ಇತ್ತೀಚಿನ ಸುದ್ದಿ
Mangaluru | ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ ಆಟಿಡೊಂಜಿ ದಿನ: 47 ಬಗೆಯ ಖಾದ್ಯ
03/08/2025, 12:09

ಮಂಗಳೂರು(reporterkarnataka.com): ಕಲ್ಲರಕೋಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಟಿಡೊಂಜಿ ದಿನ ಜರುಗಿತು.
ಕಾರ್ಯಕ್ರಮವನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ಎಂ.ಬಿ. ಅವರು ದೀಪ ಬೆಳಗಿಸಿ, ತೆಂಗಿನ ಸಿರಿ ಅರಳಿಸಿ, ಉದ್ಘಾಟಿಸಿದರು,
ಮಕ್ಕಳು ತಮ್ಮ ಹೆತ್ತವರ ಸಹಕಾರದೊಂದಿಗೆ ತಯಾರಿಸಿದ 47 ಖಾದ್ಯಗಳನ್ನು ವೇದಿಕೆಯಲ್ಲಿ ಜೋಡಿಸಿ ಇಟ್ಟು, ಖಾದ್ಯಗಳ ಮಹತ್ವ, ತಯಾರಿಸಲು ಬೇಕಾದ ಸಾಮಾಗ್ರಿಗಳ ಮಾಹಿತಿ ಮಕ್ಕಳಿಗೆ ನೀಡಲಾಯಿತು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ನಯನಾ ಕುಮಾರಿ ಕೆ. ಅವರು ವಹಿಸಿದ್ದರು. ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಝಾಕ್, ಶಾಲಾಭಿವೃದ್ಧಿ ಸಮಿತಿ ಸದಸ್ಯ ಅಬೂಬಕ್ಕರ್, ಪ್ರಾ ಥಮಿಕ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯನಿ ಸುಜಾತಾ ಅವರು ಉಪಸ್ಥಿತರಿದ್ದರು,
ಶಾಲಾ ಮಕ್ಕಳು ಪ್ರಾರ್ಥನೆಗೈದರು, ಶಾಲಾ ವಿಜ್ಞಾನ ಶಿಕ್ಷಕಿ ವಿನಿತಾ ಮೇಡಂ ಅವರು ಆಷಾಢ ತಿಂಗಳಲ್ಲಿ ನಮ್ಮ ಹಿರಿಯರು ಪಟ್ಟ ಕಷ್ಟ, ರೋಗ ರುಜಿನ ದೂರ ಗೊಳಿಸುವ ಆಟಿ ಕಳೆಂಜನ ಬಗ್ಗೆ, ಆಷಾಢ ಅಮಾವಾಸ್ಯೆಯ ದಿನ ಕುಡಿಯುವ ಹಾಳೆಮರದ ತೊಗಟೆಯಿಂದ ತಯಾರಿಸುವ ಕಷಾಯದ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ಶಿಕ್ಷಕಿ ಸೀಮಾ ಮರಿಯಾ ಡಿಸೋಜ ಅವರು ಸ್ವಾಗತಿಸಿದರು, ಕನ್ನಡ ಭಾಷಾ ಶಿಕ್ಷಕಿ ಜಯಲಕ್ಷ್ಮೀ ಅವರು ಧನ್ಯವಾದವಿತ್ತರು, ದೈಹಿಕ ಶಿಕ್ಷಣ ಶಿಕ್ಷಕ ಪ್ರಭಾಕರ ಜೋಗಿ ಕಾರ್ಯಕ್ರಮ ನಿರೂಪಿಸಿದರು,