10:19 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ…

ಇತ್ತೀಚಿನ ಸುದ್ದಿ

ಮಂಗಳೂರು ಧರ್ಮ ಪ್ರಾಂತ್ಯದ ಧಾರ್ಮಿಕ ಮುಖಂಡರು ಮತ್ತು ಪ್ರತಿನಿಧಿಗಳಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ: ಅಭಿನಂದನೆ ಸಲ್ಲಿಕೆ

16/07/2022, 00:26

ಮಂಗಳೂರು(reporterkarnataka.com):  ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಮಂಗಳೂರು ಧರ್ಮ ಪ್ರಾಂತ್ಯದ ಧಾರ್ಮಿಕ ಮುಖಂಡರು, ಕೆಥೋಲಿಕ್ ಸಭಾದ ಪದಾಧಿಕಾರಿಗಳು ಮತ್ತು ಯುವ ಮುಖಂಡರು, ಪಾದ್ರಿಗಳು, ಸನ್ಯಾಸಿನಿಯರು ಮತ್ತು ಜನ ಪ್ರತಿನಿಧಿಗಳು ಶುಕ್ರವಾರ ಹೆಗ್ಗಡೆ ಅವರ ನಿವಾಸದಲ್ಲಿ ಭೇಟಿಯಾಗಿ ಮಂಗಳೂರು ಧರ್ಮ ಪ್ರಾಂತ್ಯದ ಪರವಾಗಿ ಆಭಿನಂದನೆ ಸಲ್ಲಿಸಿದರು. 

ಈ ವೇಳೆ ಧರ್ಮ ಪ್ರಾಂತ್ಯದ ಶ್ರೇಷ್ಠ ಗುರು ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಂ ಎಲ್. ನೊರೊನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಅತೀ ವಂದನೀಯ ಡಾ. ಜೆ. ಬಿ. ಸಲ್ಡಾನ್ಹಾ ಮತ್ತು ರೋಯ್ ಕ್ಯಾಸ್ಟೆಲಿನೊ, ‘ರಾಕ್ಣೊ’ ಕೊಂಕಣಿ ವಾರಪತ್ರಿಕೆಯ ನಿಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ, ಕೆನರಾ ಕಮ್ಯುನಿಕೇಶನ್ ಸೆಂಟರ್‌ನ ನಿರ್ದೇಶಕರಾದ ವಂದನೀಯ ಅನಿಲ್ ಫೆರ್ನಾಂಡಿಸ್, ಧರ್ಮ ಪ್ರಾಂತ್ಯ ಪಾಲನಾ ಪರಿಷತ್ ಕಾರ್ಯದರ್ಶಿ ಡಾ ಜಾನ್ ಡಿಸಿಲ್ವಾ, ಅಂತರ್-ಧರ್ಮಿಯ ಸಂವಾದ ಆಯೋಗದ ಸದಸ್ಯ ರೋಮನ್ಸ್ ಲೋಬೋ ಬಿಷಪ್ ಮತ್ತು ಧರ್ಮಪ್ರಾಂತ್ಯದ ಪರವಾಗಿ  ಡಾ. ಹೆಗ್ಗಡೆ ಅವರನ್ನು ಅಭಿನಂದಿಸಿದರು.

ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರ ಪರವಾಗಿ ಶ್ರೇಷ್ಟಗುರು ಅತೀ ವಂದನೀಯ ಮಾಕ್ಸಿಂ
ಎಲ್.ನೊರೊನ್ಹಾ ಅವರು ಡಾ. ಹೆಗ್ಗಡೆ ಅವರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ಹೆಗ್ಗಡೆಯವರು “ಮಂಗಳೂರು ಬಿಷಪ್ ಇತ್ತೀಚೆಗೆ ನನ್ನೊಂದಿಗೆ ದೂರವಾಣಿ ಮೂಲಕ ಸಂದರ್ಶಿಸಿ ಹಾರೈಸಿದಾಗ ಅವರೊಂದಿಗೆ ಮಾತನಾಡಲು ನನಗೆ ತುಂಬಾ ಸಂತೋಷವಾಯಿತು. ಗ್ರಾಮೀಣಾಭಿವೃದ್ಧಿ ಯೋಜನೆಗಳು, ಸ್ವಯಂ ಉದ್ಯೋಗ ಮತ್ತು ಮಹಿಳಾ ಸಬಲೀಕರಣದ ಮೂಲಕ ನಾವು ಕೇಂದ್ರ ಸರ್ಕಾರವನ್ನು ಆಕರ್ಷಿಸಲು ಸಾಧ್ಯವಾಯಿತು ಮತ್ತು ಈ ಯಶಸ್ವಿ ಮಾದರಿಗಳು ದೇಶಾದ್ಯಂತ ಪುನರಾವರ್ತಿಸಲಾಗಿದೆ. ರಾಜ್ಯಸಭೆಗೆ ನನ್ನ ನಾಮನಿರ್ದೇಶನದ ಮೂಲಕ ನಾನು ದೇಶಕ್ಕೆ ನನ್ನ ಸೇವೆಯನ್ನು ವಿಸ್ತರಿಸುತ್ತೇನೆ ಮತ್ತು ನಿಮ್ಮೆಲ್ಲರನ್ನು ಪ್ರತಿನಿಧಿಸುತ್ತೇನೆ” ಎಂದು ನುಡಿದರು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷರುಗಳಾದ ಮನೋಹರ್ ಕುಟಿನ್ಹೊ ಮತ್ತು ವಿನೋದ್ ಪಿಂಟೋ, ಖಜಾಂಚಿ ಅಲ್ಫೋನ್ಸ್ ಫೆರ್ನಾಂಡಿಸ್, ಜಂಟಿ ಖಜಾಂಚಿ ಫ್ರಾನ್ಸಿಸ್ ಸೆರಾವೊ ಮತ್ತು ನಿಕಟಪೂರ್ವ ಅಧ್ಯಕ್ಷ ಪೌಲ್ ರೊಲ್ಫಿ ಡಿಕೋಸ್ಟಾ ಅವರು ಹೆಗ್ಗಡೆ ಅವರಿಗೆ ಹೂಗುಚ್ಚ ಮತ್ತು ಶಾಲು ಹೊದಿಸಿ ಅಭಿನಂದಿಸಿದರು.

ಕೆಥೋಲಿಕ್ ಸಭಾ, ಬೆಳ್ತಂಗಡಿ ಘಟಕದ ಅಧ್ಯಕ್ಷ ಎಡ್ವರ್ಡ್ ರೇಗೋ, ನಿಕಟಪೂರ್ವ ಅಧ್ಯಕ್ಷ ಜೆರೋಮ್ ಲೋಬೋ, ಉಪಾಧ್ಯಕ್ಷ ಅರುಣ್ ಫೆರ್ನಾಂಡಿಸ್ ಹಾಗೂ ಜಂಟಿ ಕಾರ್ಯದರ್ಶಿ ಗ್ರೆಗೊರಿ ಫೆರ್ನಾಂಡಿಸ್ ಅವರು ಡಾ. ಹೆಗ್ಗಡೆ ಅವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿದರು.

ಬೆಳ್ತಂಗಡಿ ವಲಯದ ಧರ್ಮಗುರು ಆತೀ ವಂದನೀಯ ಜೋಸೆಫ್ ಕಾರ್ಡೋಜ, ಪ್ರಾಂಶುಪಾಲರಾದ ವಂದನೀಯ ಕ್ಲಿಫರ್ಡ್ ಪಿಂಟೋ ಮತ್ತು ಪಾಲಿನ್ ರೇಗೋ ಕೂಡ ಪೂಜ್ಯರನ್ನು ಅಭಿನಂದಿಸಿದರು.

