ಇತ್ತೀಚಿನ ಸುದ್ದಿ
Mangaluru | ಪಡೀಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಏರಿದ ಕಾರು!
10/04/2025, 09:52

ಮಂಗಳೂರು(reporterkarnataka.com): ನಗರದ ಪಡೀಲ್ ಬಳಿಯ ಅಳಪೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಏರಿದ ಘಟನೆ ನಡೆದಿದೆ.
ಪಡೀಲ್ ಕಡೆಯಿಂದ ನಂತೂರಿನ ಕಡೆಗೆ ಸಾಗುತ್ತಿದ್ದ ಕಾರು, ಅಳಪೆಯ ಕಡಿದಾದ ತಿರುವಿನಲ್ಲಿ ಚಲಿಸುತ್ತಿದ್ದಾಗ
ಚಾಲಕ ನಿಯಂತ್ರಣಕ್ಕೆ ಸಿಗದ ಕಾರು, ನೇರವಾಗಿ ರಸ್ತೆಯ ಡಿವೈಡರ್ ಮೇಲೆರಿದೆ. ಕಾರಿನಲ್ಲಿ ಚಾಲಕ ಮಾತ್ರವಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗದ ಚಕ್ರಕ್ಕೆ ಹಾನಿಯುಂಟಾಗಿದೆ. ಬಳಿಕ ಡಿವೈಡರ್‌ನಲ್ಲಿದ್ದ ಕಾರನ್ನು ಸಾರ್ವಜನಿಕರೇ ಸೇರಿಕೊಂಡು ಬದಿಗೆ ಸರಿಸಿದ್ದಾರೆ.