6:31 PM Saturday3 - May 2025
ಬ್ರೇಕಿಂಗ್ ನ್ಯೂಸ್
ತನಿಖೆಯ ಮುನ್ನವೇ ಫಾಝಿಲ್ ಕುಟುಂಬಕ್ಕೆ ಕ್ಲೀನ್ ಚಿಟ್; ಸ್ಪೀಕರ್ ಖಾದರ್ ತಕ್ಷಣ ರಾಜೀನಾಮೆ… Chikkamagaluru | ಪೆಹಲ್ಗಾಮ್ ದಾಳಿ: ಆಲ್ದೂರು ಪಟ್ಟಣ ಬಂದ್; ವ್ಯಾಪಾರ-ವಹಿವಾಟು ಸ್ತಬ್ದ; ವಾರದ… Kerala | ಪ್ರಧಾನಿ ಮೋದಿ – ಕೇರಳ ಸಿಎಂ ಪಿಣರಾಯಿ ವಿಜಯನ್ ಒಂದೇ… Karnataka High Court | ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಗೆ ಅಶ್ಲೀಲ ಪದ… ಅಲ್ಲಪಟ್ಟಣದಿಂದ ಮೆಲ್ಲ ಮೆಲ್ಲನೇ ಬಂದೆ…ರಾಮೇಶ್ವರಾ…ಅನ್ನದಾನೇಶ್ವರಾ: ಮನೆ ದೇವರ ಲಾವಣಿ ಹಾಡಿದ ಸಿಎಂ ಸಿದ್ದರಾಮಯ್ಯ Chikkamagaluru | ಜಯಪುರ ಅತ್ತಿಕುಡಿಗೆ ರಸ್ತೆ ಬದಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ Mangaluru | ಹುಟ್ಟೂರು ಬಂಟ್ವಾಳದತ್ತ ಸುಹಾಸ್ ಶೆಟ್ಟಿ ಪಾರ್ಥಿವ ಶರೀರ ಮೆರವಣಿಗೆ: ಬಿಗಿ… ಸುಹಾಸ್ ಶೆಟ್ಟಿ ಕೊಲೆ: ದ.ಕ. ಬಂದ್ ಗೆ ವಿಎಚ್ ಪಿ, ಭಜರಂಗದಳ ಕರೆ Breaking : ಬಜಪೆ : ಮಾರಕಾಯುಧಗಳಿಂದ ಹೊಡೆದು ಯುವಕನ ಕೊಲೆ ಕಾಂಗ್ರೆಸ್ ಪಕ್ಷದ ಜಾತಿ ಗಣತಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಖರ್ಗೆ, ರಾಹುಲ್…

ಇತ್ತೀಚಿನ ಸುದ್ದಿ

Mangaluru Crime | ಸುಹಾಸ್ ಶೆಟ್ಟಿ ಕೊಲೆ ಹಿಂದೆ ಫಾಜಿಲ್‌ ಸಹೋದರ: ಪೊಲೀಸ್ ಕಮಿಷನರ್ ಅಗರ್ವಾಲ್ ಬಹಿರಂಗ

