ಇತ್ತೀಚಿನ ಸುದ್ದಿ
Mangaluru | ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರಕ್ಕೆ ರಾಜ್ಯ ಇಂಧನ ಸಚಿವ ಕೆ. ಜೆ. ಜಾರ್ಜ್ ಭೇಟಿ: ವಿಶೇಷ ಪ್ರಾರ್ಥನೆ ಸಲ್ಲಿಕೆ
06/10/2025, 20:46

ಮಂಗಳೂರು(reporterkarnataka.com): ನಗರದ ಬೋಂದೆಲ್ ಸಂತ ಲಾರೆನ್ಸ್ ಪುಣ್ಯ ಕ್ಷೇತ್ರಕ್ಕೆ ರಾಜ್ಯ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು ಭೇಟಿ ನೀಡಿದರು.
ವಂದನೀಯ ಧರ್ಮ ಗುರು ಪೀಟರ್ ಗೊನ್ಸಲ್ವಿಸ್ ಸ್ವಾಗತ ತಿಸಿ ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ವಂದನೀಯ ಧರ್ಮ ಗುರು ಲಾರೆನ್ಸ್ ಕುತಿನ್ಹ ಪಾಲನ ಮಂಡಳಿ ಉಪದೇಕ್ಷ ಜಾನ್ ಡಿಸಿಲ್ವ ಮತ್ತು ಸದಸ್ಯರಾದ ರೂಡಿ ಪಿಂಟೋ ಅವರು ಸಚಿವರಿಗೆ ಶಾಲೂ, ಹೂಗುಚ್ಚ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ. ಆರ್. ಲೋಬೊ, ಮಂಗಳೂರು ವಿದ್ಯುತ್ ನಿಗಮ ಮಂಡಳಿ ಅಧ್ಯಕ್ಷ ಹರೀಶ್ ಕುಮಾರ್, ರಚನಾ ಅಧ್ಯಕ್ಷ ಜಾನ್ ಮೊಂತೆರೋ ಮತ್ತು ಇನ್ನಿತರರು ಉಪಸ್ಥಿತರಿದ್ದರು.