ಇತ್ತೀಚಿನ ಸುದ್ದಿ
ಮಂಗಳೂರು: ಡಿವೈಡರ್ ಹಾರಿದ ಕಾರು ಪ್ರಕರಣ; ಗಾಯಾಳು ಮಹಿಳೆ ಸಾವು; ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ
23/04/2022, 13:53

ಮಂಗಳೂರು(reporterkarnataka.com) : ನಗರದ ಬಲ್ಲಾಳ್ ಬಾಗ್ ಬಳಿ ಎರಡು ವಾರಗಳ ಹಿಂದೆ ಬಿಎಂಡಬ್ಲ್ಯು ಕಾರು ಡಿವೈಡರ್ ಹಾರಿದ ಪರಿಣಾಮ ಉಂಟಾದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರೀತಿ ಮನೋಜ್ (47) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕರಂಗಲ್ಪಾಡಿ ನಿವಾಸಿ ಪ್ರೀತಿ ಮನೋಜ್ ಅವರು ಎ. 9ರಂದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇಂಟೀರಿಯರ್ ಡೆಕೊರೇಟರ್ ಶ್ರವಣ್ ಕುಮಾರ್ ಎಂಬಾತ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ದಾಟಿ ಸ್ಕೂಟರ್ ಮತ್ತು ಕಾರಿಗೆ ಡಿಕ್ಕಿ ಹೊಡೆದಿತ್ತು.
ಈ ನಡುವೆ ಮೆದುಳು ನಿಷ್ಕೃಯಗೊಂಡ ಪ್ರೀತಿ ಅವ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.