03/05/2025, 15:11

ಮಂಗಳೂರು(reporterkarnataka.com):
ಬಜಪೆ ಸಮೀಪದ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಫಾಜಿಲ್‌ ಸಹೋದರ ಇರುವ ಅಂಶ ಬೆಳಕಿಗೆ ಬಂದಿದೆ. ಮಂಗಳೂರು ಪೊಲೀಸ್‌ ಕಮಿಷನ‌ರ್ ಅನುಪಮ್ ಅಗರ್ವಾಲ್ ಅವರು ಸುಹಾಸ್ ಕೊಲೆಯಲ್ಲಿ ಈ ಹಿಂದೆ ಹತ್ಯೆಗೀಡಾಗಿದ್ದ ಫಾಜಿಲ್‌ನ ಸಹೋದರ ಸಹಾಯ ಮಾಡಿದ್ದ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಸುಹಾಸ್ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ ಸಫಾನ್ ಆಗಿದ್ದಾನೆ. ಆತನ ಮೇಲೆ 2023ರಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಇದರ ಪ್ರತೀಕಾರಕ್ಕೆ ಫಾಜಿಲ್ ನ ತಮ್ಮನ ಸಹಾಯ ಪಡೆದು ಸುಹಾಸ್ ನ ಕೊಲೆ ಮಾಡಿದ್ದಾನೆ. ಮೇ 1ರ ರಾತ್ರಿ 6 ಮಂದಿ ಸೇರಿ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ ಎಂದರು.
ಪೇಜಾವರ ಶಾಂತಿಗುಡ್ಡೆ ನಿವಾಸಿ, ಬಜಪೆ ಕಿನ್ನಿಪದವಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಡ್ರೈವರ್ ಅಬ್ದುಲ್ ಸಫ್ಘಾನ್ (29), ಮೇಸ್ತಿ ಕೆಲಸ ಮಾಡಿಕೊಂಡಿದ್ದ ಶಾಂತಿಗುಡ್ಡೆ ನಿವಾಸಿ ನಿಯಾಜ್ (28), ಕೆಂಜಾರು ನಿವಾಸಿ ಮೊಹಮ್ಮದ್ ಮುಝಮಿಲ್ (32), ಕಳವಾರು ನಿವಾಸಿ ಕಲಂದರ್ ಶಾಫಿ (31), ಚಾಲಕ ವೃತ್ತಿ ಮಾಡುತ್ತಿದ್ದ ಕಳಸ ನಿವಾಸಿ ರಂಜಿತ್ (19), ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಳಸದ ನಾಗರಾಜ್ (20), ಜೋಕಟ್ಟೆ ನಿವಾಸಿ ಮೊಹಮ್ಮದ್ ರಿಜ್ವಾನ್ (28) ಮತ್ತು ಅದಿಲ್ ಮೆಹರೂಫ್ ಬಂಧಿತರು.
ಸಫ್ಘಾನ್ ಮೇಲೆ 2023ರಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಧನರಾಜ್ ಸೇರಿ ಸಫಾನ್ ಮೇಲೆ ಹಲ್ಲೆ ಮಾಡಿದ್ದರು. ಸಫ್ಘಾನ್ ಗೆ ಸುಹಾಸ್ ಕೊಲೆ ಮಾಡುವ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದರು. ಇದೇ ವೇಳೆ ಹತ್ಯೆಯಾಗಿದ್ದ ಫಾಜಿಲ್ ನ ತಮ್ಮನನ್ನು ಸಂಪರ್ಕಿಸಿ ಸುಹಾಸ್ ನನ್ನು ಕೊಲೆ ಮಾಡುವ ಯೋಜನೆ ಮಾಡಿದ್ದಾರೆ ಎಂದು ಕಮಿಷನರ್ ನುಡಿದರು.
ಸುಹಾಸ್ ಕೊಲೆಗಾಗಿ 5 ಲಕ್ಷ ರೂಪಾಯಿ ನೀಡುವುದಾಗಿ ಫಾಜಿಲ್‌ನ ತಮ್ಮ ಆದಿಲ್ ಮೆಹರೂಫ್ ಭರವಸೆ ನೀಡಿದ್ದ. ಅದರಂತೆ 3 ಲಕ್ಷ ಅಡ್ವಾನ್ಸ್ ನೀಡಿದ್ದಾನೆ, ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ಘಾನ್ ತಯಾರಿ ಮಾಡಿದ್ದಾನೆ ಎಂದು ಅಗರ್ ವಾಲ್ ಮಾಹಿತಿ ನೀಡಿದರು.
ನಿಯಾಜ್ ನ ಇಬ್ಬರು ಸ್ನೇಹಿತರಾದ ಕಳಸ ಮೂಲದ ನಾಗರಾಜ್ ಮತ್ತು ರಂಜಿತ್ ನನ್ನು ಕರೆಸಿದ್ದು, ಈ ಇಬ್ಬರು ಎರಡು ದಿನಗಳಿಂದ ಸಫ್ಘಾನ್ ಮನೆಯಲ್ಲಿ ವಾಸವಾಗಿದ್ದರು. ಮೇ 1ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಕಮಿಷನರ್ ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು