ಇತ್ತೀಚಿನ ಸುದ್ದಿ
ಮಂಗಳೂರು: ಅಗಲಿದ ಹಿರಿಯ ಸಾಹಿತಿ ನಾ ಡಿಸೋಜ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ
08/01/2025, 22:27
ಮಂಗಳೂರು(reporterkarnataka.com):ಕಲ್ಕೂರ ಪ್ರತಿಷ್ಠಾನ ವತಿಯಿಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ
ನಾ ಡಿಸೋಜ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ನಗರ ಶಾರದಾ ವಿದ್ಯಾಲಯದಲ್ಲಿ ಬುಧವಾರ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ್ ರೈ ಅವರು ಮಾತನಾಡಿ, ನಾ ಡಿಸೋಜ ಅವರು
ಎಲ್ಲಾ ರೀತಿಯ ಜನರಿಗೂ ಬೇಕಾಗಿರುವವರು. ಅವರದ್ದು ಪಕ್ಷ ಬೇಧವಿಲ್ಲದ ವ್ಯಕ್ತಿತ್ವ ಎಂದರು.
ಪ್ರತಿಯೊಂದು ಕಥೆಗಳಲ್ಲಿಯೂ ನಾಡೋಜ ಅವರು
ಮಲೆನಾಡಿನ ಚಿತ್ರಣ,ಭ್ರಷ್ಟಾಚಾರ, ಮಹಿಳೆಯ ಬಗ್ಗೆ ಉಲ್ಲೇಖ ಕಾಣಬಹುದಾಗಿದೆ. ಮಕ್ಕಳ ಸಾಹಿತ್ಯವನ್ನು ಪರಿಚಯಿಸಿದರು. ನಮ್ಮ ಕನ್ನಡ ಶಾಲೆಗಳಲ್ಲಿ ಅವರ ಮಕ್ಕಳ ಸಾಹಿತ್ಯ ಪುಸ್ತಕಗಳನ್ನು ವಿತರಿಸಬೇಕು.ಅನೇಕ ಹೋರಾಟಗಳಲ್ಲಿ ಅವರು ಭಾಗಿದ್ದಾರೆ. ಮಲೆನಾಡಿನ ಎಲ್ಲಾ ಹೋರಾಟಗಳಲ್ಲಿ ಬಾಗಿಯಾಗಿದ್ದಾರೆ.
ಎಂದು ಬಿ.ಎ.ವಿವೇಕ ರೈ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಪ್ರಸ್ತಾವಿಸಿದರು. ಶಾರದಾ ಕಾಲೇಜಿನ ಎಂ.ಬಿ. ಪುರಾಣಿಕ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಪುಷ್ಕಳ ಕುಮಾರ್, ಹರೀಶ್ ರೈ, ತಮ್ಮ ಲಕ್ಷ್ಮಣ, ಸುಧಾಕರ ರಾವ್ ಪೇಜಾವರ,ದಯಾನಂದ ಕಟೀಲ್ ಮುಂತಾದವರು ಉಪಸ್ಥಿತರಿದ್ದರು.