8:15 PM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ವೈಭವ: ‘ಪಿಲಿನಲಿಕೆ’ಯ ರಂಗು

04/10/2022, 20:42

ಮಂಗಳೂರು(reporter Karnataka.com): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ದಸರಾ ಆಚರಣೆ ವಿವಿಧ ಸಾಂಸ್ಕೃತಿಕ ಸಂಘಟನೆಗಳ ವತಿಯಿಂದ ಆಗಮನದ ಗೇಟ್‌ನ ಬಳಿಯಿರುವ ಬಯಲು ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆಯಿತು.

ಈ ಸಂಭ್ರಮಾಚರಣೆಯಲ್ಲಿ ಭಜನೆ, ದಾಂಡಿಯಾ, ಯಕ್ಷಗಾನ, ‘ಪಿಲಿ ವೇಷ’ ಮೇಳೈಸಿತು. ಬಜಪೆಯ ಈಶ್ವರಕಟ್ಟೆಯ ಶ್ರೀರಾಮ ಕುಣಿತ ಭಜನಾ ಮಂಡಳಿಯ ಯುವ ಮತ್ತು ಉತ್ಸಾಹಿ ಸದಸ್ಯರು ಸಂದರ್ಭಕ್ಕೆ ತಕ್ಕಂತೆ ಸಂಗೀತದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಕಳೆದ ವರ್ಷ 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮಂಗಳೂರು ಅಂತಾರಾಷ್ಟ್ರೀಯ ಮೂಲಕ ಹಾದು ಹೋಗುವುದರೊಂದಿಗೆ, ವಿಮಾನ ನಿಲ್ದಾಣದ ತಂಡವು ಜೀವನದ ಎಲ್ಲಾ ಹಂತಗಳ ಪ್ರಯಾಣಿಕರಿಗೆ ವೈವಿಧ್ಯಮಯ ಸಾಂಸ್ಕೃತಿಕ ಅನುಭವಗಳನ್ನು ತರುವುದನ್ನು ಮುಂದುವರೆಸಿದೆ. 

ನಗರದ ವೃತ್ತಿಪರ ಕಾಲೇಜಿನ ವಿದ್ಯಾರ್ಥಿಗಳು ದಾಂಡಿಯಾ, ಭರತನಾಟ್ಯ, ಯಕ್ಷಗಾನ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಇದರ ನಂತರ ಪ್ರಸಿದ್ಧವಾದ ‘ಪಿಲಿ ನಲಿಕೆ’ ನಡೆಯಿತು. ಅಕ್ಟೋಬರ್ 4 ರಂದು ಆಯುಧಪೂಜೆ ದಿನ ಪಿಲಿ ನಲಿಕೆ, ಭರತನಾಟ್ಯ, ಸೆಮಿ ಕ್ಲಾಸಿಕಲ್ ಮತ್ತು ಫಿಲ್ಮಿ ಡ್ಯಾನ್ಸ್ ಪ್ರಸ್ತುತಪಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು