ಇತ್ತೀಚಿನ ಸುದ್ದಿ
Mangaluru | ಜಪ್ಪಿನಮೊಗರು ಪ್ರಜ್ಞಾ ಸ್ವಾದಾರ ಕೇಂದ್ರದಿಂದ 3 ಮಂದಿ ಮಹಿಳೆಯರು ಕಾಣೆ: ಪತ್ತೆಗೆ ಮನವಿ
13/11/2025, 21:47
ಮಂಗಳೂರು(reporterkarnataka.com): ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾದಾರ ಕೇಂದ್ರದಲ್ಲಿ ದಾಖಲಾಗಿದ್ದ ಮೂವರು ಮಹಿಳೆಯರು ಕಾಣೆಯಾಗಿದ್ದಾರೆ.
ಕುಮಾರಿ(30), ಅಮಲಾ(30) ಹಾಗೂ ಸಂಧ್ಯಾ(28) ಎಂಬ ಮೂರು ಮಹಿಳೆಯರು 2019 ರ ಅಕ್ಟೋಬರ್ 8ರಂದು ಕಾಣೆಯಾಗಿರುವ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ಕಾಣೆಯಾದವರ ಚಹರೆ:*
ಕುಮಾರಿ- ಎತ್ತರ 5.6 ಅಡಿ, ಕಪ್ಪು ಮೈ ಬಣ್ಣ, ದಪ್ಪಗಿನ ಶರೀರ ಹೊಂದಿರುತ್ತಾರೆ. ಕಾಣೆಯಾದ ದಿನ ಕಪ್ಪು ಮತ್ತು ಬಿಳಿ ಮಿಶ್ರಿತ ಚೂಡಿದಾರ ಮತ್ತು ಕೇಸರಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ಅಮಲಾ-ಎತ್ತರ 5.5 ಅಡಿ, ಕಪ್ಪು ಮೈ ಬಣ್ಣ ಹೊಂದಿರುತ್ತಾರೆ. ಕಾಣೆಯಾದ ದಿನ ಪಿಂಕ್ ಬಣ್ಣದ ಟಾಪ್ ಮತ್ತು ಹಳದಿ ಬಣ್ಣದ ಪ್ಯಾಂಟ್ ಹೊಂದಿರುವ ಚೂಡಿದಾರ ಧರಿಸಿದ್ದರು. ತಮಿಳು, ಕನ್ನಡ ಭಾಷೆ ಮಾತನಾಡುತ್ತಾರೆ.
ಸಂಧ್ಯಾ- ಎತ್ತರ 4.5 ಅಡಿ, ಗೋಧಿ ಮೈ ಬಣ್ಣ ಹೊಂದಿರುತ್ತಾರೆ. ಕಾಣೆಯಾದ ದಿನ ಕಪ್ಪು ಬಣ್ಣದ ಚೂಡಿದಾರ ಧರಿಸಿದ್ದರು. ಹಿಂದಿ, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












