ಇತ್ತೀಚಿನ ಸುದ್ದಿ
ಮಂಗಳೂರು–ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ರೈಲು ಮತ್ತೆ ಶುರು?: ಹೊಸ ವೇಳಾಪಟ್ಟಿಗೆ ಸಿದ್ಧತೆ
25/08/2021, 09:36
ಮಂಗಳೂರು(reporterkarnataka.com):
ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮಂಗಳೂರು–ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ರೈಲು ಮತ್ತೆ ಶುರುವಾಗಲಿದ್ದು, ಹೊಸ ವೇಳಾಪಟ್ಟಿ ಸಿದ್ದವಾಗುತ್ತಿದೆ.
ರೈಲು ಆರಂಭದ ಬಗ್ಗೆ ಈಗಾಗಲೇ ನೈರುತ್ಯ ರೈಲ್ವೆ ಪ್ರಸ್ತಾವ ಸಲ್ಲಿಸಿದ್ದು, ಇದೀಗ ವೇಳಾಪಟ್ಟಿಯನ್ನು ಪರಿಷ್ಕರಿಸುವಂತೆ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮನವಿ ಮಾಡಿದ್ದಾರೆ.
ಹೊಸ ಪ್ರಸ್ತಾವದ ಪ್ರಕಾರ ರೈಲು ಮಂಗಳೂರು ಜಂಕ್ಷನ್ ನಿಲ್ದಾಣಕ್ಕೆ ಮಧ್ಯಾಹ್ನ 12.40ಕ್ಕೆ ಬರಲಿದ್ದು, ಸಂಜೆ 4.30ಕ್ಕೆ ಇಲ್ಲಿಂದ ಹೊರಡಲಿದೆ. ಈ ವೇಳಾಪಟ್ಟಿಯಿಂದ ಕರಾವಳಿಯ ಜನರಿಗೆ ತೊಂದರೆ ಆಗಲಿದೆ. ಈಗಾಗಲೇ ರೈಲ್ವೆ ಬಳಕೆದಾರರ ಸಂಘ, ಸಾರ್ವಜನಿಕರಿಗೆ ನೈರುತ್ಯ ರೈಲ್ವೆಗೆ ಮನವಿ ಸಲ್ಲಿಸಲಾಗಿದ್ದು, ವೇಳಾಪಟ್ಟಿ ಪರಿಷ್ಕರಿಸುವಂತೆ ವಿನಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಗಳೂರು–ವಿಜಯಪುರ ರೈಲಿನ ವೇಳಾಪಟ್ಟಿ ಪರಿಷ್ಕರಿಸಬೇಕು. ಈ ರೈಲು ಬೆಳಿಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್ ತಲುಪಬೇಕು. ಸಂಜೆ 5.30ಕ್ಕೆ ಇಲ್ಲಿಂದ ಹೊರಡುವಂತೆ ಮಾಡಬೇಕು. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದ್ದಾರೆ.
ಈ ವೇಳಾಪಟ್ಟಿಯಲ್ಲಿ ರೈಲು ನಿಲುಗಡೆಗೆ ಅನಾನುಕೂಲ ಆದಲ್ಲಿ, ರೈಲನ್ನು ಬಂದರಿನ ಗೂಡ್‌ಶೆಡ್ ಯಾರ್ಡ್ ಅಥವಾ ಉಳ್ಳಾಲ ನಿಲ್ದಾಣ ಗಳಲ್ಲಿ ನಿಲುಗಡೆ ಮಾಡಲು ಅವಕಾಶ ವಿದೆ. ಸಮಯಕ್ಕೆ ಸರಿಯಾಗಿ ಹೊರ ಡುವ ನಿಲ್ದಾಣಕ್ಕೆ ತರಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