ಇತ್ತೀಚಿನ ಸುದ್ದಿ
ಮಂಗಳೂರಿನ ವರುಣ್ ಡಿ’ಕೋಸ್ಟಾಗೆ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ: ಥೈಲ್ಯಾಂಡಿನಲ್ಲಿ ನಡೆದ ಸ್ಪರ್ಧೆ
14/08/2024, 20:15
ಮಂಗಳೂರು(reporterkarnataka.com): ಕಡಲನಗರಿ ಮಂಗಳೂರು ಮೂಲದ ವರುಣ್ ಡಿ’ಕೋಸ್ಟಾ ಥೈಲ್ಯಾಂಡಿನಲ್ಲಿ ನಡೆದ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ ಗೆದ್ದಿದ್ದಾನೆ.
ಮಂಗಳೂರು ಮೂಲದ ಬಾಲ ಪ್ರತಿಭೆ ವರುಣ್ ಡಿ’ಕೋಸ್ಟಾ ಥೈಲ್ಯಾಂಡಿನಲ್ಲಿ ನಡೆದ ಪ್ರಖ್ಯಾತ ಮಿಸ್ಟರ್ ಟೀನ್ ಸೂಪರ್ ಗ್ಲೋಬ್ ಸ್ಪರ್ಧೆಯಲ್ಲಿ ವಿಜೇತನಾಗಿ, ದೇಶಕ್ಕೆ ಗರಿಮೆ ತಂದಿದ್ದಾನೆ. ಈ ಸ್ಪರ್ಧೆ ಪ್ರತಿವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫ್ಯಾಷನ್, ಮಾಡೆಲಿಂಗ್ ಹಾಗೂ ಪ್ರತಿಭಾ ಪ್ರದರ್ಶನಗಳ ಮೂಲಕ ಯಶಸ್ವಿಯಾಗಿ ನಡೆಯುತ್ತದೆ.
ಈ ವರ್ಷ ನಡೆದ ಸ್ಪರ್ಧೆಯಲ್ಲಿ, ಅಮೇರಿಕಾ, ಲೆಬನಾನ್, ಅರ್ಮೇನಿಯಾ, ಯುಎಇ, ಓಮನ್, ಥೈಲ್ಯಾಂಡ್, ಮಲೇಶಿಯಾ, ಶ್ರೀಲಂಕಾ, ಇಂಡೋನೇಷ್ಯಾ, ವಿಯೆಟ್ನಾಂ, ನೇಪಾಳ ಸೇರಿದಂತೆ ಹಲವಾರು ದೇಶಗಳಿಂದ ಭಾಗವಹಿಸಿದ ಸ್ಪರ್ಧಿಗಳು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ವರುಣ್ ಜಯಯಾತ್ರೆ ಭಾರತದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆರಂಭವಾಯಿತು. ದೇಶಾದ್ಯಂತ ಇರುವ ಸ್ಪರ್ಧಿಗಳೊಂದಿಗೆ ಕಠಿಣ ಸ್ಪರ್ಧೆಯಲ್ಲಿ ತೊಡಗಿಕೊಂಡು, ಅಂತಿಮವಾಗಿ ಅವರು ವಿಜೇತರಾಗಿ, ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರತಿನಿಧಿಸಲು ಅವಕಾಶ ಪಡೆದುಕೊಂಡಿದ್ದಾನೆ.
ವರುಣ್, ಪ್ರಸ್ತುತ ಮಂಗಳೂರು ಬಜ್ಪೆ ಸೈಂಟ್ ಜೋಸೆಫ್ ಹೈಸ್ಕೂಲ್‌ನ 8ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಹಲವಾರು ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದಾನೆ ಮತ್ತು ಜಾಹೀರಾತು ಶೂಟುಗಳಲ್ಲಿ ಭಾಗವಹಿಸುತ್ತಿದ್ದಾನೆ. ಆತನ ಯಶಸ್ಸು ಕಠಿಣ ಪರಿಶ್ರಮ ಮತ್ತು ತಾಯಿ-ತಂದೆಯಾದ ಲಿಡಿವಿನ್ ಡಿ’ಕೋಸ್ಟಾ ಮತ್ತು ವಿನ್ಸೆಂಟ್ ಡಿ’ಕೋಸ್ಟಾ ಅವರ ನಿರಂತರ ಬೆಂಬಲದಿಂದ ಸಾಧ್ಯವಾಗಿದೆ.
ವರೂಣ್ ತರಬೇತಿ ಅತ್ಯಂತ ಶ್ರೇಷ್ಠವಾಗಿತ್ತು. ವಿಜೇ ಡಿಕ್ಸನ್, ಯಶಸ್ವಿನಿ ದೇವಾಡಿಗ, ಸುಧೀರ್ ಉಳ್ಳಾಲ್, ಪ್ರಮೋದ್ ಅಲ್ವಾ, ಕೌಶಿಕ್ ಸುವರ್ಣ, ಸುಮಿತ್, ಕಿಂಗ್ಸ್ ಡ್ಯಾನ್ಸ್ ಅಕಾಡೆಮಿ ನ ಸೂರೇಶ್ ಮುಕುಂದ್, ನೃತ್ಯ ಶಕ್ತಿ ನ ಶಕ್ತಿ ಮೋಹನ್, ಬಿಗ್ ಡ್ಯಾನ್ಸ್ ಸೆಂಟರ್, ಸ್ಪಾಟ್ ಲೈಟ್ ಅಕಾಡೆಮಿ, ಟೆರೆನ್ಸ್ ಲೆವಿಸ್ ಡ್ಯಾನ್ಸ್ ಅಕಾಡೆಮಿ, ಶ್ವೇತಾ ಅರೇಹೋಳೆ, ಪ್ರಮೋದ್ ಅಲ್ವಾ, ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ನ ನಿತಿನ್, ಓಷನ್ ಕಿಡ್ಸ್ ನ ಚರಣ್, ಎನ್ ಪಿ ಸ್ಟುಡಿಯೋ ನ ನಿಕ್ಕಿ ಪಿಂಟೋ, ಆರ್ಯನ್ ಸ್ಟುಡಿಯೋ ನ ನವೀನ್ ಆರ್ಯನ್, ಮುಂಬೈನ ಜೋರ್ಡನ್ ಮತ್ತು ಲವಾನ್ಸ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ್ದಾನೆ. ವರುಣ್ ನ ಉಡುಪುಗಳನ್ನು ಹೇರಾ ಪಿಂಟೋ ಕೂಟ್ಯೂರ್ ವಿನ್ಯಾಸಗೊಳಿಸಿದ್ದರು.
ಕಳೆದ ವರ್ಷ ಮಿಸ್ ಟೀನ್ ಸೂಪರ್ ಗ್ಲೋಬ್ ಪ್ರಶಸ್ತಿ ಗೆದ್ದ ಯಶಸ್ವಿನಿ ದೇವಾಡಿಗ ಕೂಡ ಮಂಗಳೂರು ಮೂಲದವಳಾಗಿದ್ದಾಳೆ.