿರ ನೆರವು ನಿಡಿದರು. ರಿಕ್ಷಾ ಚಾಲಕರಿಗೆ ಗಿಡ ಮತ್ತು ಮಾಸ್ಕ್ ವಿತರಿಸಲಾಯಿತು.

ರಿಚರ್ಡ್ ಲೋಬೊ ಮತ್ತು ಆಲಿಸ್ ಲೋಬೊ ಅವರು ವೆನ್ಲಾಕ್ ಆಸ್ಪತ್ರೆಯ ರೋಗಿಗಳ ಆಹಾರಕ್ಕಾಗಿ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್‌ಗೆ ರೂ. 10000  ಸಹಾಯಧನ ನೀಡಿದರು. ಜೊತೆಗೆ ಲಿಯೋ ಕ್ಲಬ್‌ಗೆ ರೂ. 5 ಸಾವಿರ ದೇಣಿಗೆ ನೀಡಿದರು. ಆಸಿಫ್ ಮೊಹಮ್ಮದ್ ಮತ್ತು ಲುಬ್ನಾ ಆಸಿಫ್ ಇವರು ಸತೀಶ್ ಕುಮಾರ್ ದಾಸ್ ಇವರಿಗೆ ಸುಮಾರು 9500 ರೂ ಮೌಲ್ಯದ ಕೃತಕ ಅಂಗವನ್ನು ಡೊನೆಟ್ ಮಾಡಿದರು.

ಇತ್ತೀಚಿಗೆ ಹೃದಯ ಶಸ್ತ್ರಚಿಕಿತ್ಸೆಗೊಳಗಾದ ಶಿವ ನಾಯಕ ಇವರಿಗೆ ರವಿಶಂಕರ್ ರೈ ಅವರು ರೂ. ಐದು ಸಾವಿರ ನೆರವು ನೀಡಿದರು.  ಸುಮನಾ ವೇಣು ಗೋಪಾಲ್ ಶೆಣೈ ಇವರು ಶಾಲೆಯೊಂದಕ್ಕೆ ಶುದ್ಧ ಕುಡಿಯುವ ನೀರಿಗಾಗಿ ಅಕ್ವಾಗಾರ್ಡ್ ಅನ್ನು ದೇಣಿಗೆ ನೀಡಿದರು. ಜೋಸೆಫ್ ಮೆನೆಜೆಸ್ ಇವರು  ಆಟೋ ಚಾಲಕರಿಗೆ ರೂ.5000 ಮೌಲ್ಯದ 14 ಆಹಾರ ಕಿಟ್‌ಗಳನ್ನು ನೀಡಿದರು.  ಐಪಿಡಿಜಿ

ಗೀತಾಪ್ರಕಾಶ್ ಅವರು ಲಯನ್ಸ್ ಕ್ಲಬ್‌ನ ಸದಸ್ಯರ ಅನುಕೂಲಕ್ಕಾಗಿ ಪಿಪಿಟಿ ಕಿಟ್ಸ್  ಮತ್ತು ಫೇಸ್ ಶೀಲ್ಡ್ ಅನ್ನು ದೇಣಿಗೆ ನೀಡಿದರು.

ವಲಯ ಅಧ್ಯಕ್ಷ ಶೇಖರ್ ಪೂಜಾರಿ, ಪ್ರಾಂತೀಯ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ಎರಡನೇ ಉಪ ಗವರ್ನರ್ ಮೆಲ್ವಿನ್ ಡಿಸೋಜ,  ಜಿಲ್ಲಾ ಸಂಪುಟ ಕಾರ್ಯದರ್ಶಿ ಶಶಿಧರ ಮಾರ್ಲ, ಲಿಯೋ ಕ್ಲಬ್ ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಬೆವುರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಗವರ್ನರ್ ಪಿಡಿಜಿ ಕೆ.ಸಿ.ಪ್ರಭು, ರೋನಾಲ್ಡ್ ಗೋಮ್ಸ್, ಜಿಲ್ಲಾ ಸಾರ್ವಜನಿಕ ಸಂಪರ್ಕಧಿಕಾರಿ ದಾಮೋಧರ್ ಬಿ.ಎಮ್, ಮಾಜಿ ಕ್ಯಾಬಿನೆಟ್ ಕಾರ್ಯದರ್ಶಿ ಕುಡ್ಪಿ ಅರವಿಂದ್ ಶೆಣೈ, ಮೆಂಟರ್ ಗೋವರ್ಧನ ಶೆಟ್ಟಿ ಹಾಗೂ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  

ನೂತನ ಸದಸ್ಯರಾದ ಸಚಿನ್ ಶೆಟ್ಟಿ, ಪ್ರದೀಪ ಕುಮಾರ, ಬಿ. ಬಾಲಚಂದ್ರ,  ವಚನ ಶೆಟ್ಟಿ, ಅಮಿತ ಆಳ್ವ, ಗೀತಾ ಆರ್. ರೈ, ವೇದಾ ಜಿ. ರೈ, ಆಲಿಸ್ ಲೋಬೋ, ಅಪೂರ್ವ ನಾಯಕ, ಗೀತಾ ಪೈ ಇವರಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು.

ಕೆ. ಕೆ. ಪೈ ಸ್ವಾಗತಿಸಿದರು. ರಜಿನಾ ದಿನೇಶ ನೂತನ ಅಧ್ಯ್ಷರ ಪರಿಚಯ ಮಾಡಿದರು. ಕಾರ್ಯದರ್ಶಿ ಸುಪ್ರಿತಾ ಜಿ.ಶೆಟ್ಟಿ ವಂದಿಸಿದರು. ಪೌಲ್ ಜಿ ಆಕಿನಾಸ್ ಸಹಕರಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು