ಇತ್ತೀಚಿನ ಸುದ್ದಿ
ಮಂಗಳೂರು: ಕೇರಳ ಸಮಾಜ ವತಿಯಿಂದ ಸಂಭ್ರಮದ ಓಣಂ ಹಬ್ಬ ಆಚರಣೆ
12/09/2022, 00:05

ಮಂಗಳೂರು(reporterkarnataka.com):ಕೇರಳಿಗರು ಇಡೀ ವಿಶ್ವದಲ್ಲೇ ಆಚರಿಸುವ ಓಣಂ ಹಬ್ಬವನ್ನು ಕೇರಳ ಸಮಾಜಂ ವತಿಯಿಂದ ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಕೊಟ್ಟಕಳ ಆಡಿಟೋರಿಯಂನಲ್ಲಿ ಭಾನುವಾರ ಓಣಂ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ಭಾಗವಹಿಸಿದರು.
ಬಲಿ ಚಕ್ರವರ್ತಿಯು ವರ್ಷಕ್ಕೊಮ್ಮೆ ಭೂಮಿಗೆ ತನ್ನ ಪ್ರಜೆಗಳನ್ನು ಕಾಣಲು ಬರುವ ಕಾಲವನ್ನು ಅತ್ಯಂತ ಸಂಭ್ರಮದಿಂದ ಕೇರಳದಲ್ಲಿ ಆಚರಿಸಲಾಗುತ್ತದೆ. ಕೇರಳದ ಅತೀ ದೊಡ್ಡ ಹಬ್ಬವಾಗಿರುವ ಓಣಂ ಅನ್ನು ಮಂಗಳೂರಿನಲ್ಲಿ ನೆಲೆಸಿರುವ ಮಲಯಾಳಿಗಳು ಕೂಡ ಬಹಳ ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ.