ಇತ್ತೀಚಿನ ಸುದ್ದಿ
ಮಂಗಳೂರು: 3 ಮಂದಿ ಮಹಿಳೆಯರ ಮೇಲೆ ತಲವಾರಿನಿಂದ ಹಲ್ಲೆ; ನವೀನನಿಗಿದ್ದ ಆ ಹಳೆ ವೈಷಮ್ಯವಾದರೂ ಏನು?
20/09/2021, 19:35

ಮಂಗಳೂರು(reporterkarnataka.com): ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಒಬ್ಬ ಸರಕಾರಿ ಸಿಬ್ಬಂದಿ ಮೂವರು ಮಹಿಳೆಯರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ ಹೇಯ ಘಟನೆಗೆ ಸೋಮವಾರ ಕಡಲನಗರಿ ಮಂಗಳೂರು ಸಾಕ್ಷಿಯಾಯಿತು.
ನಗರದ ಕರಂಗಲಪಾಡಿ ಬಳಿಯ ಡಯಟ್ನಲ್ಲಿ ಈ ಘಟನೆ ನಡೆದಿದೆ. ಕುಂದಾಪುರ ಮೂಲದ ನವೀನ್ (31) ಎಂಬಾತ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಿಬ್ಬಂದಿಗಳಾದ ನಿರ್ಮಲಾ, ರೀನಾ ರಾಯ್ ಹಾಗೂ ಗುಣವತಿ ಎಂಬವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ್ದಾನೆ. ಮೂವರು ಮಹಿಳೆಯರು ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬರ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ.