ಇತ್ತೀಚಿನ ಸುದ್ದಿ
ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14 ದಿನಗಳ ಹಸುಳೆ ನಾರಾಯಣ ಹೃದಯಾಲಯಕ್ಕೆ
18/07/2025, 19:57

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ಕೇವಲ 14 ದಿನಗಳ ಹಸುಳೆಯನ್ನು ಸುಳ್ಯದ ಕೆವಿಜಿ ಆಸ್ಪತ್ರೆಯ ಆಂಬುಲೆನ್ಸ್ ಕೇವಲ 4 ಗಂಟೆಗಳಲ್ಲಿ ಮಂಗಳೂರು -ಬೆಂಗಳೂರು ಪ್ರಯಾಣಿಸಿದೆ.
ಮಂಗಳೂರು ಮೂಲದ ಮಗು ತೀವ್ರ ರೀತಿಯ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿತ್ತು, ಚಿಕಿತ್ಸೆಗೆಂದು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆ ಗೆ ಹೋಗುವಂತೆ ತಿಳಿಸಿದ್ದರು. ತಕ್ಷಣವೇ ಎಲ್ಲಾ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಹಿಂದೆ ಹಲವು ಜೀವ ರಕ್ಷಕ ಕಾರ್ಯ ಮಾಡಿರುವ ಚಾಲಕ ಹನೀಫ್ ನ ಮಂಗಳೂರು, ಮಡಿಕೇರಿ, ಕುಶಾಲನಗರ ಮಾರ್ಗವಾಗಿ ಮೈಸೂರ್ ಮಾರ್ಗವಾಗಿ ಬೆಂಗಳೂರಿಗೆ ಸೂಕ್ತ ಜೀರೋ ಟ್ರಾಫಿಕ್ ನಲ್ಲಿ ತೆರಳಿ ಜೀವ ರಕ್ಷಿಸಿದ್ದಾರೆ.