2:19 AM Tuesday22 - April 2025
ಬ್ರೇಕಿಂಗ್ ನ್ಯೂಸ್
ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ…

ಇತ್ತೀಚಿನ ಸುದ್ದಿ

ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರ:  ಕಾಂಗ್ರೆಸ್ ನಿಂದ ಮಾಜಿ ಶಾಸಕ ಜೆ. ಆರ್. ಲೋಬೊ ಮತ್ತೆ ಕಣಕ್ಕೆ?

05/04/2022, 12:28

ಮಂಗಳೂರು(reporterkarnataka.com): ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಲು ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಮೈ ಕೊಡವಿಕೊಂಡು ಎದ್ದು ಕುಳಿತಿವೆ. ಟಿಕೆಟ್ ಗಾಗಿ ಹೋರಾಟ ಮತ್ತೆ ಶುರುವಾಗಿದೆ. ಹಾಲಿ ಶಾಸಕರಲ್ಲಿ ಹೆಚ್ಚಿನವರಿಗೆ ಮತ್ತೆ ಅವಕಾಶ ಸಿಗಲಿದೆ. ಸೋತವರಲ್ಲಿ ಕೆಲವರು ಟಿಕೆಟ್ ವಂಚಿತರಾಗುವ ಸಾಧ್ಯತೆಯಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ಜೆ.ಆರ್. ಲೋಬೊ ಅವರನ್ನು ಮತ್ತೊಮ್ಮೆ ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.

ವಾಸ್ತವದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇದೆ. ಜೆ.ಆರ್. ಲೋಬೊ ಹಾಗೂ ಐವನ್ ಡಿಸೋಜ ಅವರ ನಡುವೆ ಬಿಗ್ ಫೈಟ್ ನಡೆಯುವ ಸಾಧ್ಯತೆಗಳಿವೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಕಾಂಗ್ರೆಸ್ ನ ಕೆಲವು ಕಾರ್ಪೊರೇಟರ್ ಗಳು ಕೂಡ ಟೆವೆಲ್ ಹಾಸಿದ್ದಾರೆ. ಆದರೆ ಬೆಂಗಳೂರಿನ ಮಾಹಿತಿ ಪ್ರಕಾರ ಲೋಬೊ ಅವರಿಗೆ ಮತ್ತೊಮ್ಮೆ ಅವಕಾಶ ನೀಡುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಕಳೆದ ಚುನಾವಣೆಯಲ್ಲಿ ಲೋಬೊ ಅವರ ಸೋಲು ಆಕಸ್ಮಿಕವಾಗಿದೆ. ಲೈಟ್ ಹೌಸ್ ರಸ್ತೆ ನಾಮಕರಣ ವಿವಾದ ಮತ್ತು

ಕಾಂಗ್ರೆಸ್ ಒಳಗಿನ ಆಂತರಿಕ ವೈರುಧ್ಯವೇ ಲೋಬೊ ಅವರ ಸೋಲಿಗೆ ಕಾರಣವಾಯಿತು ಎಂದು ವ್ಯಾಖ್ಯಾನಿಸಲಾಗಿದೆ.

ಜೆ.ಆರ್. ಲೋಬೊ ಅವರು ನಿವೃತ್ತ ಸರಕಾರಿ ಅಧಿಕಾರಿ. ಮಂಗಳೂರು ಮಹಾನಗರಪಾಲಿಕೆಯ ಕಮಿಷನರ್ ಆಗಿ ಕಾರ್ಯನಿರ್ವಹಿಸಿದವರು. 

ಲೋಬೊ ಕುರಿತು ಸಾಕಷ್ಟು ಸದಾಭಿಪ್ರಾಯಗಳಿವೆ. ಜತೆಗೆ ಮೊದಲ ಹಂತದ ಎಡಿಬಿ ಯೋಜನೆಯ ವಿಫಲತೆಯ ಆರೋಪವೂ ಅವರ ಮೇಲಿದೆ.

