ಇತ್ತೀಚಿನ ಸುದ್ದಿ
ಮಂಗಳೂರು: 31ರಂದು ’ನವ್- ರಂಗ್’ ಎಡ್ಡಿ ಸಿಕ್ವೇರಾ ನಾಟಕ ಕೃತಿ ಬಿಡುಗಡೆ
28/08/2024, 15:59
ಮಂಗಳೂರು(reporterkarnataka.com): ಹಿರಿಯ ರಂಗಕರ್ಮಿ, ನಿರೂಪಕ ಮತ್ತು ಚಿತ್ರ ಕಲಾವಿದ ಎಡ್ಡಿ ಸಿಕ್ವೇರಾ ಅವರ ಸಮಗ್ರ ರಂಗ ಕೃತಿಗಳ ಸಂಗ್ರಹ ‘ನವ್ ರಂಗ್’ ಶನಿವಾರ, ಅಗಸ್ಟ್ 31ರಂದು ಇಳಿಸಂಜೆ 6.00ಕ್ಕೆ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂ| ಡಾ| ಪ್ರವೀಣ್ ಮಾರ್ಟಿಸ್ ಬಿಡುಗಡೆ ಮಾಡಲಿರುವರು.
ಮೈಕಲ್ ಡಿ ಸೋಜಾ ಟ್ರಸ್ಟ್ ನ ಸಲಹೆಗಾರ ಸ್ಟೀಫನ್ ಪಿಂಟೊ, ಕಿಟಾಳ್ ಅಂತರ್ಜಾಲ ಪತ್ರಿಕೆಯ ಸಂಪಾದಕ ಎಚ್. ಎಮ್. ಪೆರ್ನಾಲ್ ಗೌರವ ಅತಿಥಿಗಳಾಗಿ ಭಾಗವಹಿಸಲಿರುವರು.
ಕೃತಿಕಾರ ಎಡ್ಡಿ ಸಿಕ್ವೇರಾ ಮತ್ತು ಖ್ಯಾತ ರಂಗ ಕಲಾವಿದೆ ಜೀನಾ ಡಿ ಸೋಜಾ ಆಯ್ದ ನಾಟಕ ದೃಶ್ಯಗಳ ವಾಚನಾಭಿನಯ ಪ್ರಸ್ತುತ ಪಡಿಸಲಿರುವರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಸಂತ ಅಲೋಶಿಯಸ್ ಪ್ರಕಾಶನವು ಪ್ರೊ| ಡಾ| ವಿದ್ಯಾ ವಿನುತ ಡಿ ಸೋಜಾ ಅವರ ನೇತೃತ್ವದಲ್ಲಿ ’ನವ್ ರಂಗ್’ ಕೃತಿಯನ್ನು, ವಿಶ್ವ ಕೊಂಕಣಿ ಕೇಂದ್ರದ ಮೈಕಲ್ ಡಿಸೋಜ ವಿಶನ್ ಕೊಂಕಣಿ ಪುಸ್ತಕ ಅನುದಾನ ಯೋಜನೆಯಡಿ ಪ್ರಕಟಿಸಿದ್ದು, ಎಡ್ಡಿ ಸಿಕ್ವೇರಾ ಅವರ ಮೂರು ಪ್ರಶಸ್ತಿ ವಿಜೇತ ನಾಟಕ ಕೃತಿಗಳು, ನಾಲ್ಕು ಜನಪ್ರಿಯ ಕಿರು ನಾಟಕಗಳು ಮತ್ತು ಕೊಂಕಣಿ ನಾಟಕದ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪ್ರಸ್ತುತಪಡಿಸಿದ ಎರಡು ಅಧ್ಯಯನ ಪ್ರಬಂದಗಳನ್ನು ಒಳಗೊಂಡಿದೆ.
160 ಪುಟಗಳ ಪುಸ್ತಕದ ಮುಖಬೆಲೆ ರೂ. 200/- ಆಗಿದ್ದು, ಬಿಡುಗಡೆಯ ದಿನ ರಿಯಾಯತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ಲಭ್ಯವಿದೆ.
*‘Nav – Rang’ Eddie Sequeira book set to release on Aug 31*
Eddie Sequeira, a senior artist, award winning Konkani playwright, actor, director and compere will be releasing his book ‘Nav-Rang’, a collection of his well known plays and captivating talks on Konkani dramas which have enthralled audiences over the years, on 31st August, 2024 at 6.00pm at St. Aloysius College, Sahodhaya hall.
Rev Dr. Praveen Martis SJ, Vice Chancellor, St. Aloysius (Deemed to be University) will release the book, in the presence of guests Mr Stephen Pinto, Advisor – Michael D’Souza Trust, and Mr H M Pernal, Editor, Kittall.com.
The book is published by St Aloysius Prakashan headed by Prof. Dr. Vidya Vinuta D’Souza with the grant from Michael D’Souza-Vision Konkani Programme under the aegis of World Konkani Centre, Mangalore.
On this occasion Eddie will be presenting his book with an insight into his journey as an actor and playwright, and will be Acting/ Reading excerpts of some of the scenes from the plays in the book. Mrs Zeena D’Souza a gifted stage actor will be joining him on stage.
The book is priced at Rs.200/- with an early bird discount for purchases made at the venue