4:11 PM Saturday28 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ಮಂಗಳೂರು: ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಅಮಾನತಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

12/03/2024, 23:38

ಮಂಗಳೂರು(reporterkarnataka.com): ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅಮಾನತಿಗೆ ಆಗ್ರಹಿಸಿ ಮಂಗಳವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಬಿಜೆಪಿಗೆ ಈ ದೇಶದ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡವರು ದೇಶದಲ್ಲಿ ಆಡಳಿತ ನಡೆಸಲು ಅಸಾಧ್ಯ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಂಸತ್ ಸದಸ್ಯರಿಗೆ ನೈತಿಕತೆ ಇದ್ದಲ್ಲಿ ಅನಂತ್ ಕುಮಾರ್ ಅವರನ್ನು ಪಕ್ಷದ ಸಂಸತ್ ಸ್ಥಾನದಿಂದ ಉಚ್ಛಾಟಿಸಲಿ ಎಂದು ಆಗ್ರಹಿಸಿದರು.
ಸಂವಿಧಾನದ ಪ್ರತಿ ಸುಟ್ಟವರಿಗೂ ಬಿಜೆಪಿ ರಕ್ಷಣೆ ನೀಡಿದೆ. ಅಭಿವೃದ್ಧಿ ಕುರಿತು ಮನಸ್ಸಿಲ್ಲ. ಮಹಿಳೆಯರು, ರೈತರು, ಯುವಕರ ಮೇಲೆ ಕಳಕಳಿ ಇಲ್ಲ. ದೇಶ ವಿರೋಧಿಗಳನ್ನೇ ಬಿಜೆಪಿ ಬೆಂಬಲಿಸುತ್ತಿದೆ.
ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಅವರನ್ನು ಕಾರ್ಯಕರ್ತರು ತಿರಸ್ಕರಿಸಿದ್ದಾರೆ. ನಂ. ೧,೨ ಸಾಧಕರಿಗೆ ಗೋಬ್ಯಾಕ್ ಎನ್ನುವುದಾದರೆ ಉಳಿದವರ ಪಾಡೇನು ಎಂದು ಅವರು ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬಿಜೆಪಿಯಿಂದ ಸಂವಿಧಾನ ಬದಲಾವಣೆಯನ್ನಷ್ಟೇ ನಿರೀಕ್ಷಿಸಲು ಸಾಧ್ಯ. ಇಂದು ದೇಶ ಉಳಿದಿದೆ ಎಂದರೆ ಅದು ಸಂವಿಧಾನದಿಂದ. ಇದರಿಂದಾಗಿ ಇಂದು ದೇಶದಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಸಂವಿಧಾನವನ್ನು ನಂಬಿಕೊಂಡು ದೇಶದ ಜನ ಬದುಕುತ್ತಿದ್ದೇವೆ. ಪ್ರಧಾನಿಯನ್ನು ಟೀಕಿಸಿದ್ದಲ್ಲಿ ಅವರನ್ನು ದೇಶ ವಿರೋಧಿ ಎನ್ನುತ್ತಾರೆ. ಅದರೆ ಸರಕಾರ ಅನಂತ್ ಕುಮಾರ್ ವಿಚಾರದಲ್ಲಿ ಮೌನವಾಗಿದೆ. ಸುಳ್ಳೆ ಹೇಳಿ ಜನರ ದಾರಿ ತಪ್ಪಿಸುವುದೇ ಬಿಜೆಪಿಯ ಬಂಡವಾಳ ಎಂದರು.


ಕಾರ್ಪೊರೇಟರ್ ಎ.ಸಿ. ವಿನಯ್ ರಾಜ್, ಎನ್ ಐಯು ಅಧ್ಯಕ್ಷ ಸುಹಾನ್ ಆಳ್ವ, ಕಿಸಾನ್ ಘಟಕ ಅಧ್ಯಕ್ಷ ರಿತೇಶ್ ಅಂಚನ್ ಪ್ರಮುಖರಾದ ಪ್ರಕಾಶ್ ಸಾಲ್ಯಾನ್, ಚೇತನ್ ಕುಮಾರ್, ರಘುರಾಮ್ ಕದ್ರಿ, ಸ್ಟ್ಯಾನ್ಲಿ, ಲಕ್ಷ್ಮಣ್ ಶೆಟ್ಟಿ, ಅನ್ಸರುದ್ದೀನ್ ಸಾಲ್ಮರ್, ಶಾಂತಳಾ ಗಟ್ಟಿ, ಚಂದ್ರಕಲಾ ಜೋಗಿ, ನಮಿತಾ ಡಿ. ರಾವ್, ಅಪ್ಪಿ, ಮಂಜುಳಾ ನಾಯಕ್, ಸಲೀಂ ಅಹಮ್ಮದ್, ಲವಿನಾ, ವಸಂತಿ ಅಂಚನ್, ಗೀತಾ ಅತ್ತಾವರ್, ನೆಲ್ಸನ್ ಮೊಂತೇರೊ, ಗಿರೀಶ್ ಶೆಟ್ಟಿ, ಸುಧಾಕರ್.ಜೆ.ಜಪ್ಪಿನಮೊಗರು, ಹಾರ್ಬರ್ಟ್ ಡಿಸೋಜ, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು,ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು