ಇತ್ತೀಚಿನ ಸುದ್ದಿ
ಮಂಗಳೂರು: ಆಟೋ ಸ್ಫೋಟ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ; ಮಾಧ್ಯಮಕ್ಕೆ ಅವರು ಹೇಳಿದ್ದೇನು ?
21/11/2022, 13:49

ಮಂಗಳೂರು(reporterkarnataka.com); ನಗರದ ನಾಗೂರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಆಟೋ ರಿಕ್ಷಾ ಸ್ಫೋಟದ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶಂಕಿತ ಆರೋಪಿಯ ಗುರುತು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಂಬಂಧಿಕರಿಗೆ ತಿಳಿಸಿದ್ದೇವೆ. ಇಂದು ಸಂಬಂಧಿಕರು ನಗರಕ್ಕೆ ಆಗಮಿಸಬಹುದು, ಶಂಕಿತ ವ್ಯಕ್ತಿ ಯಾರನ್ನು ಭೇಟಿ ಮಾಡಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಅಲೋಕ್ ಕುಮಾರ್ ಹೇಳಿದರು.
ಸ್ಫೋಟ ನಡೆಸಿದಾತ ಎನ್ನಲಾದ ವ್ಯಕ್ತಿಗೆ ಶೇ.45 ರಷ್ಟು ಗಾಯವಾಗಿದೆ. ಕೈ ಸನ್ನೆಯಲ್ಲಿ ಆತ ಉತ್ತರಿಸುತ್ತಿದ್ದಾನೆ. ಪಂಪ್ ವೆಲ್ ಗೆ ಹೋಗಲು ಆಟೋ ಬುಕ್ ಮಾಡಿದ್ದಾಗಿ ಹೇಳಿರುವುದಾಗಿ ಅಲೋಕ್ ಕುಮಾರ್ ನುಡಿದರು.
ಆತ ಬೇರೆಡೆ ಹೋಗಿ ಬ್ಲಾಸ್ಟ್ ಮಾಡುವ ಉದ್ದೇಶ ಹೊಂದಿದ್ದ. ಆದರೆ ಆಕಸ್ಮಿಕವಾಗಿ ಆಟೋದಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ ಎಂದು ಎಡಿಜಿಪಿ
ಹೇಳಿದರು.