ಉಜಿರೆ ಚರ್ಚ್  ಧರ್ಮಗುರು ವಂದನೀಯ ಜೇಮ್ಸ್ ಡಿಸೋಜ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ವಿಜಯ್ ಲೋಬೊ, ಮಡಂತ್ಯಾರು ಚರ್ಚಿನ ಧರ್ಮಗುರು ವಂದನೀಯ ಬಾಸಿಲ್ ವಾಸ್,ಲಿಯೋ ರೋಡ್ರಿಗಸ್,  ವಿವೇಕ್ ವಿನ್ಸೆಂಟ್ ಪಾಯ್ಸ್ ಮತ್ತು ಜೆರಾಲ್ಡ್ ಮೊರಾಸ್ ಅವರು ಪೂಜ್ಯ ಡಾ. ಹೆಗ್ಗಡೆಯವರಿಗೆ ಅಭಿನಂದಿಸಿದರು.

ಬೆಳ್ತಂಗಡಿ ಮತ್ತು ಬದ್ಯಾರ್‌ನ ಧರ್ಮ ಭಗಿನಿಯರು ಸಿಸ್ಟರ್ ಫ್ಲೊಸ್ಸಿ, ಸಿಸ್ಟರ್ ರಮಿತಾ, ಸಿಸ್ಟರ್ ಜ್ಯೋತ್ಸ್ನಾ, ಸಿಸ್ಟರ್ ಸೇವ್ರಿನ್ ಮತ್ತು ಸಿಸ್ಟರ್ ವಲ್ಸಾ ಅವರು ಡಾ. ಹೆಗ್ಗಡೆಯವರನ್ನು ಅಭಿನಂದಿಸಿ ಪುಷ್ಪಗುಚ್ಚವನ್ನು ಅರ್ಪಿಸಿದರು.

ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‌ಮೆಂಟ್ ಮಂಗಳೂರು ಇದರ ಸಂಚಾಲಕರಾದ ವಂದನೀಯ ಅಶ್ವಿನ್ ಕಾರ್ಡೋಜ, ಅಧ್ಯಕ್ಷ ಜೈಸನ್ ಲಾರೆನ್ಸ್ ಕ್ರಾಸ್ತಾ ಮತ್ತು ನವೀನ್ ಡಿಸೋಜಾ ಪೂಜ್ಯರನ್ನು ಅಭಿನಂದಿಸಿದರು.

ರೋಮನ್ಸ್ ಲೋಬೋ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, “ಡಾ ಹೆಗ್ಗಡೆಯವರು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ಪಡೆದಿದ್ದಾರೆ, ಇದನ್ನು 2015 ರಲ್ಲಿ ಜನಸಾಮಾನ್ಯರ ಏಳಿಗೆಗೆ ಅವರ ಪರೋಪಕಾರಿ ಸೇವೆಗಳಿಗೆ ಮತ್ತು ದತ್ತಿ ಕಾರ್ಯಗಳಿಗಾಗಿ ಅವರಿಗೆ ನೀಡಲಾಯಿತು” ಎಂದರು. 


ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ಶ್ರೀ ಹೆಗ್ಗಡೆಯವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ರಾಜ್ಯದ ಪ್ರಾತಿನಿಧ್ಯವನ್ನು ವಿಸ್ತರಿಸುತ್ತಾರೆ. ಎಂದು ಅವರು ಉಲ್ಲೇಖಿಸಿದರು. ಐದು ದಶಕಗಳಿಗೂ ಹೆಚ್ಚು ಕಾಲ ನಿಷ್ಠಾವಂತ ಪರೋಪಕಾರಿಯಾದ ಪೂಜ್ಯರು ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗದ ಮತ್ತು ಸ್ತಿç-ಸಬಲೀಕರಣದ ಉಪಕ್ರಮಗಳನ್ನು ರಾಷ್ಟçಮಟ್ತದಲ್ಲಿ ವಿಸ್ತರಿಸುವ ಮೂಲಕ ಆವರ ಸೇವೆ ದೇಶದೆಲ್ಲೆಡೆ ವಿಸ್ತರಿಸಲಿ ಎಂದು ಲೋಬೊ ಹಾರೈಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು