ಇತ್ತೀಚಿನ ಸುದ್ದಿ
ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸಂತ ಜೋಸೆಫ್ ವಾರ್ಡಿನ ವಾರ್ಷಿಕ ಹಬ್ಬ
22/04/2024, 14:16
ಮಂಗಳೂರು(reporterkarnataka.com): ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಚರ್ಚಿನ ಸಂತ ಜೋಸೆಫ್ ವಾರ್ಡಿನ ವಾರ್ಷಿಕ ಹಬ್ಬ ವಾರ್ಡಿನ ವಿನ್ಸೆಂಟ್ ಪಿಂಟೋ ಅವರ ತೆರೆದ ಮೈದಾನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ. ಫಾ. ಅಲ್ಬನ್ ಡಿಸೋಜ ಅವರು ವಹಿಸಿದ್ದು, ಈ ವಾರ್ಡ್ ಬಹಳಷ್ಟು ಪ್ರಗತಿ ಹೊಂದಿದೆ. ವಾರ್ಡಿನ ಸರ್ವತೋಮುಖ ಅಭಿವೃದ್ದಿ ನಾವು ನೋಡುತ್ತಾ ಇದ್ದೇವೆ ಎಂದು ಶ್ಲಾಘಿಸಿ ಶುಭ ಹಾರೈಸಿದರು.
ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷರಾದ ಎಲಿಯಾಸ್ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೆರೊ, 21 ಆಯೋಗಗಳ ಸಂಯೋಜಕ ಜೊಸ್ಲಿನ್ ಲೋಬೊ ಉಪಸ್ಥಿತರಿದ್ದು, ಶುಭ ಹಾರೈಸಿದರು.
ವಾರ್ಡಿನ ಮುಖ್ಯಸ್ಥೆ ಶೀಲಾ ಡಿಸೋಜ ಅವರು ಅತಿಥಿಗಳನ್ನು ಸ್ವಾಗತಿಸಿದರು. ವಾರ್ಡಿನ ಪರವಾಗಿ ಕಳೆದ 7 ವರ್ಷಗಳಿಂದ ನಿರಂತರ ವಾರ್ಡಿನ ಮುಖ್ಯಸ್ಥರಾಗಿ ಸೇವೆಯನ್ನು ನೀಡುತ್ತಿರುವ ಶೀಲಾ ಡಿಸೋಜ ಅವರನ್ನು ಫಲ- ಪುಷ್ಟ ಹಾಗೂ ಶಾಲು ಹೊದೆಸಿ ಸನ್ಮಾನಿಸಲಾಯಿತು. ವಾರ್ಡಿನ ಪ್ರತಿನಿಧಿ ಸವಿತಾ ಡಿಕುನ್ನಾ ಅವರು ವರದಿ ವಾಚಿಸಿದರು. ಮತ್ತೋರ್ವ ಪ್ರತಿನಿಧಿ ಅರುಣ್ ಪಿಂಟೋ ಉಪಸ್ಥಿತರಿದ್ದರು. ವಿಲ್ಮಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.
ವಾರ್ಡಿನ ಎಲ್ಲ ವಯಸ್ಸಿನ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಇತರ ವಾರ್ಡಿನ ಮುಖ್ಯಸ್ಥರು, ಚರ್ಚಿನ ಸಂಘ- ಸಂಸ್ಥೆಗಳ
ಮುಖ್ಯಸ್ಥರು ಭಾಗವಹಿಸಿದ್ದರು. ಸಹ ಭೋಜನ ನಡೆಯಿತು.