1:48 AM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಮಂಗಳೂರು ಧರ್ಮ ಪ್ರಾಂತ್ಯದ ಮೆಗಾ ಬೈಬಲ್ ಸಮ್ಮೇಳನ: 2ನೇ ದಿನವೂ ಅಪಾರ ಜನಸ್ತೋಮ

22/03/2025, 08:58

ಮಂಗಳೂರು(reporterkarnataka.com): ಮೆಗಾ ಬೈಬಲ್ ಕನ್ವೆನ್ಷನ್ 2025 ಎರಡನೆ ದಿನದ ಭಕ್ತಿಯ ಉತ್ಸಾಹ ನಗರದ ಕುಲಶೇಖರದ ಹೋಲಿ ಕ್ರಾಸ್ ಚರ್ಚ್, ಕೋರ್ಡೆಲ್ ಮೈದಾನದಲ್ಲಿ ಎರಡನೇ ದಿನವೂ ಯಶಸ್ವಿಯಾಗಿ ನಡೆಯಿತು.
ಮಂಗಳೂರು ಧರ್ಮಪ್ರಾಂತ್ಯದ ಸೇವಾ ಸಂಚಲನ (MDSC) ಮತ್ತು ಬೈಬಲ್ ಆಯೋಗದ ನೇತೃತ್ವದಲ್ಲಿ ನಡೆಯುತ್ತಿರುವ ಈ ಧಾರ್ಮಿಕ ಸಮ್ಮೇಳನ ಸಾವಿರಾರು ಭಕ್ತರಿಗೆ ನಂಬಿಕೆ, ಆರೈಕೆ ಮತ್ತು ಪರಿವರ್ತನೆಯ ಬೆಳಕು ಮೂಡಿಸುತ್ತಿದೆ.
ಭಾವೈಕ್ಯತೆಯ ಪವಿತ್ರ ಬಲಿಪೂಜೆ ಮಂಗಳೂರು ಧರ್ಮಾಧ್ಯಕ್ಷರಾದ ರೈ ರೆವ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ವಂದನೀಯ ಜೇಮ್ಸ್ ಡಿಸೋಜಾ, ವಾಮಂಜೂರ್ ಚರ್ಚ್ ಧರ್ಮಗುರುಗಳು, ವಂದನೀಯ ಫ್ರಾಂಕ್ಲಿನ್ ಡಿಸೋಜಾ, ಕರ್ನಾಟಕ ಪ್ರಾದೇಶಿಕ ಸೇವಾ ಕಮ್ಯೂನಿಯನ್, ವಂದನೀಯ ಕ್ಲಿಫರ್ಡ್ ಫೆರ್ನಾಂಡಿಸ್ ಕುಲಶೇಖರ ಚರ್ಚ್ ಧರ್ಮಗುರು ಮತ್ತು MDSC ಆಧ್ಯಾತ್ಮಿಕ ನಿರ್ದೇಶಕರು, ವಂದನೀಯ ವಿನ್ಸೆಂಟ್ ಸಿಕ್ವೇರಾ, ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಕಾರ್ಯದರ್ಶಿ, ವಂದನೀಯ ವಿನ್ಸೆಂಟ್ ಡಿಸೋಜಾ, ವಂದನೀಯ ಪಾವ್ಲ್ ಡಿಸೋಜಾ, ವಂದನೀಯ ಅನಿಲ್ ಐವನ್ ಫೆರ್ನಾಂಡಿಸ್, ವಂದನೀಯ ವಿಜಯ್ ಮೊಂತೆರೋ, ಮತ್ತು ಫಾ. ಅಲ್ವಿನ್ ಡಿ’ಕುನ್ಹಾ ಪೂಜೆಯಲ್ಲಿ ಉಪಸ್ಥಿತರಿದ್ದರು.
ಧರ್ಮಾಧ್ಯಕ್ಷರ ಸ್ಫೂರ್ತಿದಾಯಕ ಸಂದೇಶ
ಪವಿತ್ರ ಬಲಿಪೂಜೆಯ ಸಂದರ್ಭದಲ್ಲಿ ಬಿಷಪ್ ಪೀಟರ್ ಪಾವ್ಲ್ ಸಲ್ದಾನ್ಹಾ ನಂಬಿಕೆ, ಶಾಂತಿ ಮತ್ತು ದೇವರ ವಾಕ್ಯದ ಮಹತ್ವದ ಕುರಿತು ಸಂದೇಶ ನೀಡಿದರು:
“ದೇವರ ವಾಕ್ಯ ನಮ್ಮೆಲ್ಲರಿಗಾಗಿ ನೀಡಿದ ಅಮೂಲ್ಯ ಕೊಡುಗೆ. ಇದು ಶ್ರೇಷ್ಟ ಭಂಡಾರ, ಶ್ರೇಷ್ಠ ಬೆಳಕು. ದೇವರ ವಾಕ್ಯ ಸತ್ಯ ಮತ್ತು ನೀತಿಯ ಪ್ರತೀಕ. ಈ ಸಮ್ಮೇಳನವು ನಮ್ಮನ್ನು ನ್ಯಾಯ, ಶಾಂತಿ, ಸತ್ಯದ ಮಾರ್ಗದಲ್ಲಿ ಸಾಗುವಂತೆ ಪ್ರೇರೇಪಿಸುತ್ತದೆ. ಈ ಸಮಾಗಮವು ನಮ್ಮ ಅಸಲಿಯತ್ತನ್ನು ಅರಿಯಲು, ನಮ್ಮ ದುರ್ಬಲತೆಯನ್ನು ತಿಳಿದು, ನವೀಕೃತ ಜೀವನವನ್ನು ಸ್ವೀಕರಿಸಲು ನಮ್ಮನ್ನು ಸಿದ್ಧಗೊಳಿಸಲಿ.”
ಆಧ್ಯಾತ್ಮಿಕ ಉಪದೇಶ, ಭಕ್ತಿಗಾನ ಮತ್ತು ಆರಾಧನೆ
ಇಂದಿನ ಮುಖ್ಯ ಆಕರ್ಷಣೆ ಕೇರಳದ ಆನಕಾರ, ಮೇರಿಯನ್ ರಿಟ್ರೀಟ್ ಸೆಂಟರ್ನ, ಫಾ. ಡೊಮಿನಿಕ್ ವಾಲನ್ಮಾನಲ್ ಅವರ ಧ್ಯಾನ ಅಧಿವೇಶನ ಆಗಿತ್ತು. ಅವರ ಮಾರ್ಗದರ್ಶನದಲ್ಲಿ ಭಕ್ತರು ಭಕ್ತಿಗಾನ, ಆಧ್ಯಾತ್ಮಿಕ ಉಪದೇಶ, ಬಿಡುಗಡೆ ಪ್ರಾರ್ಥನೆಗಳು ಹಾಗೂ ಆರಾಧನೆಯಲ್ಲಿ ಪಾಲ್ಗೊಂಡರು. ಅವರ ಪ್ರವಚನವು ನಂಬಿಕೆಯ ಪರಿವರ್ತನಾ ಶಕ್ತಿ ಮತ್ತು ದೇವರ ವಾಕ್ಯದ ಆಪ್ತ ಅನುಭವವನ್ನು ತಲುಪಿಸಿತು.
ಭಕ್ತಿಗಾನ ಸೇವೆ ಬ್ರ. ಕೆವನ ಡಿಸೋಜಾ, MDSC ಚೆರೆಮೆನ್, ಹಾಗೂ ಬ್ರ. ಒಜ್ಮಂಡ್ ಲೋಬೋ ಮತ್ತು ತಂಡ ಅವರ ನೇತೃತ್ವದಲ್ಲಿ ನಡೆಯಿತು. ಕೋರ್ಡೆಲ್ ಚರ್ಚ್ ಗಾಯಾನ ವ್ರುಂದ ಭಾವನಾತ್ಮಕ ಭಕ್ತಿಗೀತೇಗಳ ಮೂಲಕ ಭಕ್ತರನ್ನು ಆಧ್ಯಾತ್ಮಿಕತೆಯ ಆನುಭವ ನೀಡಿದರು.


ಪಾಪ ನಿವೇದನೆ ಸಂಸ್ಕಾರ ಮತ್ತು ಆಧ್ಯಾತ್ಮಿಕ ಮಾರ್ಗದರ್ಶನ
ಬೆಳಗಿನಿಂದ ಪಾಪ ನಿವೇದನೆ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ, ಎಲ್ಲಾ ಭಕ್ತರಿಗೆ ಆಂತರಿಕ ಶಾಂತಿ ಮತ್ತು ಪುನರಜೀವನದ ಅನುಭವ ಪಡೆಯಲು ಅವಕಾಶ ನೀಡಲಾಗಿತ್ತು. ಈ ಕಾರ್ಯವು ಭಕ್ತರನ್ನು ದೇವರೊಂದಿಗೆ ಇನ್ನಷ್ಟು ಆತ್ಮೀಯರಾಗಲು ಪ್ರೇರೇಪಿಸಿತು.
ಸಾವಿರಾರು ಭಕ್ತರ ಪ್ರಭಾವಿ ಭಾಗಿ ಪಾತ್ರವೊಂದಿಗೆ, ಮೆಗಾ ಬೈಬಲ್ ಕನ್ವೆನ್ಷನ್ 2025 ಭಕ್ತರಲ್ಲಿ ಆತ್ಮೀಯ ನಂಬಿಕೆ ಮತ್ತು ಪರಿವರ್ತನೆಯ ಬೆಳಕನ್ನು ಹಂಚುತ್ತಿದೆ. ಮೂರನೇ ದಿನವೂ ಹೊಸ ಆಧ್ಯಾತ್ಮಿಕ ಅನುಭವ, ಗುಣಮುಖತೆ ಪ್ರಾರ್ಥನೆಗಳು ಮತ್ತು ದೇವರ ಅನುಗ್ರಹದ ಕ್ಷಣಗಳನ್ನು ನೀಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು