6:01 AM Monday12 - May 2025
ಬ್ರೇಕಿಂಗ್ ನ್ಯೂಸ್
Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ…

ಇತ್ತೀಚಿನ ಸುದ್ದಿ

ಮನೆಯಂಗಳದಲ್ಲಿ ಪುನೀತ್ ರಾಜ್ ಕುಮಾರ್  ಪುತ್ಥಳಿ ನಿರ್ಮಾಣ: ಅಭಿಮಾನ ಮೆರೆದ ಅಭಿಮಾನಿ!

28/12/2021, 13:31

ವಿ.ಜಿ. ವೃಷಭೇಂದ್ರ ಕೂಡ್ಲಿಗಿ ವಿಜಯ ನಗರ

info.reporterkarnataka@gmail.com

ಜಿಲ್ಲೆಯ ಕೂಡ್ಲಿಗಿ ತಾಲೂಕು ಸಿದ್ದಾಪುರ ವಡ್ಡರಟ್ಟಿ ಯಲ್ಲಿ ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಕಟ್ಟಾ ಅಭಿಮಾನಿಗಳಾದ ಪೂಜಾರಿ ರಾಮಜ್ಜರ ವಂಶದ ಸಮಾಜ ಸೇವಕ ಆರ್.ಟಿ.ನಾಗರಾಜ್ ಹಾಗೂ

ಮಲ್ಲಮ್ಮ ನವರು ತಮ್ಮ ಮನೆಯಂಗಳದಲ್ಲಿ ಪುನೀತ್ ರಾಜಕುಮಾರ್ ರವರ ಪುತ್ಥಳಿ ಪ್ರತಿಷ್ಠಾಪಿಸಿ ಅಭಿಮಾನ ಮೆರೆದಿದ್ದಾರೆ.

ಪುನೀತ್ ರಾಜಕುಮಾರ್ ಅವರ ನೂತನ ಪುತ್ಥಳಿಯನ್ನು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ  ಬಾಬು ಹಾಗೂ ಕೆಪಿಸಿಸಿ ಸದಸ್ಯ ಲೋಕೇಶ್ ವಿ ನಾಯಕ ನೇತೃತ್ವದಲ್ಲಿ ಅನಾವರಣ ಗೊಳಿಸಲಾಯಿತು. ಸಮಾಜ ಸೇವಕ ಆರ್.ಟಿ.ನಾಗರಾಜ ಅವರು ಮಾತನಾಡಿ, ಪುನೀತ್ ರಾಜಕುಮಾರ ಅದ್ಬುತ ನಟರಾಗಿದ್ದಾರೆ ಜೊತೆಗೆ ವೈಶಿಷ್ಟಪೂರ್ಣ ಸಮಾಜ ಸೇವಕ ಕೂಡ ಆಗಿದ್ದರು.

ಅವರು ಇಡೀ ಯುವ ಪೀಳಿಗೆಗೆ ಮಾದರಿ ಯುವರಾಜರಾಗಿದ್ದಾರೆ. ಈ ಮೂಲಕ ಅವರು ಸದಾ ಜನಮಾನಸದಲ್ಲಿರುತ್ತಾರೆ. ಅವರು ಇಹಲೋಕ  ಅಗಲಿರಬಹುದು ಆದ್ರೆ ಆವರು ತಮ್ಮ ಸೇವಾ ಕುರುಹುಗಳ ಮೂಲಕ ಅಮರರಾಗಿದ್ದಾರೆ ಎಂದರು. ಪುನೀತ್ ರು ಬಾಲ ನಟನಿದ್ದಾಗಲಿಂದಲೂ ತಾವು ಅವರ ಅಭಿಮಾನಿಯಾಗಿದ್ದು, ಆಗಿನಿಂದ ಈ ವರೆಗೆ ಪುನೀತ್ ರಾಜ್  ಅಭಿನಯಿಸಿರುವ ಪ್ರತಿ ಚನಚಿತ್ರಗಳನ್ನು,ಕುಟುಂಬ ಸದಸ್ಯರೊಡಗೂಡಿ  ವೀಕ್ಷಿಸಿದ್ದೇನೆ. ಪುನೀತ್ ರಂತೆ ತಾವೂ ಕೂಡ ತಮ್ಮ ಶಕ್ತಿ ಅನುಸಾರ  ಸಮಾಜ ಸೇವೆ ಮಾಡುವ ಇಂಗಿತವನ್ನು ನಾಗರಾಜ್ ವ್ಯಕ್ತಪಡಿಸಿದ್ದಾರೆ. 

ವೈದ್ಯ ಎಸ್.ಪಿ. ಪ್ರದೀಪ್ ಕುಮಾರ್ ಹಾಗೂ  ಸೋಮಶೇಖರ್, ಆರ್.ವಿ. ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಗ್ರಾಮದ ಹಿರಿಯರು ಹಾಗೂ ನೂರಾರು ಯುವಕರು,ನೂರಾರು ಪುನೀತ್ ರಾಜಕುಮಾರ್ ಅಭಿಮಾನಿಗಳು  ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  

ಇತ್ತೀಚಿನ ಸುದ್ದಿ

ಜಾಹೀರಾತು