ಇತ್ತೀಚಿನ ಸುದ್ದಿ
ಮಂಗಳೂರು ಹೊರವಲಯದ ಗ್ಯಾರೇಜ್ ನಲ್ಲಿ ಅಗ್ನಿ ಅನಾಹುತ: ಬಸ್ ಗಳಿಗೆ ಬೆಂಕಿ; ಆಕಾಶದತ್ತ ಬೆಂಕಿಯ ಕೆನ್ನಾಲಗೆ
03/02/2023, 23:25
ಮಂಗಳೂರು(reporterkarnataka.com):ನಗರದ ಹೊರವಲಯದ ನಡುಮೊಗೇರುವಿನಲ್ಲಿ ಗ್ಯಾರೇಜಿನಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು, ಬಸ್ಸುಗಳು ಬೆಂಕಿಗಾಹುತಿಯಾಗಿವೆ. ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಈ ಗ್ಯಾರೇಜ್ ಇದೆ. ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದೆ. ಟ್ರಾನ್ಸ್ ಫಾರ್ಮರ್ ಬ್ಲಾಸ್ಟ್ ನಿಂದ ಬೆಂಕಿ ಉಂಟಾಗಿದೆ ಎನ್ನಲಾಗಿದೆ.







ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.














