10:12 PM Thursday23 - October 2025
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ: ಕಡೂರು ಸಮೀಪದ ಹಡಗಲು ಗ್ರಾಮ ಅಕ್ಷರಶಃ ಜಲಾವೃತ ಕೊಡಗಿನಲ್ಲಿ ಅಸ್ಸಾಂ ಕಾರ್ಮಿಕರಿಂದ ಆಟೋ ಚಾಲಕನ ಮೇಲೆ ಹಲ್ಲೆ: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ… ಕೊಡ್ಲಿಪೇಟೆಯಲ್ಲಿ ಉದ್ಯಮಿ ಮೇಲೆ ಲಾರಿ ಹರಿಸಿ ಕೊಲೆ ಯತ್ನ: ವಾಹನ ಬಿಟ್ಟು ಚಾಲಕ… ಪುತ್ತೂರು: ಅಕ್ರಮ ಜಾನುವಾರು ಸಾಗಾಟ; ಆರೋಪಿ ಕಾಲಿಗೆ ಪೊಲೀಸರು ಗುಂಡೇಟು; ಓರ್ವನ ಸೆರೆ,… ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ Mysore | ಎಚ್. ಡಿ. ಕೋಟೆಯಲ್ಲಿ ಹುಲಿ ದಾಳಿ: ಎರಡೂ ಕಣ್ಣು ಕಳೆದುಕೊಂಡ… ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5… Kodagu | ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಸಾಕ್ಷಿಯಾಗಲಿರುವ ಡಿಸಿಎಂ, ಸಚಿವರು, ಶಾಸಕರು ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್

ಇತ್ತೀಚಿನ ಸುದ್ದಿ

Mangaluru | ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಸ್ಟೇಟ್‌ ಬ್ಯಾಂಕ್ ಶಾಖೆಯ ಗ್ರಾಹಕರ ಸಭೆ

23/10/2025, 21:57

ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸ್ಟೇಟ್‌ಬ್ಯಾಂಕ್ ಶಾಖೆಯ ದಶಮನೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರ ಅಧ್ಯಕ್ಷತೆಯಲ್ಲಿ ಸ್ಟೇಟ್‌ಬ್ಯಾಂಕ್ ಶಾಖೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ರೊನಾಲ್ಡ್ ಜೋಸೆಫ್ ಸಲ್ದಾನ್ಹ, ರಂಜಿತ್ ಎಂ, ಹಾಗೂ ಜವಹಾರ್ ಲಾಲ್ ವಿಠಲ್‌ಜೀ ಅವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಸಂಘದ ಸದಸ್ಯರಾದ ರೊನಾಲ್ಡ್ ಜೋಸೆಫ್ ಸಲ್ದಾನ್ಹ ಅವರು ಮಾತನಾಡಿ “ಆತ್ಮಶಕ್ತಿ ಸಂಘವು ಒಂದು ನಾಣ್ಯದ ಎರಡು ಮುಖ ಇದ್ದ ಹಾಗೆ, ಒಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ, ಇನ್ನೊಂದು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಎಂದು ಶ್ಲಾಘಿಸಿದರು. ಸಂಘವು ನೀಡುತ್ತಿರುವ ಗ್ರಾಹಕ ಸ್ನೇಹಿ ಸೇವೆಯೇ ಸಂಘವು ಇವತ್ತು ಈ ಮಟ್ಟಕ್ಕೆ ಬೆಳೆಯಲು ಮುಖ್ಯ ಕಾರಣ” ಎಂದರು.
ಸಂಘದ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಎಂ ಅವರು ಮಾತನಾಡಿ “ಆತ್ಮಶಕ್ತಿ ಸಹಕಾರ ಸಂಘವು ನೀಡುತ್ತಿರುವ ಸೇವೆಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮುಂದಿನ ದಿನಗಳಲ್ಲಿ ನೂತನ ಶಾಖೆಯನ್ನು ಬೋಳಾರದಲ್ಲಿ ತೆರೆಯುವಂತೆ ವಿನಂತಿಸಿದರು.
ಸದಸ್ಯರಾದ ರಂಜಿತ್ ರವರು ಮಾತನಾಡಿ “ಸಂಘವು ಇ ಸ್ಟ್ಯಾಂಪ್ ಸೇವೆಯಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ಇದರಲ್ಲಿ ಸಂಘದ ಸಿಬ್ಬಂದಿಗಳ ಪಾತ್ರವು ಅತ್ಯುತ್ತಮವಾಗಿರುವುದರಿಂದ ಸಂಘವು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಆತ್ಮಶಕ್ತಿ ಸಹಕಾರ ಸಂಘವು ಹೀಗೆ ಬೆಳಗಲಿ ಎಂದು ಶುಭ ಹಾರೈಸಿದರು.
ಸಂಘದ ಸದಸ್ಯರುಗಳಾದ ರಾಜಾರಾಮ್ ಎ., ಮಾಕ್ಸಿಮ್ ಗೊನ್ಸಾಲ್ವಿಸ್, ಸಿ. ಹೆಚ್ ಪದ್ಮನಾಭ ಶೆಟ್ಟಿ , ಅಬುಬಕ್ಕರ್ ಯೂಸುಫ್ ನಗರ್ ಎಸ್., ಪ್ರಮೋದ್ ಕುಮಾರ್ ಸುವರ್ಣ ಜೆ, ಹಾಗೂ ಪ್ರೇಮಲತಾ ಕೆ. ಅಮೀನ್ ರವರು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ, ಸಂಘದ ಸ್ಟೇಟ್‌ಬ್ಯಾಂಕ್ ಶಾಖೆಯು ದಶಕದ ಸಂಭ್ರಮದೊAದಿಗೆ ಮುನ್ನಡೆಯುತ್ತಿದೆ. ಈ ಪ್ರಯುಕ್ತ ಸದಸ್ಯ ಗ್ರಾಹಕರಿಗೆ ಚಿನ್ನಾಭರಣಗಳಿಗೆ ಪ್ರತಿ ಗ್ರಾಂ ಗೆ ರೂ. ೧೦,೫೦೦/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲಗಳನ್ನು ನೀಡುತ್ತಿದ್ದೇವೆ. ಸಂಘದ ಎಲ್ಲಾ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ, ನಮ್ಮ ಸ್ಟೇಟ್‌ಬ್ಯಾಂಕ್ ಶಾಖೆಯ ಡಿ.ಸಿ ಆಫೀಸಿನಲ್ಲಿ ಗ್ರಾಹಕರಿಗೆ ಅನೂಕೂಲವಾಗುವಂತೆ ವ್ಯವಹಾರದ ಸಮಯದಲ್ಲಿ ಇ-ಸ್ಟ್ಯಾಂಪ್ ಸೇವೆಯು ಸಂಜೆ ೭ ಗಂಟೆಯವರೆಗೆ ಲಭ್ಯವಿದ್ದು, ಗ್ರಾಹಕರ ಸಂಖ್ಯೆ ಅಧಿಕ ಇದ್ದು ಇಲ್ಲಿ ಸ್ಥಳವಾಕಾಶದ ಕೊರತೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಶಾಖೆಯನ್ನು ಮಂಗಳೂರಿನ ಬಂದರು ಸ್ಥಳಕ್ಕೆ ಸ್ಥಳಾಂತರಗೊಳಿಸುವ ಯೋಜನೆಯನ್ನು ಹಮ್ಮಿ ಕೊಂಡಿದ್ದೇವೆ ಎಂದರು.
ಸAಘವು ಕಳೆದ ಮಾರ್ಚ್ ವರ್ಷಾಂತ್ಯಕ್ಕೆ ೧೮೨ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ನೀಡಿದೆ. ಈಗಾಗಲೇ ಸಂಘವು ಈ ಸಾಲಿನ ಅರ್ಧ ಆರ್ಥಿಕ ವರ್ಷದಲ್ಲಿ ೧೫೩ ಕೋಟಿಗೂ ಮಿಕ್ಕಿ ಚಿನ್ನಾಭರಣ ಸಾಲವನ್ನು ವಿತರಿಸಿದ್ದು, ಚಿನ್ನಾಭರಣ ಸಾಲ ನೀಡುವಿಕೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದರು.
ಚಿನ್ನಾಭರಣ ಎಲ್ಲರಿಗೂ ಅಗತ್ಯಕ್ಕೆ ಇರುವಂತಹದು. ಅದರ ಸಾಲ ಸೌಲಭ್ಯವನ್ನು ಕೂಡ ನಾವು ಗ್ರಾಹಕರಿಗೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ೦% ಸೇವಾಶುಲ್ಕದಲ್ಲಿ ಸಾಲಗಳನ್ನು ನೀಡಿರುತ್ತೇವೆ. ಸಂಸ್ಥೆಯು ಕೇವಲ ಬ್ಯಾಂಕಿAಗ್ ಮಾತ್ರವಲ್ಲದೆ ಜೀವ ವಿಮೆ, ಆರೋಗ್ಯ ವಿಮೆ, ಮತ್ತು ವಾಹನ ವಿಮಾ ಸೌಲಭ್ಯಗಳನ್ನೂ ಕೂಡ ಗ್ರಾಹಕರಿಗೆ ನೀಡುತ್ತಿದೆ. ಸದಸ್ಯರ ಆರೋಗ್ಯದ ಕಾಳಜಿಯಿಂದ ಆರೋಗ್ಯ ಶಿಬಿರಗಳನ್ನು ಸತತವಾಗಿ ನಮ್ಮ ಸಂಘ ಹಮ್ಮಿಕೊಂಡು ಬರುತ್ತಿದೆ. ಜೊತೆಗೆ ಸಂಘದ ಸದಸ್ಯರ ಮಕ್ಕಳಿಗೆ ಒಳ್ಳೆಯ ಅಂಕ ಬಂದಾಗ ವಿದ್ಯಾರ್ಥಿ ವೇತನ ನೀಡಿ ಅವರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸಂಘದಲ್ಲಿ ಲಭ್ಯವಿರುವ ಪ್ರತಿಯೊಂದು ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು. ಹಾಗೂ ಸಂಘದ ಗಂಜಿಮಠ ಶಾಖೆಯು ಅಕ್ಟೋಬರ್ ತಿಂಗಳ ೨೪ ರಂದು ಗಂಜಿಮಠ ಗ್ರಾಮಪಂಚಾಯತಿ ಕಟ್ಟಡದಿಂದ ಗಂಜಿಮಠ ಮುಖ್ಯ ರಸ್ತೆಯಲ್ಲಿರುವ ವೈಕುಂಠ ಪ್ರಭು ಕಾಂಪ್ಲೆಕ್ಸ್ ಸುಸಜ್ಜಿತವಾದ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳ್ಳಲಿದೆ. ಈ ಸಮಾರಂಭಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ನಿರ್ದೇಶಕರಾದ, ಜಿ. ಪರಮೇಶ್ವರ ಪೂಜಾರಿ, ರಮಾನಾಥ ಸನಿಲ್, ಗೋಪಾಲ್ ಎಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತ್ತರರು ಉಪಸ್ಥಿತರಿದ್ದರು.
ಸಂಘದ ಸ್ಟೇಟ್‌ಬ್ಯಾಂಕ್ ಶಾಖೆಯ ಸಿಬ್ಬಂದಿಯಾದ ರತಿಕಾ ಸ್ವಾಗತಿಸಿದರು. ಅನುಜಿತಾ ವಂದಿಸಿದರು. ಶಾಖಾಧಿಕಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು