5:52 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಂಗಳೂರು: ಡಿಸೆಂಬರ್ 15- 17ರಂದು 49ನೇ ರಾಜ್ಯ, 8ನೇ ಅಂತಾರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನ

14/12/2023, 22:58

ಮಂಗಳೂರು(reporterkarnataka.com): ದ.ಕ. ಜಿಲ್ಲಾ ಇಂಡಿಯನ್ ಡೆಂಟಲ್ ಎಸೋಸಿಯೇಷನ್‌ ಅತಿಥೇಯದಲ್ಲಿ 49ನೇ ರಾಜ್ಯ, 8ನೇ ಅಂತರಾಜ್ಯ ದಂತ ವೈದ್ಯಕೀಯ ಮಹಾ ಸಮ್ಮೇಳನ ನಗರದ ಅತ್ತಾವರ ಕಾಪ್ರಿಗುಡ್ಡದಲ್ಲಿರುವ ಮರೆನ ಗ್ರೀನ್ಸ್‌ನಲ್ಲಿ ಡಿ.15 ಮತ್ತು 16 ಮತ್ತು 17ರಂದು ಜರುಗಲಿದೆ.
ಡಿ.15ರಂದು ಬೆಳಗ್ಗೆ 10 ಗಂಟೆಗೆ ಮಾಹೆಯ ವೈಸ್ ಚಾನ್ಸಲರ್ ಲೆ.ಜ. ಡಾ. ವೆಂಕಟೇಶ್ ಉದ್ಘಾಟಿಸುವರು. ಮಾಹೆಯ ಪ್ರೊ.ಚಾನ್ಸಲರ್ ಡಾ.ಶರತ್ ರಾವ್ ಮುಖ್ಯ ಅತಿಥಿಯಾಗಿರುವರು. ಡಿ.16ರಂದು ನಡೆಯುವ ಬೆಳಗ್ಗೆ 9.45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಐಡಿಎ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜೀವ್ ಕುಮಾರ್ ಚುಗ್, ರಾಷ್ಟ್ರೀಯ ಉಪಾಧ್ಯಕ್ಷ ಡಾ.ಶಿವಶರಣ್ ಶೆಟ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಅಶೋಕ್ ಡಿ.ದೋಬ್ಲೆ, ರಾಜ್ಯ ಅಧ್ಯಕ್ಷ ಡಾ.ರಾಮಮೂರ್ತಿ ಟಿ.ಕೆ, ಜಿಲ್ಲಾ ಐಡಿಎ ಅಧ್ಯಕ್ಷ ಡಾ.ಜುನೈದ್ ಅಹ್ಮದ್ ಹಾಗೂ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿರುವರು. ಒಟ್ಟು 26 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ಭಾಷಣ, 231 ಪ್ರಬಂಧ ಮಂಡನೆ, 279 ಚಿತ್ರ ಪ್ರಬಂಧ ಮಂಡನೆ, 13 ಪ್ರಾತ್ಯಕ್ಷಿತೆ ಶಿಬಿರ ನಡೆಯಲಿದೆ. ದೇಶದ ವಿವಿಧೆಡೆಯಿಂದ ಅಂದಾಜು 2 ಸಾವಿರ ದಂತ ವೈದ್ಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು