ಇತ್ತೀಚಿನ ಸುದ್ದಿ
ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಮಾಜಿ ಶಾಸಕ ಲೋಬೊ ಚಾಲನೆ
05/03/2023, 18:17

ಮಂಗಳೂರು(reporterkarnataka.com): ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗ್ಯಾರಂಟಿ ನೋಂದಾಣಿ ಅಭಿಯಾನಕ್ಕೆ ಮಾಜಿ ಶಾಸಕ ಜೆ. ಆರ್. ಲೋಬೊ ಚಾಲನೆ ನೀಡಿದರು.
ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಉಚಿತ, ಮನೆಯ ಯಜಮಾನಿಗೆ ರೂ.2,000 ಮತ್ತು ಬಿಪಿಎಲ್ ಕಾರ್ಡ್ ಗೆ 10 ಕೆಜಿ ಅಕ್ಕಿ ಉಚಿತ ಒಳಗೊಂಡ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಕಂಟೋನ್ ಮೆಂಟ್ ವಾರ್ಡ್ ನಲ್ಲಿ ಜೆ. ಆರ್. ಲೋಬೊ ಭಾನುವಾರ ಆರಂಭಿಸಿದರು.
ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲೀಮ್, ವಾರ್ಡ್ ಅಧ್ಯಕ್ಷ ಸದಾಶಿವ ಕುಲಾಲ್, ಬೂತ್ ಅಧ್ಯಕ್ಷೆ ನೀನಾ, ಪ್ರಮುಖರಾದ ಫಾರೂಕ್, ಟಿ. ಕೆ. ಸುಧೀರ್, ದಿನೇಶ್ ಇದ್ದರು.