ಇತ್ತೀಚಿನ ಸುದ್ದಿ
ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕಾಶ್ಮೀರದ ವೈಷ್ಣೋದೇವಿ ದೇಗುಲ ದರ್ಶನ: ಟೆಕ್ಕಿಗೆ ಟೋಪಿ ಹಾಕಿದ ವಂಚಕ
07/10/2022, 22:31
ಮಂಗಳೂರು(reporter Karnataka.com): ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲಕ್ಕೆ ಮಂಗಳೂರಿನಿಂದ ಖಾಸಗಿ ಹೆಲಿಕಾಪ್ಟರ್ ಸೇವೆ ಒದಗಿಸುವುದಾಗಿ ಬೆಂಗಳೂರು ಮೂಲದ ಟೆಕ್ಕಿಯೊಬ್ಬರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ಟೆಕ್ಕಿಗೆ ಮಂಗಳೂರಿನಿಂದ ವೈಷ್ಣೋದೇವಿ ದೇವಾಲಯದ ದರ್ಶನಕ್ಕೆ ನೇರ ಹೆಲಿಕಾಪ್ಟರ್ ಸೇವೆ ಒದಗಿಸುವುದಾಗಿ ನಿತಿನ್ ಎಂಬಾತ ಭರವಸೆ ನೀಡಿದ್ದ. ನಂತರ ಖಾಸಗಿ ಹೆಲಿಕಾಪ್ಟರ್ ಬುಕ್ಕಿಂಗ್ ಗೆ 38060 ರೂ. ಕೇಳಿದ್ದ. ಅದರಂತೆ ಟೆಕ್ಕಿ ನಿತಿನ್ ಕಳುಹಿಸಿದ ಕ್ಯೂ ಆರ್ ಕೋಡ್ ಗೆ ಟೆಕ್ಕಿ ಹಣ ಪಾವತಿಸಿದ್ದ. ನಂತರ ನಿತಿನ್ ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇಷ್ಟೆಲ್ಲ ನಡೆದ ಮೇಲೆ ಟೆಕ್ಕಿಗೆ ತಾನು ಮೋಸ ಹೋಗಿರುವುದು ಗಮನಕ್ಕೆ ಬಂತು. ಟೆಕ್ಕಿ ವೈಷ್ಣೋದೇವಿ ದೇಗುಲ ಸಂಪರ್ಕಿಸಿದಾಗ ನಿತಿನ್ ಎಂಬ ನಮ್ಮ ಪ್ರತಿನಿಧಿ ಯಾರೂ ಇಲ್ಲ ಎಂದು ಮಾಹಿತಿ ನೀಡಿದ್ದಾರೆ. ಮೋಸ ಹೋದ ಟೆಕ್ಕಿ ಮಂಗಳೂರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.














