ಇತ್ತೀಚಿನ ಸುದ್ದಿ
ಮಂಗಳೂರು: ಭಾರೀ ಗಾಳಿ ಮಳೆಗೆ ಬಿಕರ್ಣಕಟ್ಟೆ ಸಮೀಪ ಉರುಳಿ ಬಿದ್ದ ಬೃಹತ್ ಹೋರ್ಡಿಂಗ್ಸ್; ಪಡೀಲ್ ನಲ್ಲಿ ಹೊಸ ಡಿಸಿ ಕಚೇರಿಗೆ ನೆರೆ!
05/07/2023, 15:18
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಕರಾವಳಿಯಲ್ಲಿ ಇಂದು ಕೂಡ ಬಿರುಸಿನ ಮಳೆ ಮುಂದುವರಿದಿದ್ದು, ಬುಧವಾರ ಸುರಿದ ಭಾರೀ ಮಳೆಗೆ ನಗರದ ಹಲವೆಡೆ ಆವಾಂತರ ಸೃಷ್ಟಿ ಯಾಗಿದೆ.
ಬುಧವಾರ ಬೆಳಗ್ಗಿನ ನಂತರ ಸುರಿದ ಭಾರೀ ಗಾಳಿ ಮಳೆಗೆ ನಗರದ ಹಲವೆಡೆ ವಿದ್ಯುತ್ ಕಂಬ, ಬೃಹತ್ ಹೋರ್ಡಿಂಗ್ಸ್ ಧರಾಶಾಹಿಯಾಗಿದೆ. ನಗರದ ಬಿಕರ್ಣಕಟ್ಟೆ ಬಳಿ ಬೃಹತ್ ಹೋರ್ಡಿಂಗ್ಸ್ ಗಾಳಿ ಮಳೆಯ ಅಬ್ಬರಕ್ಕೆ ನೆಲಕ್ಕಪ್ಪಳಿಸಿದೆ. ಇದರಿಂದ ಹಲವು ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾರೂ ಇಲ್ಲದಿರುವುದರಿಂದ ಪ್ರಾಣಾಪಾಯ ತಪ್ಪಿದೆ. ನಂತೂರು- ಪಡೀಲ್ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಪಡೀಲ್ ಸಮೀಪ ನಿರ್ಮಿಸಿದ ನೂತನ ಜಿಲ್ಲಾಧಿಕಾರಿ ಕಚೇರಿ ಮಂಭಾಗದಲ್ಲಿ ನೆರೆ ಬಂದಿದೆ. ಕದ್ರಿ ಕೈಬಟ್ಟಲ್ ನಲ್ಲಿ ವಿದ್ಯುತ್ ಕಂಬ ಉರುಳಿ ಬಿದ್ದಿದೆ. ಮೆಸ್ಕಾಂ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದ್ದಿವೆ. ನಗರದ ಪಿವಿಎಸ್ ಬಳಿಯ ಖೈಬರ್ ಪಾಸ್ ನ ಗುಡ್ಡ ಕುಸಿದಿದೆ. ಹಂಪನಕಟ್ಟೆಯ ಸಿಗ್ನಲ್ ಕೆಟ್ಟು ಹೋಗಿದೆ.