ಇತ್ತೀಚಿನ ಸುದ್ದಿ
Mangaluru | ಜನತಾ ಡಿಲಕ್ಸ್ ಹೋಟೆಲ್ ಮಾಲಕ ಸೂರ್ಯನಾರಾಯಣ ರಾವ್ ಇನ್ನಿಲ್ಲ
10/10/2025, 21:03

ಮಂಗಳೂರು(reporterkarnataka.com): ನಗರದ ಬಳ್ಳಾಲ್ ಭಾಗ್ ಸಮೀಪದ ಪತ್ತುಮುಡಿ ಜನತಾ ಡಿಲಕ್ಸ್ ಹೋಟೆಲ್ ನ ಮಾಲಕರಾದ ಸೂರ್ಯನಾರಾಯಣ ರಾವ್ ಇಂದು ಸಂಜೆ ಮಂಗಳೂರಿನಲ್ಲಿ ದೈವಾಧೀನರಾಗಿದ್ದಾರೆ.
ನಾಳೆ (ಶನಿವಾರ) ಬೆಳಿಗ್ಗೆ 8-00ರಿಂದ 10:00 ಗಂಟೆಯ ತನಕ ಮಂಗಳೂರಿನ ಪತ್ತುಮುಡಿ ಸೌಧದಲ್ಲಿ ಮೃತರ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶವಿದೆ. 10-30 ಕ್ಕೆ ಪತ್ತುಮುಡಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.