ಮಾಜಿ ಶಾಸಕರಾದ ಲೋಬೊ ಅವರು ಒಳ್ಳೆಯ ವರ್ಕರ್ ಎಂಬುದನ್ನು ಅವರ ವಿರೋಧಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಮಾತು ಕಡಿಮೆಯಾದರೂ ಕೆಲಸ ಜಾಸ್ತಿ. ಹಿಂಬಾಲಕರನ್ನು ಕಟ್ಟಿಕೊಂಡು ಅವರು ಎಲ್ಲಿಗೂ ಹೋಗುವುದಿಲ್ಲ. ಬಹು ಪರಾಕ್ ಹೇಳಲು ಹೊಗಳು ಭಟರೂ ಅವರಿಗೆ ಬೇಕಾಗಿಲ್ಲ. ಇದನ್ನು ಸ್ವಪಕ್ಷೀಯರೇ ಒಪ್ಪಿಕೊಳ್ಳುತ್ತಾರೆ.

ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿಗೆ ದಕ್ಕಲು

ಲೋಬೊ ಅವರ ಪಾತ್ರ ಪ್ರಮುಖವಾದದ್ದು. ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಪಟ್ಟಿಯಿಂದ ಮಂಗಳೂರನ್ನು ಹೊರಗಿಟ್ಟಿರುವಾಗ ಲೋಬೊ ಅವರು ಮಂಗಳೂರನ್ನು ಸ್ಮಾರ್ಟ್ ಸಿಟಿ ಸಾಲಿಗೆ ಸೇರಿಸಲು ಬಹಳಷ್ಟು ಸರ್ಕಸ್ ಮಾಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುಬಾಗಿರುವ ಹಳೆ ಬಂದರು ಯೋಜನೆಯನ್ನು 

ಪ್ರಸ್ತಾವನೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ ಕದ್ರಿ ಪಾರ್ಕ್ ಅಭಿವೃದ್ಧಿ, ಕದ್ರಿಯ ಹಳೆ ಜಿಂಕೆ ಪಾರ್ಕ್ ನಲ್ಲಿ ಸಂಗೀತ ಕಾರಂಜಿ, ಜಿಲ್ಲಾಧಿಕಾರಿ ಕಚೇರಿ ಪಡೀಲ್ ಗೆ ಸ್ಥಳಾಂತರ, ಇವೆಲ್ಲ ಲೋಬೊ ಅವರ ಕೊಡುಗೆಯಾಗಿದೆ. ಆದರೆ ಲೈಟ್ ಹೌಸ್ ಹಿಲ್ ರಸ್ತೆ ನಾಮಕರಣ ವಿಷಯ ಎಲ್ಲ ಬಣ್ಣವನ್ನು ಮಸಿ ನುಂಗಿತು ಎನ್ನುವ ಹಾಗೆ ಚುನಾವಣೆಯ ಸಮಯದಲ್ಲಿ ಲೋಬೊ ಅವರಿಗೆ ತೊಡಕಾಗಿ ಪರಿಣಮಿಸಿತ್ತು. ಇದರ ಜತೆಗೆ ಕೆಲವು ಸ್ವಪಕ್ಷೀಯರೇ ಅವರ ಕಾಲೆಳೆದು ಮತ್ತೆ ವಿಧಾನಸಭೆ ಮೆಟ್ಟಿಲು ಏರುವುದನ್ನು ತಪ್ಪಿಸಿದ್ದರು. ಇದೀಗ ಜೆ.ಆರ್. ಲೋಬೊ ಅವರು ಮತ್ತೆ ಅಖಾಡಕ್ಕೆ ಇಳಿಯುವ ಎಲ್ಲ ಸೂಚನೆಗಳಿವೆ. ಆದರೆ ರಾಜಕೀಯದಲ್ಲಿ ಯಾವುದೇ ಕ್ಷಣದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು