8:11 PM Saturday15 - November 2025
ಬ್ರೇಕಿಂಗ್ ನ್ಯೂಸ್
ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ…

ಇತ್ತೀಚಿನ ಸುದ್ದಿ

ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಕಚೇರಿ ಉದ್ಘಾಟನೆ: ಸಕಲ ಸಿದ್ಧತೆ ಬಹುತೇಕ ಪೂರ್ಣ

18/01/2025, 15:40

ಮಂಗಳೂರು(reporterkarnataka.com):ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ ನಡೆಯಲಿರುವ ಬಹು ನಿರೀಕ್ಷಿತ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಸೀಸನ್-3 ಯ ಕಚೇರಿಯು ಮಣ್ಣಗುಡ್ಡೆಯ ಎಸ್.ಎಲ್ ಶೇಟ್ ಜುವೆಲ್ಲರ್ಸ್ & ಡೈಮಂಡ್ ಹೌಸ್ ಬಳಿ ಉದ್ಘಾಟನೆಗೊಂಡಿತು.

ನಂತರ ಮಾತನಾಡಿದ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ ಅವರು, ಜನವರಿ 18 ರಿಂದ 22 ರ ವರೆಗೆ 5 ದಿನಗಳ ಕಾಲ ನಡೆಯಲಿರುವ ಸ್ಟ್ರೀಟ್ ಫುಡ್ ಫಿಯೆಸ್ಟಗೆ ಸಂಬಂಧಪಟ್ಟ ಯಾವುದೇ ಮಾಹಿತಿಗಾಗಿ ಮಳಿಗೆದಾರರು, ಸಾರ್ವಜನಿಕರು, ಈ ಕಚೇರಿಯನ್ನು ಸಂಪರ್ಕಿಸಬಹುದು ಎಂದರು.
ಸ್ಟ್ರೀಟ್ ಫುಡ್ ಫಿಯೆಸ್ಟಗೆ ಸಂಬಂಧಿಸಿದಂತೆ ಈಗಾಗಲೇ ಸಕಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಚಾಯ್ ವಾಲಾ ಡಾಲಿ ಎಲ್ಲರ ಪ್ರಮುಖ ಆಕರ್ಷಣೆ ಕೇಂದ್ರವಾಗಿದ್ದು ಇದೇ ರೀತಿಯ ಅನೇಕ ವಿಶಿಷ್ಟಗಳು ಈ ಬಾರಿ ಇರಲಿದೆ. ಜನವರಿ 18ರ ಸಂಜೆ 6 ಗಂಟೆಗೆ ಹಲವು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಸ್ಟ್ರೀಟ್ ಫುಡ್ ಫಿಯೆಸ್ಟಗೆ ಅದ್ದೂರಿ ಚಾಲನೆ ದೊರೆಯಲಿದೆ ಎಂದರು.
ಆನ್ ಲೈನ್ ಮೂಲಕ ನೂರಾರು ಸಂಖ್ಯೆಯ ಆಹಾರ ಮಳಿಗೆಗಳು ನೋಂದಾಯಿಕೊಂಡಿದ್ದು, ಕಳೆದೆರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಇನ್ನಷ್ಟು ಮನರಂಜನಾ ಕಾರ್ಯಕ್ರಮಗಳ ಜೊತೆಗೆ ಮತ್ತಷ್ಟು ಹೊಸತನಗಳು ಇರಲಿದೆ. ಸಾರ್ವಜನಿಕರ ಸುರಕ್ಷತೆ, ಸ್ವಚ್ಛತೆ, ಪಾರ್ಕಿಂಗ್, ಸಹಿತ ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ರೀತಿಯಲ್ಲೂ ವಿಶೇಷ ಆದ್ಯತೆ ನೀಡಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಪ್ರತಿಷ್ಠಾನದ ಪ್ರಮುಖರಾದ ನರೇಶ್ ಶೆಣೈ, ಲಲಿತ್ ಮೆಂಡನ್, ಕಿರಣ್ ಶೆಣೈ, ಜಗದೀಶ್ ಕದ್ರಿ, ಸಂಜಯ್ ಪೈ , ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು