ಇತ್ತೀಚಿನ ಸುದ್ದಿ
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ ಡಿಮ್ಯಾಂಡ್; ದೂರು ದಾಖಲು
13/12/2025, 18:14
ಗಿರಿಧರ್ ಕೊಂಪುಳಿರ ಮಡಿಕೇರಿ
info.repprterkarnataka@gmail.com
ಸಾಮಾಜಿಕ ಜಾಲತಾಣದಿಂದ ಮಡಿಕೇರಿಯ ಆಂಟಿ ಯೊಂದಿಗೆ ಸ್ನೇಹ ಬೆಳೆದು ಭೇಟಿ ಮಾಡಲೆಂದು ಮಂಡ್ಯದ ಮದ್ದೂರುನಿಂದ ಬಂದಿದ್ದ ವ್ಯಕ್ತಿಯೊಬ್ಬನಿಗೆ ಕಳೆದ ರಾತ್ರಿ ಹಿಗ್ಗಾಮುಗ್ಗ ಥಳಿಸಿ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮೂವರು ಯುವಕರು ಹಾಗೂ ಆಂಟಿ ಸೇರಿ ಮಂಡ್ಯದ ವ್ಯಕ್ತಿಯನ್ನು ಹನಿ ಟ್ರ್ಯಾಪ್ ಮಾಡಿದ್ದು ಮಡಿಕೇರಿಯ ಮಂಗಳಾದೇವಿ ನಗರದ ಆಂಟಿ ಮನೆಯಲ್ಲಿ ಲಾಕ್ ಮಾಡಿ ಬೆಳಗ್ಗಿನ ವರೆಗೂ ಹಿಂಸೆ ನೀಡಿದ್ದು ಬಳಿಕ ಅರೆ ಬೆತ್ತಲಾಗಿ ಯುವಕ ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿದ್ದಾನೆ.




ನಿನ್ನೆ ರಾತ್ರಿ ಮಂಡ್ಯ ಜಿಲ್ಲೆ ಮದ್ದೂರಿನ ಯುವಕ ಮಹದೇವ ಎಂಬುವನನ್ನು ಮನೆಯಲ್ಲಿ ಕೂಡಿಹಾಕಿ ಮೂವರು ಹಣದ ಬೇಡಿಕೆ ಇಟ್ಟು ರಾತ್ರಿ ಇಡೀ ಅತನನ್ನು ಥಳಿಸಿದ್ದಾರೆ. ಇಂದು ಬೆಳಗ್ಗೆ ಅತ ತಪ್ಪಿಸಿಕೊಂಡು ಓಡಿ ಬರುತ್ತಿದ್ದಾಗ, ಆಟೋರಿಕ್ಷದಲ್ಲಿ ಆತನನ್ನು ಹಿಂಬಾಲಿಸಿ ಕಿಡ್ನಾಪ್ ಮಾಡಲು ಕೂಡ ಯತ್ನಿಸಿ, ಅಲ್ಲಿಂದಲೂ ತಪ್ಪಿಸಿಕೊಂಡು ಠಾಣೆಗೆ ಬಂದಿದ್ದಾನೆ ಎಂದು ಹೇಳಲಾಗಿದೆ.
ಮಡಿಕೇರಿ ನಗರ ಠಾಣೆಯಲ್ಲಿ ಯುವಕನ ದೂರು ಸ್ವೀಕರಿಸಿ ವಿಚಾರಣೆ ಕೈಗೊಂಡ ಪೊಲೀಸರು ಮಹಿಳೆ ಮತ್ತು ಯುವಕರ ಪತ್ತೆಗೆ ಬಲೆ ಬೀಸಿದ್ದಾರೆ.












