ಇತ್ತೀಚಿನ ಸುದ್ದಿ
Mangaluru | ಬಜಿಲಕೇರಿ ಗೋಶಾಲೆಯಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ ಗೋ ಪೂಜೆ
21/10/2025, 19:52

ಮಂಗಳೂರು(reporterkarnataka.com); ನಗರದ ಬಜಿಲಕೇರಿಯ ಮುಖ್ಯಪ್ರಾಣ ದೇವಸ್ಥಾನದ ವಠಾರದಲ್ಲಿರುವ ಗುರುರಾಜ್ ಭಟ್ ಅವರ ಮಾಲೀಕತ್ವದ ಗೋ – ಶಾಲೆಯಲ್ಲಿ ಸಾಮರಸ್ಯ ಮಂಗಳೂರು ವತಿಯಿಂದ 33 ಕೋಟಿ ದೇವತೆಗಳ ಅವಾಸಸ್ಥಾನವಾಗಿರುವ ಗೋ- ಮಾತೆಯ ಪೂಜೆ ಆಚರಿಸಲಾಯಿತು.
ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನ, ಮಾನ, ಗೌರವವಿದೆ. ಹಸುವನ್ನು ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಅಷ್ಟು ಮಾತ್ರವಲ್ಲ ಹಿಂದೂ ಧರ್ಮಗ್ರಂಥಗಳಲ್ಲಿ ಹಸುವಿಗೆ ತಾಯಿಯ ಸ್ಥಾನವನ್ನು ನೀಡಲಾಗಿದೆ. ಹಸುವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆಂದು ನಂಬಲಾಗುತ್ತದೆ ಎಂದು ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್ ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಯೋಗೀಶ್ ನಾಯಕ್ , ಸಮರ್ಥ್ ಭಟ್ , ಸಿತಾರಾ , ರಾಧಿಕಾ ನಾಯಕ್ , ನೀತ್ ಶರಣ್ , ರಾಜೇಶ್ ದೇವಾಡಿಗ , ಸುನಿತಾ , ಟಿಸಿ ಗಣೇಶ್ , ಪ್ರಫುಲ್ಲಾ ಕಾಮತ್ , ಸುನಂದಾ , ಮಾತಾಜಿ , ರತಿಕಾ , ರಚಿತಾ ಹಾಗೂ ಮಾತಾಜಿಯರು ಉಪಸ್ಥಿತರಿದ್ದರು.